'ಡಿಎಡಿ' ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ಯಶ್ ಬಾಲ್ಯದ ಗೆಳೆಯ

ರಾಕಿ ಬಾಯ್ ಯಶ್ ಬಾಲ್ಯದ ಗೆಳೆಯ ಅರ್ಜುನ್ ನಿರ್ಮಿಸಿರುವ  ರಾಕಿ ಬಾಯ್ "ಡಿಎಡಿ-ದೇವರಾಜ್ ಅಲಿಯಾಸ್ ಡೇವಿಡ್"  ಎಂಬ ಚಿತ್ರವನ್ನು ರಾಧಿಕಾ ಪಂಡಿತ್-ಯಶ್ ದಂಪತಿಗಳು ಪ್ರಸ್ತುತಪಡಿಸುತ್ತಿದ್ದು....

Published: 13th November 2019 11:14 AM  |   Last Updated: 13th November 2019 11:15 AM   |  A+A-


ಅರ್ಜುನ್ ಕೃಷ್ಣ್

Posted By : Raghavendra Adiga
Source : The New Indian Express

ರಾಕಿ ಬಾಯ್ ಯಶ್ ಬಾಲ್ಯದ ಗೆಳೆಯ ಅರ್ಜುನ್ ನಿರ್ಮಿಸಿರುವ  ರಾಕಿ ಬಾಯ್ "ಡಿಎಡಿ-ದೇವರಾಜ್ ಅಲಿಯಾಸ್ ಡೇವಿಡ್"  ಎಂಬ ಚಿತ್ರವನ್ನು ರಾಧಿಕಾ ಪಂಡಿತ್-ಯಶ್ ದಂಪತಿಗಳು ಪ್ರಸ್ತುತಪಡಿಸುತ್ತಿದ್ದು ಅರ್ಜುನ್ ಕೃಷ್ಣ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಚಿತ್ರದಲ್ಲಿ ಹೊಸಬರ ದಂಡೇ ಇದ್ದು ಮಾಡಲಿಂಗ್ ಕ್ಷೇತ್ರದಿಂದ ಬಂದು ನಟನಾಗಿ ಬದ್ಲಾದ ವಿಶಾಲ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ವಿಶಾಲ್ ಗೆ ನಾಯಕಿಯಾಗಿ ಮಹಿಕಾ ಮಹಿ ಮತ್ತು ನೃತ್ಯ ಬೋಪಣ್ಣ ನಟಿಸಿದ್ದಾರೆ.

ಎಎಎ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ಬಿಡುಗಡೆಯಾಗಿದ್ದು ಮೈಸೂರಿನ ಎಂಬಿಎ ಪದವೀಧರರಾದ ಅರ್ಜುನ್ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

"ಚಿತ್ರ ನಿರ್ಮಾಣ ನನ್ನ 15-20 ವರ್ಷದ ಕನಸಾಗಿತ್ತು. ಇದೀಗ "ಡಿಎಡಿ" ಮೂಲಕ ಅದು ನನಸಾಗಿದೆ." ಅರ್ಜುನ್  ಹೇಳಿದ್ದಾರೆ. ವಿಶೇಷವೆಂದರೆ ಅರ್ಜುನ್ ಹಾಗೂ ಯಶ್ ಬಾಲ್ಯದ ಗೆಳೆಯರು. "ನಾವಿಬ್ಬರೂ ಒಟ್ತಾಗಿ ಚಿತ್ರವೊಂದರಲ್ಲಿ ಕಾಣಿಸಿಕೊಳ್ಲಬೇಕೆಂದುಕನಸು ಕಂಡಿದ್ದೆವು. ಯಶ್ ಅದಾಗಲೇ  ಯಶಸ್ಸು ಮತ್ತು ಸಾಧನೆಯ ಹಾದಿಯನ್ನು ಕಂಡುಕೊಂಡಿದ್ದಾರೆ, ಮತ್ತು ನಾನು ಸ್ವಲ್ಪ ಸಮಯ ತೆಗೆದುಕೊಂಡೆ. ಯಶ್ ನನ್ನ ನಿರ್ದೇಶನದ ಸಾಹಸದ ಬಗ್ಗೆ ತಿಳಿದಿದ್ದಾರೆ ಮತ್ತು ಅದರ ಬಗ್ಗೆ ಸಂತಸಗೊಂಡಿದ್ದಾರೆ." ಅವರು ಹೇಳೀದ್ದಾರೆ.

 “ನಾನು ಸಿನಿ ಕ್ಷೇತ್ರಕ್ಕೆ ಪ್ರವೇಶಿಸುವ ಮೊದಲು ನಿರ್ದೇಶನದ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಯಲು ಸಮಯ ತೆಗೆದುಕೊಂಡೆ. ಈ ಮಧ್ಯೆ, ನಾನು ಎರಡು ದೀರ್ಘ ವರ್ಷಗಳನ್ನು ಕೇವಲ ನಿರ್ಮಾಪಕರನ್ನು ಸಂಪರ್ಕಿಸುವದರಲ್ಲಿ ವ್ಯರ್ಥಗೊಳಿಸಿದೆ.ಅಂತಿಮವಾಗಿ, ನಾನು ಪ್ರಿಡಕ್ಷನ್ ಕೆಲಸವನ್ನೂ ಮಾಡಲು ನಿರ್ಧರಿಸಿದ್ದೇನೆ."

ನಿರ್ದೇಶನದ ಹೊರತಾಗಿ "ಡಿಎಡಿ" ಗೆ ಅರ್ಜುನ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಸಹ ಬರೆದಿದ್ದಾರೆ. ಈಗ ಚಿತ್ರೀಕರಣದ ಅಂತಿಮ ಹಂತದಲ್ಲಿರುವ ಈ ಚಿತ್ರ ತಂದೆ-ಮಗನ ಭಾವನಾತ್ಮಕ ಆಕ್ಷನ್ ಥ್ರಿಲ್ಲರ್ ಆಗಿದೆ. 

ಸುಂಚೇಂದ್ರ ಪ್ರಸಾದ್,  ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದು, ಮತ್ತು ಮಂಜು ಪ್ರಮುಖ ಪಾತ್ರದಲ್ಲಿದ್ದಾರೆ. ಮುಂಬೈ ಮೂಲದ ಪಾಪ್ ಬ್ಯಾಂಡ್ ಏಕ್ ಖ್ವಾಬ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ನಿಲ್ ಕುಮಾರ್ ಕೆ ಛಾಯಾಗ್ರಹಣ ಚಿತ್ರದಲ್ಲಿದೆ.

Stay up to date on all the latest ಸಿನಿಮಾ ಸುದ್ದಿ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp