
ನಟ, ನಿರ್ದೇಶಕ ಉಪೇಂದ್ರ ಅವರ ಕಬ್ಜಾ ಸಿನಿಮಾ ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಹಾಗೂ ಬೆಂಗಾಲಿ ಸೇರಿದಂತೆ 7 ಭಾಷೆಗಳಲ್ಲಿ ರಿಲೀಸ್ ಆಗಲಿದೆ.
ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ನಿರ್ದೇಶಕ ಆರ್.ಚಂದ್ರು ಶೂಟಿಂಗ್ ಆರಂಭಿಸಿದ್ದಾರೆ. ಸದ್ಯ ಕೇಳಿ ಬರುತ್ತಿರುವ ವಿಷಯ ಎಂದರೇ ಸಮುಥಿರಕನಿ ವಿಲ್ಲನ್ ಪಾತ್ರದಲ್ಲಿ ಕಬ್ಜಾ ದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ದೇಶದ ವಿವಿಧ ಸಿನಿಮಾ ಇಂಡಸ್ಟ್ರಿಗಳ ವಿಲ್ಲನ್ ಗಳು ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ, ಜಗಪತಿ ಬಾಬೂ ಕೂಡ ಈ ಸಿನಿಮಾದಲ್ಲಿ ನಟಿಸಲಿದ್ದಾರೆ.
ಈ ಸಂಬಂಧ ಈಗಾಗಲೇ ಸಮುಥಿರಕನಿ ಅವರನ್ನು ಚಿತ್ರ ತಂಡ ಸಂಪರ್ಕಿಸಿದ್ದು, ಅವರ ಅನುಮತಿ ಇನ್ನೂ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ, ಸದ್ಯ ಸಮುಥಿರಕನಿ ಆರ್ ಆರ್ ಆರ್ ಮತ್ತು ಇಂಡಿಯನ್2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಅಲ್ಲು ಅರ್ಜುನ್ ಅವರ ವೈಕುಂಠಪುರಮ್ಮಲೋ ಸಿನಿಮಾಗೂ ಸಹಿ ಮಾಡಿದ್ದಾರೆ.
ಅತುಲ್ ಕುಲಕರ್ಣಿ ಶೀಘ್ರವೇ ಚಿತ್ರತಂಡವನ್ನು ಸೇರಲಿದ್ದಾರೆ, ಇವರ ಜೊತೆಗೆ ನಾನಾ ಪಟೇಕರ್, ಮನೋಜ್ ಬಾಜಪೇಯಿ, ಪ್ರದೀಪ್ ರಾವತ್, ಮತ್ತು ಪ್ರಕಾಶ ರಾಜ್ ಅವರನ್ನು ಪರಿಗಣಿಸಲಾಗಿದೆ, ಸಿನಿಮಾಗೆ ರವಿಬಸ್ರೂರ್ ಸಂಗೀತ ನೀಡಿದ್ದಾರೆ.
Advertisement