ಸೆಟ್ಟೇರಲು ಸಿದ್ದವಾದ 'ಕರ್ವ 3': ಮೊದಲ ಬಾರಿಗೆ ಹಾರರ್ ಚಿತ್ರದಲ್ಲಿ ಮೇಘನಾ ಗಾಂವ್ಕರ್

ಸ್ವರ್ಣಲತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮುಂದಿನ ಚಿತ್ರ "ಕರ್ವ-3" ಆಗಿದ್ದು ಈ ಹಿಂದೆ 6-5 = 2 ಮತ್ತು ದಿಯಾ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ ಕೃಷ್ಣ ಚೈತನ್ಯ ಈಗ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. 
ಕರ್ವ 3
ಕರ್ವ 3
Updated on

ಸ್ವರ್ಣಲತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮುಂದಿನ ಚಿತ್ರ "ಕರ್ವ-3" ಆಗಿದ್ದು ಈ ಹಿಂದೆ 6-5 = 2 ಮತ್ತು ದಿಯಾ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ ಕೃಷ್ಣ ಚೈತನ್ಯ ಈಗ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. 

ಸ್ಯಾಂಡಲ್ ವುಡ್ ಹಿಟ್ ಚಿತ್ರವಾಗಿದ್ದ ಕರ್ವ ಚಿತ್ರದ ಮುಂದುವರಿದ ಭಾಗದೊಡನೆ ಬರಲಿರುವ ನಿರ್ಮಾಪಕ ನವನೀತ್ ನಿರ್ದೇಶನದ "ಕರ್ವ 2" ಚಿತ್ರದ ಮುಂದಿನ ಭಾಗವಾಗಿರಲಿದೆ. "ಕರ್ವ 3" ಮೂಲಕ ವಿಶಾಲ್ ಶೇಖರ್ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ಧರಿಸಿ ಅದೃಷ್ಟ ಪರೀಕ್ಷಿಸಲಿದ್ದಾರೆ.ಹಾರರ್ ಥ್ರಿಲ್ಲರ್ ಕಥಾನಕದಲ್ಲಿ ಬಹುಮುಖ್ಯವಾಗಿ ತಾರಾಂಗಣದ ವಿಚಾರ ಬರಲಿದೆ. - ತಿಲಕ್ ಶೇಖರ್ ಮತ್ತು ಮೇಘನಾ ಗಾಂವ್ಕರ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸ್ಯಾಂಡಲ್ ವುಡ್ ಗೆ ಹೊಸಬರಾಗಿರುವ ವಿಶಾಲ್ ಶೇಖರ್ ಅದ್ಭುತವಾದ ಸ್ಕ್ರಿಪ್ಟ್ ಅನ್ನು ತಂದಿದ್ದಾರೆ, ಇದು ಹಾರರ್ ಕ ಥ್ರಿಲ್ಲರ್ ಗೆ  ವಿಶಿಷ್ಟ ವಿಷಯವಾಗಿದೆ ಎಂದು ನಾನು ಭಾವಿಸಿದೆ. ಅವರು ಈಗ ಸ್ಟೋರಿ ತಯಾರಾಗುತ್ತಿದೆ. ಇದೇ ನನ್ನ ಮುಂದಿನ ಚಿತ್ರವಾಗಿರಲಿದೆ. ಲಾಕ್ ಡೌನ್ ಮುಗಿದು ಶೂಟಿಂಗ್ ಪ್ರಾರಂಭವಾದಾಗ ಈ ಚಿತ್ರ ಸೆಟ್ಟೇರುತ್ತದೆ. ಚಿತ್ರದಲ್ಲಿ ಹಿಂದಿನ ಕರ್ವ ಚಿತ್ರದಲ್ಲಿದ್ದ ಸಾಕಷ್ಟು ಕಲಾವಿದರು ಇರಲಿದ್ದಾರೆ.  ಉಳಿದ ಪಾತ್ರವರ್ಗ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಇನ್ನೂ ಅಂತಿಮ ಮಾಡಿಲ್ಲ." ನಿರ್ಮಾಪಕ ಹೇಳಿದ್ದಾರೆ.

ಲಲಿತಕಲೆ ಮತ್ತು ಆನಿಮೇಷನ್ ಹಿನ್ನೆಲೆಯಿಂದ ಬಂದಿರುವ ವಿಶಾಲ್  ಪ್ರಸ್ತುತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.“ಕೃಷ್ಣ ಚೈತನ್ಯ ನಾನು ಪ್ರಸ್ತುತಪಡಿಸಿದ ಕಿರುಚಿತ್ರವನ್ನು ನೋಡಿದ್ದಾರೆ. ಮತ್ತು ನಾನೊಂದು ಕಥೆ ನಿರೂಪಿಸಲು ಹೇಳಿದ್ದರು,. ಇದು ನನ್ನ ಬಹುನಿರೀಕ್ಷೆಯ ಕಥೆಯಾಗಿತ್ತು. " ವಿಶಾಲ್ ಹೇಳಿದ್ದಾರೆ.

ಮೊದಲ ಬಾರಿಗೆ ಹಾರರ್ ಥ್ರಿಲ್ಲರ್ ನಲ್ಲಿ ಅಭಿನಯ: ಮೇಘನಾ ಗಾಂವ್ಕರ್

ನಿರ್ಮಾಪಕ ಕೃಷ್ಣ ಚೈತನ್ಯ ಅವರೊಂದಿಗಿನ  ಭೇಟಿಯೊಂದರಲ್ಲಿ ಈ ಚಿತ್ರದ ಬಗ್ಗೆ ಮಾತಾಡಿದ್ದೆ. ಅವರು "ಕರ್ವ 3" ಚಿತ್ರ ಮಾಡಲು ಉತ್ಸುಕರಿದ್ದಾರೆ. ನಾನು ನಿರ್ಮಾಪಕನನ್ನು ಭೇಟಿಯಾದಾಗ, ಅವರ ಈ ಯೋಜನೆಯ ಬಗ್ಗೆ ಚರ್ಚಿಸಿದ್ದೆ. ಆಗ ಅದರಲ್ಲಿ ನಾಯಕಿಯಾಗಿ ನಾನು  ನಟಿಸಲು ಅವರು ಅವಕಾಶ ಕಲ್ಪಿಸಿದ್ದಾರೆ. ನಾನು ಕರ್ವ ನೋಡಿದ್ದೇನೆ. ನವನೀತ್ ನಿರ್ದೇಶನದ ಚಿತ್ರ ಇಷ್ಟವಾಗಿತ್ತು. ಇದು ಉತ್ತಮ ವಿಷಯವನ್ನು ಹೊಂದಿತ್ತು, ಮತ್ತು ಸಂಗೀತ ನಿರ್ದೇಶಕ ರವಿ ಬಸ್ರೂರ್ ಅತ್ಯುತ್ತಮ ಹಿನ್ನೆಲೆ ಸಂಗೀತ ಕೊಟ್ಟಿದ್ದರು. ಇದೀಗ ಣಾನು ಕರ್ವ 3 ಭಾಗವಾಗುವ ಮೂಲಕ ಮೊದಲ ಬಾರಿಗೆ ಹಾರರ್ ಥ್ರಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಳ್ಲುತ್ತಿದ್ದೇನೆ.

"ನನಗೆ ನಾಯಕಿಯಾಗಿ ನಟಿಸಲು ಅವಕಾಶ ದೊರೆತಿರುವುದು ನನಗೆ ಖುಷಿ ತಂದಿದೆ. ನಿರ್ಮಾಪಕ ತನ್ನ ಯಾವುದೇ ಯೋಜನೆಗಳಲ್ಲಿ ನನಗೆ ವಿಶೇಷ ಪಾತ್ರವನ್ನು ನೀಡಿದ್ದರೂ ಸಹ ನಾನು ಇದನ್ನು ಒಪ್ಪಿಕೊಳ್ಳುತ್ತಿದ್ದೆ ಏಕೆಂದರೆ ಕೃಷ್ಣ ಚೈತನ್ಯಗೆ ನಾನು‘ ಇಲ್ಲ ’ಎಂದು ಹೇಳಲಾರೆ” ಎಂದು ಅವರು ಹೇಳುತ್ತಾರೆ.

"ನಾವು ಅನೇಕ ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಿತರಾಗಿದ್ದರೂ, ನಮ್ಮನ್ನು  ಒಂದಾಗಿಸಿದ ಮೊದಲ ಚಿತ್ರ ಇದಾಗಿದೆ. ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಾಗ ಕೆಲವು ಯೋಜನೆಗಳಲ್ಲಿ ತಿಲಕ್ ಅವರೊಂದಿಗೆ ಕೆಲಸ ಮಾಡಲು ನನ್ನನ್ನು ಸಂಪರ್ಕಿಸಿದ್ದರೂ ಸಹ,ಸ್ಕ್ರಿಪ್ಟ್ ನಮಗೆ ಸರಿಯಾಗಿ ದೊರಕದ ಕಾರಣ ಅವುಗಳನ್ನು ಕೈಬಿಡಲಾಗಿತ್ತು.ಆದಾಗ್ಯೂ, ಕೃಷ್ಣ ಚೈತನ್ಯ ಅವರು ಆಯ್ಕೆ ಮಾಡಿದ ವಿಶಾಲ್ ಶೇಖರ್ ಅವರ ಈ ಕಥೆ  ಚೆನ್ನಾಗಿದೆ. " ತಿಲಕ್ ಬಗ್ಗೆ ಮೇಘನಾ ಹೇಳಿದ್ದಾರೆ.

ನಿರೀಕ್ಷೆಗಳನ್ನು ಹೆಚ್ಚಿಸುವ ಒಳ್ಳೆ ಕಥೆಗಾಗಿ ನಾನು ಹುಡುಕಿದ್ದೆ: ತಿಲಕ್ ಶೇಖರ್

ನಟ ತಿಲಕ್ ಮತ್ತೆ ಸಕ್ರಿಯವಾಗಲು ಕಾಯುತ್ತಿದ್ದಾರೆ. ಕರ್ವ 3 ಅವರಿಗೊಂದು ಅವಕಾಶ ಕಲ್ಪಿಸಿಕೊಟ್ಟಿದೆ. "ಈ ಯೋಜನೆಯಲ್ಲಿ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ "ಕರ್ವ 3 ಕರ್ವ 2 ಗೆ ಮುನ್ನವೇ ಸೆಟ್ಟೇರಲಿದೆ ಎಂದು ನಟ ನುಡಿದಿದ್ದಾರೆ.

ಮೇಘನಾ ಎದುರು ಜೋಡಿಯಾಗಿರುವ ಬಗ್ಗೆ ಮಾತನಾಡುತ್ತಾ, ತಿಲಕ್, "ಇಷ್ಟು ದಿನ ಒಬ್ಬರಿಗೊಬ್ಬರು ಪರಿಚಿತರಾಗಿರುವುದರಿಂದ, ಒಟ್ಟಿಗೆ ಕೆಲಸ ಮಾಡಲು ನಮಗೆ ಅವಕಾಶ ಸಿಗಲಿಲ್ಲ ಎಂಬುದು ದುರದೃಷ್ಟಕರ. ಆದಾಗ್ಯೂ, ಇದು ಈಗ ನಡೆಯುತ್ತಿದೆ ಎಂದು ನನಗೆ ಖುಷಿಯಾಗಿದೆ, ಮತ್ತು ಉತ್ತಮ ಸ್ಕ್ರಿಪ್ಟ್‌ನೊಂದಿಗೆ ನಾವು ಒಂಡಾಗಿದ್ದು ಸಂತಸತಂದಿದೆ. " 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com