ಮಗಳ ಮದುವೆ ಸಂಭ್ರಮದಲ್ಲಿ ಕುಟುಂಬ ಸದಸ್ಯರೊಂದಿಗೆ ಕ್ರೇಜಿಸ್ಟಾರ್ ಮಸ್ತ್ ಡ್ಯಾನ್ಸ್

ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ರವಿಚಂದ್ರನ್ ಅವರ ಮುದ್ದಿನ ಮಗಳು ಗೀತಾಂಜಲಿಯ ವಿವಾಹ ಮಹೋತ್ಸವ ಭರ್ಜರಿಯಾಗಿ ಆರಂಭವಾಗಿದೆ.
ಕುಟುಂಬ ಸದಸ್ಯರೊಂದಿಗೆ ರವಿಚಂದ್ರನ್  ನೃತ್ಯ
ಕುಟುಂಬ ಸದಸ್ಯರೊಂದಿಗೆ ರವಿಚಂದ್ರನ್ ನೃತ್ಯ
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್  ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ರವಿಚಂದ್ರನ್ ಅವರ ಮುದ್ದಿನ ಮಗಳು ಗೀತಾಂಜಲಿಯ ವಿವಾಹ ಮಹೋತ್ಸವ ಭರ್ಜರಿಯಾಗಿ ಆರಂಭವಾಗಿದೆ. 
ಅರಮನೆ ಆವರಣದಲ್ಲಿ ಇಂದು ಸಂಜೆ ಅರತಕ್ಷತೆ  ನಾಳೆ ಮೂಹೂರ್ತ ನಡೆಯಲಿದ್ದು, ಭಾರತೀಯ ಚಿತ್ರರಂಗ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ರವಿಮಾಮನ ಮಗಳ ಮದುವೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ರವಿಚಂದ್ರನ್ ಅವರು ಕುಟುಂಬದ ಸದಸ್ಯರು ಹಾಗೂ ಇತರರ ಜೊತೆಗೆ ಒಟ್ಟಾಗಿ ಹಾಡೋಂದಕ್ಕೆ ನರ್ತನ ಮಾಡುತ್ತಿರುವ ವಿಡಿಯೋ ಎಲ್ಲರ ಗಮನವನ್ನು ಸೆಳೆದಿದೆ. ಮಗಳ ಮದುವೆಯಲ್ಲಿ ಖುಷಿಯಲ್ಲಿ ಕ್ರೇಜಿಸ್ಟಾರ್ ಮಿಂದೆಳುತ್ತಿದ್ದು, ಸುಂದರವಾದ ಕನಸಿನಂತೆ ಮುದ್ದು ಪುತ್ರಿಯ ವಿವಾಹ ಮಹೋತ್ಸವವನ್ನು ಅದ್ದೂರಿಯಾಗಿ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com