ರಾಮಾಯಣ ಧಾರಾವಾಹಿಯ ಸುಗ್ರೀವ ಖ್ಯಾತಿಯ ನಟ ಶ್ಯಾಂ ಸುಂದರ್ ಕಲಾನಿ ನಿಧನ

ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿಯಲ್ಲಿ ಸುಗ್ರೀವನ ಪಾತ್ರ ಮಾಡಿದ್ದ ನಟ ಶ್ಯಾಂ ಸುಂದ್ ಕಲಾನಿ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಸುಗ್ರೀವ ಖ್ಯಾತಿಯ ನಟ ಶ್ಯಾಂ ಸುಂದರ್ ಕಲಾನಿ
ಸುಗ್ರೀವ ಖ್ಯಾತಿಯ ನಟ ಶ್ಯಾಂ ಸುಂದರ್ ಕಲಾನಿ
Updated on: 

ನವದೆಹಲಿ: ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿಯಲ್ಲಿ ಸುಗ್ರೀವನ ಪಾತ್ರ ಮಾಡಿದ್ದ ನಟ ಶ್ಯಾಂ ಸುಂದ್ ಕಲಾನಿ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ನಟ ಅರುಣ್ ಗೋವಿಲ್ ಟ್ವೀಟ್ ಮಾಡಿದ್ದು, ರಮಾನಂದ ಸಾಗರ್ ಅವರ ರಾಮಾಯಣ ಧಾರಾವಾಹಿಯಲ್ಲಿ ಸುಗ್ರೀವನ ಪಾತ್ರ ಮಾಡಿದ್ದ ಶ್ಯಾಂ ಸುಂದರ್ ಕಲಾನಿ ಅವರು ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು  ಏ.6ರಂದು ಹರಿಯಾಣದ ಕಲ್ಕಾ ಎಂಬಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ. ರಮಾನಂದ ಸಾಗರ ಅವರ ನಿರ್ದೇಶನ, ನಿರ್ಮಾಣದ 1987ರ ರಾಮಾಯಣ ಧಾರಾವಾಹಿಯಲ್ಲಿ ಶ್ಯಾಮ ಸುಂದರ್‌ ಕಲಾನಿ ಅವರು ಸುಗ್ರೀವನ ಪಾತ್ರ ನಿರ್ವಹಿಸಿದ್ದರು. ಇದೇ  ಧಾರಾವಾಹಿಯಲ್ಲಿ ನಟ ಅರುಣ್ ಗೋವಿಲ್ ಅವರೂ ಕೂಡ ರಾಮನ ಪಾತ್ರ ನಿರ್ವಹಿಸಿದ್ದರು.

1987ರ ರಾಮಾಯಣ ಧಾರಾವಾಹಿಯನ್ನು ಕೊರೊನಾ ವೈರಸ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ, ಪ್ರೇಕ್ಷಕರ ಒತ್ತಾಯದ ಮೇರೆ ದೂರದರ್ಶನದಲ್ಲಿ ಮರು ಪ್ರಸಾರ ಮಾಡಲಾಗುತ್ತಿದೆ.  ಇದರ ಜೊತೆಗೆ ಅಂದಿನ ಕಾಲದ ಇತರೆ ಖ್ಯಾತ ಧಾರಾವಾಹಿಗಳಾದ ಮಹಾಭಾರ, ಶಕ್ತಿಮಾನ್ ಮತ್ತು  ಜಂಗಲ್ ಬುಕ್ ಕೂಡ ಪ್ರಸಾರವಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com