ಕೊರೋನಾ ಆತಂಕದ ನಡುವೆಯೇ ಶೂಟಿಂಗ್ ಪುನಾರಂಭಿಸುತ್ತಿರೋ ಮೊದಲ ಕನ್ನಡ ಚಿತ್ರ 'ಫ್ಯಾಂಟಮ್'

ಜುಲೈ 1 ರಂದು ತೆಲಂಗಾಣದ ಅನ್ನಪೂರ್ಣ ಸ್ಟುಡಿಯೋದಲ್ಲಿ "ಫ್ಯಾಂಟಮ್" ಚಿತ್ರದ ಶೂಟಿಂಗ್ ಪ್ರಾರಂಭಗೊಳ್ಳುತ್ತಿದ್ದು ಸುದೀಪ್ ಅಭಿನಯದ ಈ ಚಿತ್ರ ಲಾಕ್ ಡೌನ್ ಬಳಿಕ ಶೂಟಿಂಗ್ ಪ್ರಾರಂಭಿಸುತ್ತಿರುವ ಮೊದಲ ಕನ್ನಡ ಚಿತ್ರವಾಗಲಿದೆ.
ಫ್ಯಾಂಟಮ್
ಫ್ಯಾಂಟಮ್
Updated on

ಜುಲೈ 1 ರಂದು ತೆಲಂಗಾಣದ ಅನ್ನಪೂರ್ಣ ಸ್ಟುಡಿಯೋದಲ್ಲಿ "ಫ್ಯಾಂಟಮ್" ಚಿತ್ರದ ಶೂಟಿಂಗ್ ಪ್ರಾರಂಭಗೊಳ್ಳುತ್ತಿದ್ದು ಸುದೀಪ್ ಅಭಿನಯದ ಈ ಚಿತ್ರ ಲಾಕ್ ಡೌನ್ ಬಳಿಕ ಶೂಟಿಂಗ್ ಪ್ರಾರಂಭಿಸುತ್ತಿರುವ ಮೊದಲ ಕನ್ನಡ ಚಿತ್ರವಾಗಲಿದೆ.  ಜೂನ್ 15 ರಿಂದ ಈ ಚಿತ್ರಕ್ಕಾಗಿ ಸೆಟಪ್ ಪ್ರಾರಂಭವಾಗಿದ್ದು  “ಚಲನಚಿತ್ರ ಚಿತ್ರೀಕರಣಗಳನ್ನು ಪ್ರಾರಂಭಿಸಲು ಸರ್ಕಾರ ನಮಗೆ ಅನುಮತಿ ನೀಡಿದ ನಂತರ ನಟ ಮತ್ತು ನಿರ್ದೇಶಕರೊಂದಿಗೆ ಸಮಾಲೋಚಿಸಿ ಪ್ರೊಡಕ್ಷನ್ ಹೌಸ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ನಾನು, ಸುದೀಪ್, ನಿರ್ದೇಶಕ ಅನೂಪ್  ಭಂಡಾರಿ ಮತ್ತು ಇನ್ನೂ ಕೆಲವರು ಸೇರಿದಂತೆ ಸೀಮಿತ ಸಿಬ್ಬಂದಿಗಳು ಜೂನ್ 21 ರಿಂದ  ಚಿತ್ರೀಕರಣ ಪ್ರಾರಂಭಿಸುವ ಮೊದಲು ಏಳು ದಿನಗಳವರೆಗೆ ಸಾಂಸ್ಥಿಕ ಕ್ವಾರಂಟೈನ್ ಹೊಂದಿದ್ದೇವೆ ”ಎಂದು ಜಾಕ್ ಮಂಜು ಎಂದು ಜನಪ್ರಿಯವಾಗಿರುವ ಮಂಜುನಾಥ್ ಗೌಡ ಹೇಳುತ್ತಾರೆ.

ಸರ್ಕಾರಿ ನಿಯಮಗಳನ್ನು  ಇಡೀ ತಂಡವು ಅನುಸರಿಸಲಿದೆ ಎಂದು ಹೇಳುವ ಜಾಕ್ ಮಂಜು  “ನಾವು ಸೆಟ್‌ಗಳಲ್ಲಿ ವೈದ್ಯರು ಮತ್ತು ಇಬ್ಬರು ದಾದಿಯರನ್ನು ಹೊಂದಿದ್ದೇವೆ. ನಿರ್ದಿಷ್ಟ ದಿನದಲ್ಲಿ ನಾವು ಅಗತ್ಯವಿರುವ ಸಿಬ್ಬಂದಿಯನ್ನು ಮಾತ್ರ ಫ್ಲೋರ್ ಗೆ ಕರೆಸುತ್ತೇವೆ. ಲೈಟ್ಸ್, ಮೇಕಪ್ ಹಾಗೂ ಇತರೆ ಚಿಕ್ಕಿ ಕೆಲಸವನ್ನು  ನಿರ್ವಹಿಸುವ ಜನರು ಮತ್ತು ಸಹಾಯಕರು ತಮ್ಮ ಕೆಲಸವನ್ನು ಪೂರೈಸಿದ ನಂತರ ಸೆಟ್ ನಿಂದ ಹಿಂತಿರುಗುವುದಕ್ಕೆ ವ್ಯವಸ್ಥೆ ಮಾಡಲಾಗುವುದು.  ಸುರಕ್ಷತಾ ಉದ್ದೇಶಗಳಿಗಾಗಿ, ನಾವು ಉಳಿಯಲು ಸಿದ್ಧರಿರುವ ಮತ್ತು ಆಗಾಗ್ಗೆ ಪ್ರಯಾಣಿಸಲು ಸಾಧ್ಯವಾಗದ ಸಿಬ್ಬಂದಿಗಳನ್ನು  ಆಯ್ಕೆ ಮಾಡಿದ್ದೇವೆ. ಶೂಟಿಂಗ್ ಪ್ರಕ್ರಿಯೆಯು ದುಬಾರಿ ವ್ಯವಹಾರವಾಗಿ ಮಾರ್ಪಟ್ಟಿದೆ ಎನ್ನುವುದು ನಿರ್ಮಾಪಕರ ಗಮನಕ್ಕೆ ಬಂದಿದೆ.

"ನಾನು ಸುದೀಪ್ ಅವರಿಗೆ ಧನ್ಯವಾದ ಹೇಳಬೇಕು. ಅಪಾಯಗಳ ಹೊರತಾಗಿಯೂ, ಅವರು ಶೂಟಿಂಗ್ ಅನ್ನು ಪುನರಾರಂಭಿಸಲು ಒಪ್ಪಿದ್ದಾರೆ. ನಾವು ಚಿತ್ರೀಕರಣ ಪ್ರಾರಂಭಿಸಿದಾಗ ನಾವು ಒಂದು ದೊಡ್ಡ ಸೆಟಪ್ ನೊಂದಿಗೆ  ಬರುತ್ತಿದ್ದೇವೆ ಮತ್ತು ಕೆಲವು ದೃಶ್ಯಗಳನ್ನು ಸಹ ಅಲ್ಲಿ ಚಿತ್ರೀಕರಿಸಲಾಗಿದೆ. ಈಗ ತೆಲಂಗಾಣ ಸರ್ಕಾರ ಅನುಮತಿ ನೀಡಿದೆ, ನಾನು ಶೂಟಿಂಗ್ ಪ್ರಾರಂಭಿಸದಿದ್ದರೆ ನಾವು ಭಾರಿ ನಷ್ಟಕ್ಕೆ ಒಳಗಾಗುತ್ತೇವೆ. ಅದೃಷ್ಟವಶಾತ್, ಸುದೀಪ್ ನಂತಹಾ ನಟರು  ನಿರ್ಮಾಪಕನನ್ನು ಬೆಂಬಲಿಸಲು ಒಪ್ಪಿದ್ದಾರೆ.ಚಿತ್ರವು ಫ್ಲೋರ್ ಗಳಲ್ಲಿ ಸಾಗುವದಕ್ಕೆ ಪ್ರಾರಂಭವಾದ ನಂತರದಿಂಡ ಅವರು ಬೆಂಬಲಕ್ಕಿದ್ದಾರೆ.  ನಾವು ಚಿತ್ರೀಕರಣ ಪ್ರಾರಂಭಿಸಲು ನಿರ್ಧರಿಸಿದ ಕೂಡಲೇ, ಅವರು ನಿರ್ದೇಶಕರು, ಕಲಾ ನಿರ್ದೇಶಕರು, ಕ್ಯಾಮೆರಾಮನ್ ಮತ್ತು ನನ್ನೊಂದಿಗೆ ಸಭೆ ನಡೆಸಿದರು ಮತ್ತು ಯೋಜನೆಯನ್ನು ರೂಪಿಸಿದ್ದರು." ಮಂಜುನಾಥ್ ಹೇಳಿದ್ದಾರೆ.

ಫ್ಯಾಂಟಮ್ ಶಾಲಿನಿ ಆರ್ಟ್ ಬ್ಯಾನರ್ ಅಡಿಯಲ್ಲಿ ತಯಾರಿಸಲಾಗುತ್ತಿದೆ. ಇದನ್ನು ಮಂಜುನಾಥ್ ಗೌಡ ಅವರ ಪತ್ನಿ ಶಾಲಿನಿ ಮಂಜುನಾಥ್ ನಿರ್ಮಿಸಿದ್ದಾರೆ. ಈ ಚಿತ್ರವು ಸುದೀಪ್ ಅವರೊಂದಿಗೆ ನಿರೂಪ್ ಭಂಡಾರಿ ಅವರನ್ನೂ ತೆರೆ ಮೇಲೆ ತೋರಿಸಲಿದೆ. ಸಧ್ಯ ಹೈದರಾಬಾದ್‌ನಲ್ಲಿ ನಿರ್ಣಾಯಕ ಭಾಗಗಳನ್ನು ಚಿತ್ರೀಕರಿಸಲಾಗುವುದು, ಕರ್ನಾಟಕ ಸರ್ಕಾರವು ಅನುಮತಿ ನೀಡಿದ ನಂತರ ಪ್ರಮುಖ ದೃಶ್ಯಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗುತ್ತದೆ
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com