ಮತ್ತೆ ಪುಷ್ಪಕ ವಿಮಾನ ತಂಡ ಸೇರಿಕೊಂಡ ರಚಿತಾ ರಾಮ್!
ಲಾಕ್ಡೌನ್ ಪರಿಣಾಮ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಮೇಲೆ ಪರಿಣಾಮ ಬೀರಿಲ್ಲ. ಲಾಕ್ಡೌನ್ ಸಮಯವನ್ನು ರಚಿತಾ ರಾಮ್ ಸದುಪಯೋಗಪಡಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಚಿತ್ರಕಥೆಗಳನ್ನು ಕೇಳುತ್ತಿರುವ ರಚಿತಾರಾಮ್ ಅವರು, ಉತ್ತಮ ಚಿತ್ರಗಳಿಗೆ ಸಹಿ ಮಾಡುತ್ತಿದ್ದಾರೆ. ಅಲ್ಲದೆ, ನಿರ್ಮಾಪಕ ವಿಖ್ಯಾತ್ ಅವರು ನಿರ್ಮಿಸುತ್ತಿರುವ ಪುಷ್ಪಕ ವಿಮಾನ ಚಿತ್ರತಂಡದೊಂದಿಗೆ ಮತ್ತೆ ಕೈಜೋಡಿಸಿದ್ದಾರೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ವೀರಮ್, ಲಿಲ್ಲಿ ಸೇರಿದಂತೆ ಹಲವು ಚಿತ್ರಗಳನ್ನು ಪೂರ್ಣಗೊಳಿಸಿರುವ ರಚಿತಾ ರಾಮ್ ಅವರು ಮತ್ತಷ್ಟು ಸಿನಿಮಾಗಳಿಗೆ ಸಹಿ ಮಾಡುತ್ತಿದ್ದಾರೆ. ರಮೇಶ್ ಅರವಿಂದ್ ಅವರ 100ನೇ ಚಿತ್ರವಾಗಿರುವ ಪುಷ್ಪಕ ವಿಮಾನ ಚಿತ್ರದಲ್ಲಿ ರಚಿತಾ ರಾಮ್ ಅವರು ವಕೀಲೆ ಪಾತ್ರ ನಿರ್ವಹಿಸುತ್ತಿದ್ದು, ಈ ಪಾತ್ರ ಈಗಾಗಲೇ ಹಲವು ವಿಮರ್ಶಾತ್ಮಕ ಮೆಚ್ಚುಗೆಗಳನ್ನು ಪಡೆಯುತ್ತಿದೆ. ಚಿತ್ರದ ಕುರಿತು ಮಾತನಾಡಿರುವ ಡಿಂಪಲ್ ಕ್ವೀನ್, ಹೌದು, ಪುಷ್ಪಕ ವಿಮಾನ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರೊಂದಿಗೆ ಮಾತುಕತೆ ನಡೆಸುತ್ತಿದ್ದೇನೆಂದು ಹೇಳಿದ್ದಾರೆ.
ವಿಖ್ಯಾತ್ ಅವರು ಉತ್ತಮ ಕಥೆಯನ್ನು ಬರೆದಿದ್ದು, ಈ ಹಿಂದೆಂದೂ ನಾನು ಮಾಡಿರದ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆಂದು ತಿಳಿಸಿದ್ದಾರೆ.

