ಬರ್ತಡೇ ದಿನವೇ ಮ್ಯಾರೇಜ್ ಡೇಟ್ ಅನೌನ್ಸ್ ಮಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಸ್ಯಾಂಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗಿಂದು ಜನ್ಮದಿನದ ಸಂಭ್ರಮ. 31ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸರ್ಜಾ ಫ್ಯಾಮಿಲಿ ಕುಡಿ ಧ್ರುವ ಅವರು ಇದೇ ಖುಷಿಯಲ್ಲಿ ತಮ್ಮ ಮದುವೆ ದಿನಾಂಕವನ್ನೂ ಸಹ ಘೋಷಿಸಿದ್ದಾರೆ.

Published: 06th October 2019 02:54 PM  |   Last Updated: 06th October 2019 02:58 PM   |  A+A-

ಬರ್ತಡೇ ದಿನವೇ ಮ್ಯಾರೇಜ್ ಡೇಟ್ ಅನೌನ್ಸ್ ಮಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

Posted By : Raghavendra Adiga
Source : Online Desk

ಸ್ಯಾಂಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗಿಂದು ಜನ್ಮದಿನದ ಸಂಭ್ರಮ. 31ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸರ್ಜಾ ಫ್ಯಾಮಿಲಿ ಕುಡಿ ಧ್ರುವ ಅವರು ಇದೇ ಖುಷಿಯಲ್ಲಿ ತಮ್ಮ ಮದುವೆ ದಿನಾಂಕವನ್ನೂ ಸಹ ಘೋಷಿಸಿದ್ದಾರೆ.

2018ರ ಡಿಸೆಂಬರ್‍ನಲ್ಲಿ ಧ್ರುವ ಅವರು ಪ್ರೇರಣಾ ಅವರೊಡನೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮದುವೆ ದಿನಾಂಕ ಇನ್ನೂ ಖಚಿತಪಡಿಸಿರಲಿಲ್ಲ. ಆದರೆ ಇದೀಗ ಈ ಬರುವ ನವೆಂಬರ್ 24 ಮತ್ತು 25ಕ್ಕೆ ತಾವು ಪ್ರೇರಣಾ ಕೈ ಹಿಡಿಯುವುದಾಗಿ ಅವರು ಹೇಳಿಕೊಂಡಿದ್ದಾರೆ. ಅಲ್ಲದೆ ಧ್ರುವ ಅವರ ವಿವಾಹದ ದಿನ ನಿಗದಿಯಾಗಿದೆ ಎಂದು ಅವರ ಕುಟುಂಬ ಮೂಲಗಳು ಖಚಿತಪಡಿಸಿದೆ.

ಕಳೆದ ಹದಿನಾಲ್ಕು ವರ್ಷಗಳಿಂದ ಧ್ರುವ ಸರ್ಜಾ-ಪ್ರೇರಣ ಪರಸ್ಪರ ಪ್ರೀತಿಸುತ್ತಿದ್ದರು.ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಎರಡೂ ಮನೆಗಳಲ್ಲಿ ವಿವಾಹದ ತಯಾರಿ ಜೋರಾಗಿ ನಡೆದಿದೆ.

ಸಧ್ಯ ನಾಯಕ ನಟ ದ್ರುವ ಸರ್ಜಾ ತಮ್ಮ ಬಹುನಿರೀಕ್ಷಿತ "ಪೊಗರು" ಚಿತ್ರದ ಶೂಟಿಂಗ್ ನಲ್ಲಿದ್ದಾರೆ.ಶನಿವಾರ ಪೊಗರು ಚಿತ್ರದ ಪೋಸ್ಟರ್ ಟ್ವೀಟ್ ಮಾಡಿದ್ದು ಅಕ್ಟೋಬರ್ 24ರಂದು ಚಿತ್ರದ ಟೀಸರ್ ಬಿಡುಗಡೆಯಾಗುತ್ತದೆಂದು ಹೇಳಿದ್ದಾರೆ. ಚಿತ್ರವನ್ನು ಬಿ.ಕೆ.ಗಂಗಾಧರ್ ನಿರ್ಮಿಸುತ್ತಿದ್ದು ಕನ್ನಡ ಸೇರಿದಂತೆ ದಕ್ಷಿಣ ಭಾರತದ ಬಾಷೆಗಳು ಹಾಗೂ ಹಿಂದಿಯಲ್ಲಿ ಕೂಡ ತಯಾರಾಗುತ್ತಿದೆ. ನಂದಕಿಶೋರ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾಮಂದಣ್ಣ , ಶಾನ್ವಿ ಶ್ರೀವಾಸ್ತವ್ ಪ್ರಮುಖ ಪಾತ್ರದಲಿ ನಟಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?

Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp