ಚಂದನ್ ಶೆಟ್ಟಿ ಮಾತ್ರವಲ್ಲ, ಎಲ್ಲ ಕಲಾವಿದರಿಗೂ ಈ ಘಟನೆ ಪಾಠವಾಗಬೇಕು: ಮೈಸೂರು ಎಸ್ಪಿ ಎಚ್ಚರಿಕೆ 

ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರಿಗೆ ಗಾಯಕ ಚಂದನ್ ಶೆಟ್ಟಿ ಪ್ರೇಮ ನಿವೇದನೆ ಮಾಡಿದ್ದು ವ್ಯಾಪಕ ಸುದ್ದಿಯಾಗಿತ್ತು. ಸರ್ಕಾರಿ ಕಾರ್ಯಕ್ರಮದ ವೇದಿಕೆ ದುರುಪಯೋಗದ ಆರೋಪ ಚಂದನ್ ಶೆಟ್ಟಿ ಮೇಲೆ ಕೇಳಿಬಂದಿತ್ತು. 

Published: 08th November 2019 09:11 AM  |   Last Updated: 08th November 2019 09:11 AM   |  A+A-


Chandan Shetty proposes love

ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದ ಸಂದರ್ಭ

Posted By : Sumana Upadhyaya
Source : Online Desk

ಮೈಸೂರು: ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರಿಗೆ ಗಾಯಕ ಚಂದನ್ ಶೆಟ್ಟಿ ಪ್ರೇಮ ನಿವೇದನೆ ಮಾಡಿದ್ದು ವ್ಯಾಪಕ ಸುದ್ದಿಯಾಗಿತ್ತು. ಸರ್ಕಾರಿ ಕಾರ್ಯಕ್ರಮದ ವೇದಿಕೆ ದುರುಪಯೋಗದ ಆರೋಪ ಚಂದನ್ ಶೆಟ್ಟಿ ಮೇಲೆ ಕೇಳಿಬಂದಿತ್ತು. 


ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಂತಹ ವರ್ತನೆ ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕು ಎಂದು ಜೋಡಿಗೆ ವಾರ್ನ್ ಮಾಡಿದ್ದಾರೆ. ಇದೀಗ ಮತ್ತೆ ಜೋಡಿಗೆ ಎಚ್ಚರಿಕೆ ನೀಡಿದ್ದು, ಇಂತಹ ವರ್ತನೆ ಮರುಕಳಿಸಿದರೆ ಸರಕಾರಿ ಕಾರ್ಯಕ್ರಮದಿಂದ ನಿಮಗೆ ನಿಷೇಧ ಹೇರುತ್ತೇವೆ ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ಎಚ್ಚರಿಕೆ ನೀಡಿದ್ದಾರೆ. 


ಕೇವಲ ಚಂದನ್ ಶೆಟ್ಟಿ ಮಾತ್ರವಲ್ಲ ಯಾವ ಕಲಾವಿದರೇ ಆಗಲಿ, ಸರಕಾರಿ ವೇದಿಕೆಯನ್ನು ಖಾಸಗಿತನಕ್ಕೆ ಬಳಸಿಕೊಳ್ಳಬಾರದು ಎಂದಿದ್ದಾರೆ. ಘಟನೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಬಿಟ್ಟಿದ್ದೇವೆ. ಜಿಲ್ಲಾಧಿಕಾರಿಗಳು ಎಲ್ಲವನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಎಸ್ಪಿ ರಿಷ್ಯಂತ್ ತಿಳಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp