ನಿರ್ದೇಶಕ ಸೂರಿ, ಚಿತ್ರಕಾರ, ಕಲಾವಿದ ಕೂಡಾ: ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರತಂಡ

ಪಾಪ್‌ಕಾರ್ನ್ ಮಂಕಿ ಟೈಗರ್ ಎಂಬ ಮತ್ತೊಂದು ಪ್ರಯೋಗಾತ್ಮಕ ಚಿತ್ರವನ್ನು ಸೂರಿ ನಿರ್ದೇಶಿಸುತ್ತಿದ್ದಾರೆ. ಯುವ ಪ್ರತಿಭಾವಂತ ಅಮೃತಾ ಕೆ ಭಾರ್ಗವ್ ಸೇರಿದಂತೆ ಅನೇಕ ಹೊಸ ತಾಂತ್ರಿಕ ತಂಡವನ್ನು ಈ ಸಿನಿಮಾದ ಮೂಲಕ ಸೂರಿ ಪರಿಚಯಿಸಿದ್ದಾರೆ. ಅಮೃತ ಕೆ ಭಾರ್ಗವ್ ಈ ಸಿನಿಮಾಕ್ಕೆ ಚಿತ್ರಕಥೆಯನ್ನು ಬರೆದಿದ್ದಾರೆ.
ನಟ ಧನಂಜಯ್
ನಟ ಧನಂಜಯ್
Updated on

ಪಾಪ್‌ಕಾರ್ನ್ ಮಂಕಿ ಟೈಗರ್ ಎಂಬ ಮತ್ತೊಂದು ಪ್ರಯೋಗಾತ್ಮಕ ಚಿತ್ರವನ್ನು ಸೂರಿ ನಿರ್ದೇಶಿಸುತ್ತಿದ್ದಾರೆ. ಯುವ ಪ್ರತಿಭಾವಂತ ಅಮೃತಾ ಕೆ ಭಾರ್ಗವ್ ಸೇರಿದಂತೆ ಅನೇಕ ಹೊಸ ತಾಂತ್ರಿಕ ತಂಡವನ್ನು ಈ ಸಿನಿಮಾದ ಮೂಲಕ ಸೂರಿ ಪರಿಚಯಿಸಿದ್ದಾರೆ. ಅಮೃತ ಕೆ ಭಾರ್ಗವ್ ಈ ಸಿನಿಮಾಕ್ಕೆ ಚಿತ್ರಕಥೆಯನ್ನು ಬರೆದಿದ್ದಾರೆ.

ಮಾಲಾ ಕಲಾ ವಿಭಾಗವನ್ನು ನಿರ್ವಹಣೆ ಮಾಡಿದ್ದಾರೆ. ದುನಿಯಾ ಸಿನಿಮಾದಿಂದಲೂ ಅವರು ಸೂರಿ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ಭೂಗತಲೋಕದ ಕಥೆ ಆಧಾರಿತವಾಗಿದ್ದು, ಕುಟುಂಬದ ಹಿನ್ನೆಲೆಯ ವಿರುದ್ದವಾದುದ್ದಾಗಿದೆ. 

ಕೆಂಡಸಂಪಿಗೆ ಮತ್ತು ಟಗರು ಚಿತ್ರದಲ್ಲಿ ಸೂರಿಯೊಂದಿಗೆ ಕೆಲಸ ಮಾಡಿದ್ದ ಶೇಖರ್ ಈ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ. ಸುದೀರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. 

ಫೆಬ್ರವರಿ 21 ರಂದು ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರಕಥೆಗಾರ ಅಮೃತ ಭಾರ್ಗವ್, ಮಾಲಾ, ಶೇಖರ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಮೊದಲ ಬಾರಿಗೆ ಸೂರಿ ಅವರ ಬಳಿ ಕೆಲಸ ಕೇಳಿದಾಗ ನೀಡಿರಲಿಲ್ಲ. ಆದಾಗ್ಯೂ, ಮೂರು ವರ್ಷಗಳ ಬಳಿಕ ಉರು ಸುತ್ತುಕೊಂಡು ಬಂದು ಹೇಳಬೇಕು ಎಂದು ಹೇಳಿದ್ದರು. ಇದರಿಂದಾಗಿ ಸುತ್ತಲಿನ ಜಗತ್ತು ಅರ್ಥ ಮಾಡಿಕೊಂಡು ಚಿತ್ರಕಥೆ ಬರೆಯಲು ಸಾಧ್ಯವಾಯಿತು. ಅವರೊಬ್ಬ ಉತ್ತಮ ಮಾರ್ಗದರ್ಶಕರು  ಎಂದು ಅಮೃತಾ ಭಾರ್ಗವ್ ಹೇಳುತ್ತಾರೆ.

ಇನ್ನೂ ಕಲಾ ನಿರ್ದೇಶಕರಾದ ಮಾಲಾ ದುನಿಯಾ ಸಿನಿಮಾದಿಂದಲೂ ಸೂರಿಯೊಂದಿಗೆ ಕೆಲಸ ಮಾಡುತ್ತಿದ್ದು, ಎಲ್ಲಾವನ್ನು ಸ್ಥಳದಲ್ಲಿಯೇ ಯೋಜನೆ ಮಾಡುತ್ತಾರೆ. ಮಾರ್ಕೆಟ್, ಮನೆ, ನೈಸರ್ಗಿಕ ಸ್ಥಳಗಳನ್ನೇ ಹೆಚ್ಚಾಗಿ ಶೂಟಿಂಗ್ ಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರೊಬ್ಬರು ಉತ್ತಮ ಕಲಾವಿದರು ಆಗಿದ್ದಾರೆ. ಸಾಮಾನ್ಯ ಮನೆ ಕೂಡ ಅವರ ಕಲಾತ್ಮಕ ಸಂವೇದನೆಗಳೊಂದಿಗೆ ಸಂಪೂರ್ಣ ಹೊಸ ನೋಟವನ್ನು ಪಡೆಯುತ್ತದೆ ಎಂದು ಹೇಳಿದ್ದಾರೆ.

ಕೆಂಡಸಂಪಿಗೆ ಸಂದರ್ಭದಲ್ಲಿ ನಟ ರಾಜೇಶ್ ನಟರಂಗ ತಮ್ಮನ್ನು ಸೂರಿಗೆ ಪರಿಚಯಿಸಿದರು. ಚಿತ್ರರಂಗಕ್ಕೆ ಬಂದಾಗಿನಿಂದಲೂ  ಕ್ಯಾಮರಾ ನಿರ್ವಹಣೆಯಲ್ಲಿಯೇ ಆಸಕ್ತಿ ಬೆಳೆಸಿಕೊಂಡಿದ್ದ ತಮ್ಮಗೆ ಈ ವಿಭಾಗದಲ್ಲಿ ಕೆಲಸ ಮಾಡಲು ನಿರ್ದೇಶಕ ಸೂರಿ ಅವಕಾಶ  ನೀಡಿದ್ದಾಗಿ  ಚಿತ್ರಕ್ಕೆ ಛಾಯಾಗ್ರಾಹಣ ಒದಗಿಸಿರುವ ಶೇಖರ್ ಹೇಳಿದ್ದಾರೆ. 

ಸೂರಿ ಅವರ ಸಿನಿಮಾ ನಿರ್ಮಾಣ ಶೈಲಿ ತಿಳಿದಿದ್ದರಿಂದ ಎಂದಿಗೂ ಕಷ್ಟಕರವಾದ ಕೆಲಸವೆಂದು ಪರಿಗಣಿಸಲಿಲ್ಲ. 
ಪಾಪ್‌ಕಾರ್ನ್ ಮಂಕಿ ಟೈಗರ್‌ ಚಿತ್ರಕಥೆ ಉತ್ಸಾಹ ಭರಿತವಾಗಿದೆ . ಸೂರಿ ಅವರ  ವಿನ್ಯಾಸ ಮತ್ತು ಮನಸ್ಥಿತಿ, ಸಮಯಕ್ಕನ್ನುಗುಣವಾಗಿ ಚಿತ್ರದ ಶೂಟಿಂಗ್ ಮುಗಿಸಲಾಗಿದೆ ಎಂದು ಶೇಖರ್ ತಿಳಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com