ಲಾಕ್ ಡೌನ್ ವೇಳೆ 12ನೇ ಕಿರುಚಿತ್ರ ಪೂರ್ಣಗೊಳಿಸಿದ ಸಾಕ್ಷ್ಯಚಿತ್ರ ತಯಾರಕ ವಿನೋದ್ ರಾಜೇಂದ್ರ!
ಬೆಂಗಳೂರು: ಕೊರೋನಾ ಲಾಕ್ ಡೌನ್ ನಿಂದಾಗಿ ಹಲವರ ಅನೇಕ ಯೋಜನೆಗಳು ಕಡಿಮೆಯಾಗಿರಬಹುದು ಆದರೆ, ಸಾಕ್ಷ್ಯಚಿತ್ರ ತಯಾರಕ ವಿನೋದ್ ರಾಜೇಂದ್ರ ಅವರ ಯೋಜನೆಗಳು ಮಾತ್ರ ಸ್ಥಗಿತಗೊಂಡಿಲ್ಲ. ಈ ಅವಧಿಯಲ್ಲಿ ಅವರು ಐಎಂಎಡಿ ಶೀರ್ಷಿಕೆಯಲ್ಲಿ 12 ನೇ ಕಿರುಚಿತ್ರವನ್ನು ಮುಗಿಸಿದ್ದಾರೆ. ಜುಲೈ 19 ರಂದು ನಡೆಯಲಿರುವ 9ನೇ ಕೊಲ್ಕತ್ತಾ ಕಿರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಾಯೋಗಿಕ- ತಾಂತ್ರಿಕ ಕನ್ನಡ ಚಿತ್ರ ಪ್ರದರ್ಶನಗೊಳ್ಳಲಿದೆ.
ಈ ಚಿತ್ರವನ್ನು ಸಂಪೂರ್ಣವಾಗಿ ಲಾಕ್ ಡೌನ್ ಅವಧಿಯಲ್ಲಿಯೇ ಚಿತ್ರೀಕರಿಸಲಾಗಿದೆ. ಇದು ಜನರಲ್ಲಿ ತಾರತಮ್ಯವು ಒಂದೇ ಆಲೋಚನೆಯಿಂದ ಹೇಗೆ ಪ್ರಾರಂಭವಾಗುತ್ತದೆ ಎಂಬುದರ ಸುತ್ತ ಸುತ್ತುತ್ತದೆ. ಆದರೆ, ಅಹಂ,ಅಸೊಯೆಯಿಂದ ಕೂಡಿದಾಗ ಹೇಗೆ ದೊಡ್ಡದಾಗುತ್ತ ಹೋಗುತ್ತದೆ ಎಂಬುದನ್ನು ಹೇಳಲಾಗಿದೆ. ಸಾಮಾಜಿಕ ಅಂತರ ನಿಯಮ ವಿಭಿನ್ನ ರೀತಿಯಲ್ಲಿ ಚಿತ್ರ ಮಾಡಲು ಪ್ರೇರೆಪಿಸಿತು ಎಂದು 29 ವರ್ಷದ ನಿರ್ದೇಶಕರು ಹೇಳುತ್ತಾರೆ.
ಶೂಟಿಂಗ್ ಬಗ್ಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರಿಂದ, ನಟಿ ಅದ್ವಿತಿ ಶೆಟ್ಟಿ ಅವರ ಧ್ವನಿಯೊಂದಿಗೆ ವಿಎಫ್‌ಎಕ್ಸ್ ಸಚಿತ್ರ ಸ್ವರೂಪದಲ್ಲಿ ಮಾಡಲು ತಂಡವು ನಿರ್ಧರಿಸಿತು. ವಿನೋದ್ ಮತ್ತು ನಾನು ಸ್ವಲ್ಪ ಸಮಯದವರೆಗೆ ಪ್ರಾಯೋಗಿಕ ಚಿತ್ರ ಮಾಡುವ ಬಗ್ಗೆ ಚರ್ಚಿಸುತ್ತಿದ್ದೇವು. ಅನೇಕ ವೇಳೆ ನಡೆಸಿದ ಚರ್ಚೆಯಲ್ಲಿ ವಿವರಣೆಯೊಂದಿಗೆ ಮನೆಯಿಂದಲೇ ಕಿರುಚಿತ್ರ ಪೂರ್ಣಗೊಳಿಸಲು ನಿರ್ಧರಿಸಿದ್ದಾಗಿ ಅದ್ವಿತಿ ಶೆಟ್ಟಿ ತಿಳಿಸಿದ್ದಾರೆ.
ಐಎಂಎಡಿಗೂ ಮುಂಚೆ ಅರಂಗೇಟ್ರಮ್ ಎಂಬ ಕಿರುಚಿತ್ರವನ್ನು ರಾಜೇಂದ್ರ ಮಾಡಿದ್ದರು. ಏಪ್ರಿಲ್ ನಲ್ಲಿ ಲಾಸ್ ಎಂಜೆಲ್ಸ್ ಇಂಡಿಪೆಂಡೆಂಟ್ ಫಿಲ್ಮಂ ಫೆಸ್ಟಿವಲ್ ಅವಾರ್ಡ್ ನಲ್ಲಿ ಆ ಚಿತ್ರ ಪ್ರದರ್ಶನಗೊಳ್ಳಬೇಕಾಗುತಿತ್ತು. ಆದರೆ, ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಿಗೆ ಅದು ಮುಂದೂಡಲ್ಪಟ್ಟಿದೆ. ಸಾಂಸ್ಕೃತಿಕ ಚಿತ್ರಗಳ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಾಗಿ ಅರಂಗೇಟ್ರಮ್ ಚಿತ್ರವನ್ನು ಕಳುಹಿಸುವುದಾಗಿ ರಾಜೇಂದ್ರ ತಿಳಿಸಿದ್ದಾರೆ.
ವಿನೋದ್ ರಾಜೇಂದ್ರ 12ಕ್ಕಿಂತಲೂ ಹೆಚ್ಚಿ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅವರ ಚೆಂಜ್ ಅಂಡ್ ಲೆಪಿಕ್ಸಿ ಎರಡು ಗಿನ್ನಿಸ್ ದಾಖಲೆ ಸೃಷ್ಟಿಸಿತ್ತು. ಪ್ರಸ್ತುತ ಅವರು ದಿ ಲಾಸ್ಟ್ ಬ್ರಿಡ್ಜ್ ಮತ್ತು ನೈಟ್ ಆಫ್ ದಿನ ಡೆಕ್ಕನ್ ರಿಜನ್ ಎಂಬ ಕಿರುಚಿತ್ರಗಳ ಸ್ಕ್ರಿಪ್ಟ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ