ಯಾವಾಗಲೂ ಕನ್ನಡ ಚಿತ್ರೋದ್ಯಮದ ಭಾಗವಾಗಿರಲು ಬಯಸುತ್ತಿದ್ದೆ: ಮಾಜಿ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ

ನಂದ್ ರಾಜ್ ನಿರ್ದೇಶನದ ಜಾಂಟಿ s/o ಜಯರಾಜ್ ಚಿತ್ರದಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ ಅಭಿನಯಿಸುತ್ತಿದ್ದಾರೆ. ನಟ ಧನಂಜಯ್ ಇತ್ತೀಚಿಗೆ ಈ ಚಿತ್ರಕ್ಕೆ ಚಾಲನೆ ನೀಡಿರುವ ಚಿತ್ರಕ್ಕೆ ಅಜಿತ್ ಜಯರಾಜ್ ಹಿರೋ ಆಗಿದ್ದು, ಕಿಶನ್ ಬಿಳಗಲಿ ಎರಡನೇ ಹಿರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿಶನ್ ಬಿಳಗಲಿ
ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿಶನ್ ಬಿಳಗಲಿ
Updated on

ಬೆಂಗಳೂರು: ಆನಂದ್ ರಾಜ್ ನಿರ್ದೇಶನದ ಜಾಂಟಿ s/o ಜಯರಾಜ್ ಚಿತ್ರದಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿ  ಕಿಶನ್ ಬಿಳಗಲಿ ಅಭಿನಯಿಸುತ್ತಿದ್ದಾರೆ. ನಟ ಧನಂಜಯ್ ಇತ್ತೀಚಿಗೆ ಈ ಚಿತ್ರಕ್ಕೆ ಚಾಲನೆ ನೀಡಿರುವ ಚಿತ್ರಕ್ಕೆ ಅಜಿತ್ ಜಯರಾಜ್ ಹಿರೋ ಆಗಿದ್ದು, ಕಿಶನ್ ಬಿಳಗಲಿ ಎರಡನೇ ಹಿರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರದ ಎರಡನೇ ದಿನದ ಚಿತ್ರೀಕರಣ ವೇಳೆಯಲ್ಲಿ ಸಿನಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಕಿಶನ್, ಏಳನೇ ತರಗತಿಯಲ್ಲಿದ್ದಾಗ ಪ್ರಥಮ ಬಾರಿಗೆ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದೆ, ರಾಧಿಕಾ ಕುಮಾರಸ್ವಾಮಿ ಅವರೊಂದಿಗೆ ಸ್ಕ್ರೀನ್ ಹಂಚಿಕೊಂಡಿದ್ದೆ. ಅದಕ್ಕೂ ಮುನ್ನ ಎರಡು ಧಾರಾವಾಹಿಗಳಲ್ಲಿ ಕೂಡಾ ಅಭಿನಯಿಸಿದ್ದೆ ಆದಾಗ್ಯೂ, ನಮ್ಮ ಪೋಷಕರು ಓದಿನ ಕಡೆಗೆ ಆಸಕ್ತಿ ಕೊಡುವಂತೆ ಬಯಸಿದ್ದರಿಂದ ಪೂರ್ಣ ಪ್ರಮಾಣದಲ್ಲಿ ಸಿನಿಮಾದಲ್ಲಿ ಅಭಿನಯಿಸಲು ಆಗಿರಲಿಲ್ಲ ಎಂದರು.

ಜಾಂಟಿ s/o ಜಯರಾಜ್ ರೌಡಿಸಂ ಕಥೆಯಾದ್ದರಿಂದ ಅದರಲ್ಲಿ ಅಭಿನಯಿಸಲು ಒಪ್ಪಿಕೊಂಡೆ. ಇದು ಬೆಂಗಳೂರಿನ ಮೊದಲ ಅಂಡರ್ ವರ್ಲ್ಡ್ ಡಾನ್ ಜಯರಾಜ್ ಕುರಿತಾದ ಸ್ಟೋರಿಯಾಗಿದೆ. ಇದು ನೈಜ ಘಟನೆ ಆಧಾರಿತವಾಗಿದ್ದು, ಅಜಿತ್ ಅವರ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾನು ಎರಡನೇ ಹಿರೋ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ಬಿಗ್ ಬಾಸ್ ಕನ್ನಡ ಆವೃತ್ತಿಯಲ್ಲಿ ಕಿಸ್ಸಿಂಗ್ ಸ್ಟಾರ್ ಎಂದು ಹೆಸರಾಗಿದ್ದನ್ನು ಒಪ್ಪಿಕೊಳ್ಳುವ ಕಿಶನ್, ಏಕೆ ವಿಭಿನ್ನವಾದ ಪಾತ್ರ ಮಾಡಬಾರದು ಎಂದು ನಿರ್ಧರಿಸಿ, ಜಾಂಟಿ ಪಾತ್ರದಲ್ಲಿ ಅಭಿನಯಿಸುತ್ತಿರುವುದಾಗಿ ತಿಳಿಸಿದರು. ಜನವರಿಯಲ್ಲಿ ಎರಡನೇ ಚಿತ್ರದ ಮುಹೂರ್ತ ನಡೆಯಲಿದ್ದು, ಸಾತ್ವಿಕ ಶ್ರಾವ್ಯ ಅವರೊಂದಿಗೆ ಅಭಿನಯಿಸುತ್ತಿದ್ದೇನೆ. ಮುಂದಿನ ವರ್ಷ ಇನ್ನೊಂದಿಷ್ಟು ಚಿತ್ರಗಳಲ್ಲಿ ಅವಕಾಶ ಸಿಕ್ಕಿದ್ದು, ನಟನಾಗುವ ಕನಸು ಈಡೇರುತ್ತಿದೆ ಎಂದು ಅವರು ತಿಳಿಸಿದರು.

ಯಾವಾಗಲೂ ಕನ್ನಡ ಚಿತ್ರೋಧ್ಯಮದ ಭಾಗವಾಗಿರಲು ಬಯಸುವುದಾಗಿ ಹೇಳುವ ಕಿಶನ್, ನೃತ್ಯ ಆಧಾರಿತ ಹಿಂದೆಂದೂ ಕಂಡಿರದಂತಹ ಕನ್ನಡ ಸಿನಿಮಾವೊಂದನ್ನು ಮಾಡುವ ಹೆಬ್ಬಯಕೆ ಹೊಂದಿದ್ದಾರೆ. ಅದಕ್ಕೆ ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ. ಆ ಚಿತ್ರ ಮಾಡಲು ಬಯಸುವುದಾಗಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com