ಪೂಜಾ ಗಾಂಧಿ ಹೋಟೆಲ್ ಬಿಲ್ ಪಾವತಿಸಿದ ಬಿಜೆಪಿ ನಾಯಕ

ಮುಂಗಾರು ಮಳೆ ಖ್ಯಾತಿಯ ಸ್ಯಾಂಡಲ್ ವುಡ್ ನಟಿ ಪೂಜಾ ಗಾಂಧಿ ಅವರ ಹೋಟೆಲ್ ಬಾಕಿ ಬಿಲ್ ಅನ್ನು ಅವರ ಸ್ನೇಹಿತ, ಬಿಜೆಪಿ ನಾಯಕ...
ಪೂಜಾ ಗಾಂಧಿ
ಪೂಜಾ ಗಾಂಧಿ
ಬೆಂಗಳೂರು: ಮುಂಗಾರು ಮಳೆ ಖ್ಯಾತಿಯ ಸ್ಯಾಂಡಲ್ ವುಡ್ ನಟಿ ಪೂಜಾ ಗಾಂಧಿ ಅವರ ಹೋಟೆಲ್ ಬಾಕಿ ಬಿಲ್ ಅನ್ನು ಅವರ ಸ್ನೇಹಿತ, ಬಿಜೆಪಿ ನಾಯಕ ಅನಿಲ್ ಪಿ ಮೆಣಸಿನಕಾಯಿ ಮಂಗಳವಾರ ಪಾವತಿಸಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.
ನಟಿ ಪೂಜಾ ಗಾಂಧಿ ಹಾಗೂ ಅನಿಲ್ ಮೆಣಸಿನಕಾಯಿ ಕುಮಾರ ಕೃಪಾ ರಸ್ತೆಯಲ್ಲಿರುವ ಪ್ರತಿಷ್ಠಿತ ಲಲಿತ್ ಅಶೋಕ್ ಹೋಟೆಲ್ ನಲ್ಲಿ ಏಪ್ರಿಲ್ 2016ರಿಂದ ಮಾರ್ಚ್ 2017ರ ವರೆಗೆ ರೂಮ್ ಒಂದನ್ನು ಬಾಡಿಗೆಗೆ ಪಡೆದಿದ್ದರು. ಹೋಟೆಲ್ ಬಿಲ್ ತೆರಿಗೆ ಸೇರಿ 26,22,344 ರೂಪಾಯಿ ಆಗಿತ್ತು. ಈ ಪೈಕಿ 22,83,129 ರೂಪಾಯಿ ಪಾವತಿಸಲಾಗಿತ್ತು. ಆದರೆ 3.5 ಲಕ್ಷ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದ್ದ ಆರೋಪದಲ್ಲಿ ಪೂಜಾ ಗಾಂಧಿ ಮತ್ತು ಅನಿಲ್ ವಿರುದ್ಧ ದಿ ಲಲಿತ್ ಅಶೋಕ್ ಹೋಟೆಲ್ ಸಿಬ್ಬಂದಿ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಇಬ್ಬರೂ ತಮ್ಮದೇನೂ ತಪ್ಪಿಲ್ಲ' ಎಂದೇ ವಾದಿಸಿದ್ದರು. ಅದರೆ, ಇದೀಗ ಅನಿಲ್ ಮೆಣಸಿನಕಾಯಿ ಅವರು ಹೋಟೆಲ್‌ಗೆ ಬಾಕಿ ಮೊತ್ತ ಪಾವತಿಸಿದ್ದಾರೆ. ಈ ಹಿನ್ನಲೆಯಲ್ಲಿ ದಾಖಲಾಗಿದ್ದ ದೂರು ವಾಪಸ್ ಪಡೆಯಲಾಗಿದ್ದು ಕೇಸ್ ಸುಖಾಂತ್ಯ ಕಂಡಿದೆ. 
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪೂಜಾ ಗಾಂಧಿ, ನಾವು ಬಾಕಿ ಬಿಲ್ ಪಾವತಿಸಿದ್ದೇವೆ. ಈ ಕುರಿತು ನಾನು ಹೋಟೆಲ್ ಜನರಲ್ ಮಾನೇಜರ್ ಗೆ ಕರೆ ಮಾಡಿ ಖಚಿತಪಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ಇದೊಂದು ಬೋಗಸ್ ಕೇಸ್ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com