
ಚೆನ್ನೈ: ಕೊರೋನಾವೈರಸ್ ಲಾಕ್‌ಡೌನ್ ಇರುವ ಕಾರಣ ದೇಶಾದ್ಯಂತ ಮದ್ಯ ಮಾರಾಟ ಬಂದ್ ಆಗಿದೆ.ಇದರಿಂದ ಮದ್ಯವ್ಯಸನಿಗಳು ಬಹುಪಾಲು ಕಷ್ಟಕ್ಕೀಡಾಗಿದ್ದಾರೆ.ಈ ನಡುವೆ ತಮಿಳು ನಟನೊಬ್ಬ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ನಡೆಸಿ ಪೋಲೀಸರಿಗೆ ಸಿಕ್ಕುಬಿದ್ದಿದ್ದಾರೆ.
ವಿವಾದಾತ್ಮಕ ಚಿತ್ರ 'ದ್ರೌಪದಿ' ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡ ತಮಿಳು ನಟ ರಿಜ್ವಾನ್ ಅವರನ್ನು ಎಂಜಿಆರ್ ನಗರ ಪ್ರದೇಶದಲ್ಲಿ ಕಳೆದ ರಾತ್ರಿ ಮದ್ಯ ಸಂಗ್ರಹಿಸಿ ತಮ್ಮ ಸಹೋದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ. ಬಂಧಿತನಿಂದ 180 ಮಿಲಿ ಮದ್ಯದ 57 ಬಾಟಲಿಗಳು ಮತ್ತು 12 ಬಾಟಲ್ ಬಿಯರ್ ಜೊತೆಗೆ 2300 ರೂಪಾಯಿ ನಗದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಫಿಲ್ಮ್ ಪ್ರೊಡಕ್ಷನ್ ನೌಕರನಾದ ಪ್ರದೀಪ್ ಎಂಬಾತನಿಂದ 000 ರೂ.ಗೆ ಒಂದು ಬಾಟಲಿಯನ್ನು ಖರೀದಿಸಿ 1200 ರೂಪಾಯಿಗೆ ತನ್ನ ಸ್ನೇಹಿತರಿಗೆ ಮಾರಿರುವುದಾಗಿ ಆರೋಪಿ ನಟ ರಿಜ್ವಾನ್ ತಪ್ಪೊಪ್ಪಿಕೊಂಡಿದ್ದಾರೆ.
ನಟ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಪ್ರದೀಪ್ ಮತ್ತು ಅವರ ಚಾಲಕ ದೇವರಾಜ್ ನನ್ನೂ ಬಂಧಿಸಿದ್ದಾರೆ.ಅವರಿಂದ 189 ಬಾಟಲಿಗಳು ಮತ್ತು 20 ಸಾವಿರ ರೂಪಾಯಿ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಮಧ್ಯೆ ದೇವರಾಜ್ ಮತ್ತು ಪ್ರದೀಪ್ ಮದ್ಯವನ್ನು ಎಲ್ಲಿಂದ ಸಂಗ್ರಹಿಸಿದ್ದಾರೆ ಎಂಬ ಕುರಿತು ತನಿಖೆ ನಡೆಯುತ್ತಿದೆ.
Advertisement