ಅಂಡರ್ ವರ್ಲ್ಡ್ ವಿಷಯದ ಸಿನೆಮಾ ತಯಾರಿಯಲ್ಲಿದ್ದಾರೆ ನಿರ್ದೇಶಕ ಕೆ ಎಂ ಚೈತನ್ಯ 

ಆದ್ಯ ಚಿತ್ರದ ಬಳಿಕ ನಿರ್ದೇಶಕ ಕೆ ಎಂ ಚೈತನ್ಯ ತಮ್ಮ ಮುಂದಿನ ಸಿನಿಮಾದ ಕೆಲಸದಲ್ಲಿ ತೊಡಗಿದ್ದಾರೆ, ಚಿತ್ರದ ಕಥೆಗೆ ಸ್ಪಷ್ಟ ರೂಪ ತರಲು ತಂಡವನ್ನು ಒಗ್ಗೂಡಿಸುವಲ್ಲಿ ನಿರತರಾಗಿದ್ದಾರೆ.
ಅಂಡರ್ ವರ್ಲ್ಡ್ ವಿಷಯದ ಸಿನೆಮಾ ತಯಾರಿಯಲ್ಲಿದ್ದಾರೆ ನಿರ್ದೇಶಕ ಕೆ ಎಂ ಚೈತನ್ಯ 
Updated on

ಆದ್ಯ ಚಿತ್ರದ ಬಳಿಕ ನಿರ್ದೇಶಕ ಕೆ ಎಂ ಚೈತನ್ಯ ತಮ್ಮ ಮುಂದಿನ ಸಿನಿಮಾದ ಕೆಲಸದಲ್ಲಿ ತೊಡಗಿದ್ದಾರೆ, ಚಿತ್ರದ ಕಥೆಗೆ ಸ್ಪಷ್ಟ ರೂಪ ತರಲು ತಂಡವನ್ನು ಒಗ್ಗೂಡಿಸುವಲ್ಲಿ ನಿರತರಾಗಿದ್ದಾರೆ.

‘’ಅಂಡರ್ ವರ್ಲ್ಡ್ ಬಗ್ಗೆ ಕಥೆ ಬರೆಯುತ್ತಿದ್ದೇನೆ, ಇದು ಸತ್ಯ ಘಟನೆಯಲ್ಲದಿದ್ದರೂ ಕೂಡ ಕರ್ನಾಟಕಕ್ಕೆ ಸಂಬಂಧಿಸಿದ ಇತಿಹಾಸವನ್ನಾಧರಿಸಿದೆ, ಈ ಬಗ್ಗೆ ನಿಖರ ಮಾಹಿತಿ ಪಡೆಯಲು ನಾನು ವಿವಿಧ ಹಿನ್ನಲೆಯ ವ್ಯಕ್ತಿಗಳನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದೇನೆ, ಹಾಗೆಂದು ಇದು ಆ ದಿನಗಳು-2 ಸಿನೆಮಾವಲ್ಲ ಅಥವಾ ಅದಕ್ಕೆ ಹತ್ತಿರದ ಸಿನೆಮಾ ಕೂಡ ಅಲ್ಲ’’ ಎಂದರು ಚೈತನ್ಯ.

ಈ ಚಿತ್ರದಲ್ಲಿ ಬರುವ ಯಾವುದೇ ಪಾತ್ರಗಳು ನಿಜ ಘಟನೆಗೆ ಸಂಬಂಧಿಸಿದ್ದಲ್ಲವಂತೆ. ಆದರೆ ಪರಿಸ್ಥಿತಿಗಳು ಮಾತ್ರ ಆಗಿರಬಹುದು ಎಂದರು.

ಚಿತ್ರಕಥೆಗೆ ಹೆಚ್ಚು ಒತ್ತು ಕೊಡಬೇಕಾಗಿರುವುದರಿಂದ ಸ್ಕ್ರಿಪ್ಟ್ ಬರೆಯಲು ಹೆಚ್ಚು ಸಮಯ ಹಿಡಿಯಲಿದೆ, ಮೊದಲು ಕಥೆ ಬರೆದು ನಂತರ ನಟ-ನಟಿಯರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರಂತೆ.

ಈ ಮಧ್ಯೆ ಚೈತನ್ಯ ಹಾರಿಡಾಸ್ ಸಿನೆಮಾಸ್ ನಡಿ ಚೈತನ್ಯ ಅವರು ಧಾರವಾಹಿ ನಿರ್ಮಿಸುತ್ತಿದ್ದಾರೆ.ಈ ಹಿಂದೆ ಅವರು ಕಿಚ್ಚು, ಮುಗಿಲು, ಒಂದಾನೊಂದು ಕಾಲದಲ್ಲಿ ಮತ್ತು ಪ್ರೀತಿ ಎಂದರೇನು ಧಾರವಾಹಿಗಳನ್ನು ನಿರ್ಮಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com