ಹುತಾತ್ಮ ಯೋಧರ ಕುಟುಂಬಕ್ಕೆ ಬರೋಬ್ಬರಿ 175 ಎಕರೆ ಜಮೀನು ದಾನ ನೀಡಿದ ಕನ್ನಡ ನಟ ಸುಮನ್!

ಹುತಾತ್ಮ ಯೋಧರ ಕುಟುಂಬಕ್ಕೆ ಹಲವರು ಅನೇಕ ರೀತಿಯಲ್ಲಿ ನೆರವಿಗೆ ಬರುತ್ತಿದ್ದಾರೆ. ಇನ್ನು ಮಂಗಳೂರು ಮೂಲದ ಕನ್ನಡ ನಟ ಸುಮನ್ ಅವರು ಹುತಾತ್ಮ...

Published: 21st March 2019 12:00 PM  |   Last Updated: 21st March 2019 12:49 PM   |  A+A-


Suman

ಸುಮನ್

Posted By : VS VS
Source : Online Desk
ಬೆಂಗಳೂರು: ಹುತಾತ್ಮ ಯೋಧರ ಕುಟುಂಬಕ್ಕೆ ಹಲವರು ಅನೇಕ ರೀತಿಯಲ್ಲಿ ನೆರವಿಗೆ ಬರುತ್ತಿದ್ದಾರೆ. ಇನ್ನು ಮಂಗಳೂರು ಮೂಲದ ಕನ್ನಡ ನಟ ಸುಮನ್ ಅವರು ಹುತಾತ್ಮ ಯೋಧರ ಕುಟುಂಬಕ್ಕೆ ಬರೋಬ್ಬರಿ 175 ಎಕರೆ ಜಮೀನನ್ನು ದಾನವಾಗಿ ನೀಡಿದ್ದಾರೆ.

ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಸಾಕಷ್ಟು ಹೆಸರು ಮಾಡಿರುವ ಸುಮನ್ ಅವರು ಈ ಬಗ್ಗೆ ಹೇಳಿದ್ದು ನಾನು ಚಿತ್ರರಂಗಕ್ಕೆ ಬಂದು ಬಹಳ ವರ್ಷಗಳಾಗಿವೆ. ಆದರೆ ಸಮಾಜಕ್ಕೆ ಅನು ಮಾಡಿದ್ದೇನೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಆಗ ನನ್ನ ಪತ್ನಿ ಸಲಹೆ ನೀಡಿದರು. ಹೈದರಾಬಾದ್ ನಗರದಿಂದ ಹೊರವಲಯದಲ್ಲಿ ಸ್ಟುಡಿಯೋ ಮಾಡಬೇಕು ಎಂದು ತೆಗೆದುಕೊಂಡ 175 ಎಕರೆ ಜಾಗ ಇದೆ. ಅದನ್ನು ಕಾರ್ಗಿಲ್ ವಾರ್ ಹೀರೋಸ್ ನೀಡೋಣ ಅಂದರು ಅದು ನನಗೂ ಸರಿ ಅಂತ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದರು.

ಆ ಜಾಗವನ್ನು ಸಮತಟ್ಟು ಮಾಡಿ ನಾವು ಹುತಾತ್ಮ ಯೋಧರ ಕುಟುಂಬಕ್ಕೆ ನೀಡುತ್ತೇವೆ. ಅವರು ಮನೆ ಕಟ್ಟಿಕೊಳ್ಳಬಹುದು. ಈ ಜಾಗ ಹೈದರಾಬಾದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಯಾದಗಿರಿ ಗುಟ್ಟ ಎಂಬ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ ಇದೆ. ಈ ಜಾಗ ಸ್ವಲ್ಪ ಗುಡ್ಡಗಳಿಂದ ಕೂಡಿದೆ. ಈ ವರ್ಷಾಂತ್ಯಕ್ಕೆ ಅದನ್ನು ಸಮತಟ್ಟಾಗಿ ಮಾಡುತ್ತೇವೆ. ಮೊದಲು ಕಾರ್ಗಿಲ್ ಯೋಧರ ಕುಟುಂಬಕ್ಕೆ ನೀಡುತ್ತಿದ್ದೇವೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp