ರಾಧಾ ರಮಣ ಖ್ಯಾತಿಯ ದೀಪಿಕಾಗೆ ಕೂಡಿ ಬಂದ ಕಂಕಣ: ಅನುಷಾ ಕೈಹಿಡಿಯುವ ನಟ ಯಾರು ಗೊತ್ತೆ?

ಕಲರ್ಸ್ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ರಮಣ’ ಖ್ಯಾತಿಯ ದೀಪಿಕಾ ಪಾತ್ರಧಾರಿಯ ಅನುಷಾ ಹೆಗ್ಡೆಗೆ ವಿವಾಹ ಯೋಗ ಕೂಡಿ ಬಂದಿದೆ.
ಅನುಷಾ ಹೆಗಡೆ
ಅನುಷಾ ಹೆಗಡೆ

ಬೆಂಗಳೂರು: ಕಲರ್ಸ್ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ರಮಣ’ ಖ್ಯಾತಿಯ ದೀಪಿಕಾ ಪಾತ್ರಧಾರಿಯ ಅನುಷಾ ಹೆಗ್ಡೆಗೆ ವಿವಾಹ ಯೋಗ ಕೂಡಿ ಬಂದಿದೆ.

ಅನುಷಾ ತೆಲುಗು ಕಿರುತೆರೆ ನಟ ಪ್ರತಾಪ್ ಸಿಂಗ್ ಶಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅನುಷಾ ‘ರಾಧಾ ರಮಣ’ ಧಾರಾವಾಹಿ ಮುಗಿದ ಮೇಲೆ ತೆಲುಗಿನ ‘ನಿನ್ನೆ ಪೆಳ್ಳಾಡ್ತ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ಇತ್ತೀಚೆಗೆ ತೆಲುಗಿನ ಖಾಸಗಿ ವಾಹಿನಿಯಲ್ಲಿ ಅವಾರ್ಡ್ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಗ್ ಶಾ ಅವಾರ್ಡ್ ಸ್ವೀಕರಿಸಿದ ಬಳಿಕ ಅನುಷಾ ಅವರನ್ನು ವೇದಿಕೆ ಮೇಲೆ ಬರಲು ಹೇಳಿದ್ದರು. ಬಳಿಕ ಪ್ರತಾಪ್ ವೇದಿಕೆಯಲ್ಲಿಯೇ ಅನುಷಾ ಬೆರಳಿಗೆ ಉಂಗುರ ತೊಡಿಸಿ ಪ್ರಪೋಸ್ ಮಾಡಿದ್ದರು.

ಪ್ರತಾಪ್ ಸಿಂಗ್ ರಜಪೂತ ಸಮುದಾಯದವರಾಗಿದ್ದು, ಹೈದರಾಬಾದ್‍ನಲ್ಲಿ ವಾಸಿಸುತ್ತಿದ್ದಾರೆ. ಪ್ರತಾಪ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅನುಷಾಗೆ ಮಂಡಿಯೂರಿ ಪ್ರಪೋಸ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅತ್ಯುತ್ತಮ ಕ್ಷಣ ಎಂದು ಬರೆದುಕೊಂಡಿದ್ದಾರೆ.

 ಶೀಘ್ರದಲ್ಲೇ ಅನುಷಾ ಹಾಗೂ ಪ್ರತಾಪ್ ಅವರ ಎಂಗೇಜ್‍ಮೆಂಟ್ ನಡೆಯಲಿದ್ದು. ಮುಂದಿನ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com