ಮತ್ತೆ ಒಂದಾದ ಅನಂತ್ ನಾಗ್-ರಿಷಬ್ ಶೆಟ್ಟಿ; 'ರುದ್ರಪ್ರಯಾಗ' ಕ್ಕೆ ಪಯಣ 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಚಿತ್ರದಲ್ಲಿ ಒಂದಾಗಿದ್ದ ಅನಂತ್ ನಾಗ್ ರಿಷಬ್ ಶೆಟ್ಟಿಯವರ ಮುಂದಿನ ಚಿತ್ರ ರುದ್ರಪ್ರಯಾಗದಲ್ಲಿ ನಟಿಸಲಿದ್ದಾರೆ. 

Published: 11th September 2019 11:37 AM  |   Last Updated: 11th September 2019 11:47 AM   |  A+A-


Anant Nag and Rishab Shetty

ಅನಂತ್ ನಾಗ್-ರಿಷಬ್ ಶೆಟ್ಟಿ

Posted By : Sumana Upadhyaya
Source : The New Indian Express

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಚಿತ್ರದಲ್ಲಿ ಒಂದಾಗಿದ್ದ ಅನಂತ್ ನಾಗ್ ರಿಷಬ್ ಶೆಟ್ಟಿಯವರ ಮುಂದಿನ ಚಿತ್ರ ರುದ್ರಪ್ರಯಾಗದಲ್ಲಿ ನಟಿಸಲಿದ್ದಾರೆ. ಹಿರಿಯ ನಟನೊಂದಿಗೆ ಸೆಲ್ಫಿ ತೆಗೆದುಕೊಂಡು ರಿಷಬ್ ಶೆಟ್ಟಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.


ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ಹಿಟ್ ಆಗಿತ್ತು. ಆಗಲೇ ಇನ್ನೊಂದು ಚಿತ್ರವನ್ನು ಅನಂತ್ ನಾಗ್ ಅವರ ಜೊತೆ ಮಾಡಬೇಕೆಂದು ರಿಷಬ್ ಶೆಟ್ಟಿ ನಿರ್ಧರಿಸಿದ್ದರಂತೆ. ಅದೀಗ ಕೈಗೂಡಿರುವುದು ಸಹಜವಾಗಿಯೇ ಅವರಿಗೆ ಖುಷಿ ನೀಡಿದೆ.


ರುದ್ರಪ್ರಯಾಗ ಚಿತ್ರದ ಕಥೆ ಕೆಲ ಸಮಯಗಳ ಹಿಂದೆಯೇ ಸಿದ್ದವಾಗಿತ್ತಂತೆ.ಇದರಲ್ಲಿನ ಪಾತ್ರ ಕೂಡ ಅನೇಕ ಸಮಯಗಳಿಂದ ರಿಷಬ್ ಶೆಟ್ಟಿಯವರ ಮನಸ್ಸಿನಲ್ಲಿತ್ತಂತೆ. ದಿನಗಳೆದಂತೆ ಚಿತ್ರದ ಸ್ಕ್ರಿಪ್ಟ್ ನಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದಾರೆ.


ಸ್ಕ್ರಿಪ್ಟ್ ಎಲ್ಲವೂ ಸಿದ್ದವಾದ ನಂತರ ಈ ಪಾತ್ರವನ್ನು ಅನಂತ್ ನಾಗ್ ಅವರಿಂದಲೇ ಮಾಡಲು ಸಾಧ್ಯ ಎಂದು ರಿಷಬ್ ತೀರ್ಮಾನಿಸಿ ಕಥೆಯನ್ನು ಹೇಳಿದಾಗ ಅನಂತ್ ನಾಗ್ ಅವರು ತುಂಬಾ ಇಷ್ಟಪಟ್ಟರಂತೆ.


ವಿವಿಧ ರೀತಿಯ ಪಾತ್ರಗಳನ್ನು ನಿಭಾಯಿಸುವ ಶಕ್ತಿ ಅನಂತ್ ನಾಗ್ ಅವರಲ್ಲಿರುವುದರಿಂದ ಅವರು ಹೆಚ್ಚೆಚ್ಚು ಸಿನಿಮಾಗಳನ್ನು ಮಾಡಬೇಕೆಂಬುದು ರಿಷಬ್ ಬಯಕೆ. ಅಂತವರ ಜೊತೆ ಕೆಲಸ ಮಾಡುವುದು ತೃಪ್ತಿ ಕೊಡುತ್ತದೆ ಎನ್ನುವ ರಿಷಬ್ ಶೆಟ್ಟಿ ಚಿತ್ರದ ಬಗ್ಗೆ ಹೆಚ್ಚು ವಿವರಣೆ ನೀಡಲು ನಿರಾಕರಿಸಿದರು. ಇದೀಗ ಇತರ ಪಾತ್ರಗಳಿಗೆ ಕಲಾವಿದರ ಆಯ್ಕೆ ಮಾಡುವ ಸಿದ್ಧತೆಯಲ್ಲಿದ್ದಾರೆ. 


ಜಯಣ್ಣ ಕಂಬೈನ್ಸ್ ನಡಿ ತಯಾರಾಗುತ್ತಿರುವ ಚಿತ್ರದ ಚಿತ್ರೀಕರಣ ಡಿಸೆಂಬರ್ ನಲ್ಲಿ ಆರಂಭವಾಗಲಿದೆ. ಚಿತ್ರದ ಚಿತ್ರೀಕರಣ ರುದ್ರಪ್ರಯಾಗ, ಬೆಳಗಾವಿ ಮತ್ತು ಇತರ ಸ್ಥಳಗಳಲ್ಲಿ ನಡೆಯಲಿದೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp