ಯುಗಾದಿಯಂದು ಕಂಬಳ ಸಿನಿಮಾ ಶೂಟಿಂಗ್ ಆರಂಭ

ಭಾರತದ ಉಸೇನ್ ಬೋಲ್ಟ್ ಎಂದೇ ಪ್ರಖ್ಯಾತವಾಗಿರುವ ಕಂಬಳ ಶ್ರೀನಿವಾಸಗೌಡ ಕುರಿತಾದ ಸಿನಿಮಾ ಟೈಟಲ್ ಈಗಾಗಲೇ ರಿಜಿಸ್ಟಾರ್ ಆಗಿದ್ದು, ಯುಗಾದಿ ಹಬ್ಬದಂದು ಸೆಟ್ಟೇರಲಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಭಾರತದ ಉಸೇನ್ ಬೋಲ್ಟ್ ಎಂದೇ ಪ್ರಖ್ಯಾತವಾಗಿರುವ ಕಂಬಳ ಶ್ರೀನಿವಾಸಗೌಡ ಕುರಿತಾದ ಸಿನಿಮಾ ಟೈಟಲ್ ಈಗಾಗಲೇ ರಿಜಿಸ್ಟಾರ್ ಆಗಿದ್ದು, ಯುಗಾದಿ ಹಬ್ಬದಂದು ಸೆಟ್ಟೇರಲಿದೆ. 

ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸೆಟ್ಟೇರಲಿರುವ ಈ ಚಿತ್ರದ ಬಜೆಟ್‌ ಸುಮಾರು 2.5 ಕೋಟಿ ರೂ ವೆಚ್ಚ ಎನ್ನಲಾಗಿದೆ. ನಿರ್ಮಾಪಕ ಲೋಕೇಶ್‌ ಶೆಟ್ಟಿ ಮುಚ್ಚೂರು ಅವರ ಲೆಮನ್‌ ಗ್ರಾಸ್‌ ಸ್ಟುಡಿಯೋ ಪ್ರೊಡಕ್ಷನ್‌ನಡಿಯಲ್ಲಿಈ ಸಿನಿಮಾ ನಿರ್ಮಾಣವಾಗುತ್ತಿದ್ದು ಇದಕ್ಕಾಗಿ ವಾಣಿಜ್ಯ ಮಂಡಳಿಯಲ್ಲಿ ಟೈಟಲ್‌ ನೋಂದಾಯಿಸಲಾಗಿದೆ. 

ಡಾ. ನಿಖಿಲ್‌ ಮಂಜು ಈ ಚಿತ್ರ ನಿರ್ದೇಶಕರಾಗಿದ್ದು,  ತುಮುಲ್ ಬಾಲ್ಯನ್  ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಶ್ರೀನಿವಾಸಗೌಡ ಅವರ ಜೊತೆಗೆ 6 ಕಂಬಳ ಜಾಕಿಗಳನ್ನು ತೆರೆಯ ಮೇಲೆ ತರಲಿದ್ದಾರೆ. ನಿಶಾಂತ್ ಶೆಟ್ಟಿ, ಸುರೇಶ್ ಶೆಟ್ಟಿ ಹುಕ್ಕೇರಿ, ಆನಂದ್ ಇರ್ವತ್ತೂರು, ಆಲದಂಗಡಿ ರವಿಕುಮಾರ್ ಮತ್ತು ಪ್ರವೀಣ್ ಪಣಪಿಲ್ ಇರಲಿದ್ದಾರೆ.

ಒಂದು ರೀತಿ ಲಗಾನ್‌ ಮಾದರಿಯಲ್ಲಿಈ ಸಿನಿಮಾ ಮೂಡಿಬರಲಿದೆ. ಓಟಗಾರರು ಮಾತ್ರವಲ್ಲದೆ ಎಲ್ಲಕಂಬಳ ಕೋಣದ ಯಜಮಾನರು, ಗುತ್ತಿನ ಮನೆಯವರು, ಕಂಬಳ ಸಂಘಟಕರು ಸೇರಿದಂತೆ ಬಹುತೇಕ ಎಲ್ಲರನ್ನೂ ತೊಡಗಿಸಿ ಕಲಾತ್ಮಕವಾಗಿ ಈ ಸಿನಿಮಾ ನಿರ್ಮಿಸಲಿದ್ದೇವೆ ಎನ್ನುತ್ತಾರೆ ನಿರ್ಮಾಪಕ ಲೋಕೇಶ್‌ ಶೆಟ್ಟಿ.

ಕಂಬಳ ಸಿನಿಮಾ ನಿರ್ಮಿಸಲು ಐದು ವರ್ಷದ ಹಿಂದೆಯೇ ನಿರ್ಧರಿಸಿದ್ದೆವು. ಇದನ್ನು ಮೊದಲು ಬಾಲಿವುಡ್‌ನಲ್ಲಿ ಮಾಡುವ ಉದ್ದೇಶ ಹೊಂದಿದ್ದು, ಸುನೀಲ್‌ ಶೆಟ್ಟಿ, ಪ್ರಕಾಶ್‌ ಭಂಡಾರಿ ಸೇರಿದಂತೆ ಪ್ರಮುಖ ನಟರ ಜತೆ ಮಾತುಕತೆಯೂ ಆಗಿತ್ತು. ಆದರೆ ಈಗ ನಿರ್ಧಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಮಾತೃಭಾಷೆ ತುಳು ಮತ್ತು ಕನ್ನಡದಲ್ಲಿ ಮೊದಲು ಈ ಸಿನಿಮಾ ಮಾಡಿ ಬಳಿಕ ಬಾಲಿವುಡ್‌ಗೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com