ನಿಜವಾದ ಸುಖವಿರುವುದು ಮಣ್ಣಲ್ಲೇ, ರೈತರೇ ನಿಜವಾದ ವೀರರು: ದರ್ಶನ್, ಜಗ್ಗೇಶ್

ಅನ್ನದಾತರಿಗೆ ಸ್ಯಾಂಡಲ್ ವುಡ್ ನ ಹಲವು ನಟರು ಶುಭಾಶಯ ಕೋರುತ್ತಿದ್ದು, ಹಿರಿಯ ನಟ ಜಗ್ಗೇಶ್ ‘ಮಣ್ಣಲ್ಲಿ ಇರುವ ಸುಖ ಎಲ್ಲೂ ಸಿಗದು’ ಎಂದಿದ್ದರೆ, ರೈತರೇ ನಿಜವಾದ ವೀರರು ಎಂದು ದರ್ಶನ್ ಹೇಳಿದ್ದಾರೆ.
ಜಗ್ಗೇಶ್-ದರ್ಶನ್
ಜಗ್ಗೇಶ್-ದರ್ಶನ್
Updated on

ಬೆಂಗಳೂರು: ಅನ್ನದಾತರಿಗೆ ಸ್ಯಾಂಡಲ್ ವುಡ್ ನ ಹಲವು ನಟರು ಶುಭಾಶಯ ಕೋರುತ್ತಿದ್ದು, ಹಿರಿಯ ನಟ ಜಗ್ಗೇಶ್ ‘ಮಣ್ಣಲ್ಲಿ ಇರುವ ಸುಖ ಎಲ್ಲೂ ಸಿಗದು’ ಎಂದಿದ್ದರೆ, ರೈತರೇ ನಿಜವಾದ ವೀರರು ಎಂದು ದರ್ಶನ್ ಹೇಳಿದ್ದಾರೆ.

ವಿಶ್ವ ರೈತ ದಿನಾಚರಣೆಯಂದು ಅನ್ನದಾತರಿಗೆ ಶುಭ ಕೋರಲಾಗುತ್ತಿದೆ. ರೈತರ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, 'ತಾತಚಿಕ್ಕಪ್ಪಂದಿರು ಹೂಡುತ್ತಿದ್ದ ನೇಗಿಲಮೇಲೆ ಬೆಳೆದ ರೈತರ ಕುಡಿ ನಾನು. 100%ಗೆ 50%ಯುವಕರು ಈ ಕಾಯಕ ಬಿಟ್ಟು ಅಲ್ಪ ಆದಾಯಕ್ಕೆ ಪಟ್ಟಣ ಜೀವನಕ್ಕೆ ಹೋಗಿಬಿಟ್ಟರು. ಬಣಗುಡುತ್ತಿದೆ ಹೊಲಗದ್ದೆ. ಖಾಲಿಕೊಟ್ಟಿಗೆ. ಒಣಗಿದೆ ಗೊಬ್ಬರದಗುಂಡಿ. ಓ ಮನಸೆ ಮಣ್ಣಲ್ಲಿ ಇರುವ ಸುಖ ಎಲ್ಲೂ ಸಿಗದು ಮರಳಿ ಮಣ್ಣಿಗೆ. ಕೊಂಡು ತಿನ್ನುವುದಕ್ಕಿಂತ ಬೆಳೆದುತಿನ್ನುವ ಎಂದಿದ್ದಾರೆ.

ನಟ ದರ್ಶನ್, ರೈತರೇ ನಿಜವಾದ ವೀರರು.  ಅವರು ಸಮರ್ಪಣೆ ಮತ್ತು ಶ್ರಮದಿಂದ ಬಂಜರು ಭೂಮಿಯನ್ನು ಆಹಾರ ಉತ್ಪಾದಿಸುವ ಭೂಮಿಯನ್ನಾಗಿ ಪರಿವರ್ತಿಸುತ್ತಾರೆ. ತಮ್ಮ ಹೃದಯ, ಆತ್ಮವನ್ನು ಮಣ್ಣಿನಲ್ಲಿರಿಸಿ ದುಡಿಯುವ ಅವರ ಕಠಿಣ ಪರಿಶ್ರಮಕ್ಕೆ ನಮಸ್ಕರಿಸೋಣ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com