ಯುಗಾದಿ ಹಬ್ಬದಂದು ಟ್ವಿಟ್ಟರ್ ಇನ್ ಸ್ಟಾಗ್ರಾಂಗೆ ಎಂಟ್ರಿ ಕೊಟ್ಟ ಮೆಗಾಸ್ಟಾರ್ ಚಿರಂಜೀವಿ

ಇಂದು ಶಾರ್ವರಿನಾಮ ಸಂವತ್ಸರ ಯುಗಾದಿ. ಈ ಶುಭ ಸಮಯದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಅಭಿಮಾನಿಗಳಿಗೆ ಸಖತ್ ಖುಷಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಅದೇನೆಂದರೆ ಅವರು ಸಾಮಾಜಿಕ ತಾಣಗಳ ಲೋಕಕ್ಕೆ ಎಂಟ್ರಿ ಆಗಿದ್ದಾರೆ.
ಯುಗಾದಿ ಹಬ್ಬದಂದು ಟ್ವಿಟ್ಟರ್ ಇನ್ ಸ್ಟಾಗ್ರಾಂಗೆ ಎಂಟ್ರಿ ಕೊಟ್ಟ ಮೆಗಾಸ್ಟಾರ್ ಚಿರಂಜೀವಿ
Updated on

ಇಂದು ಶಾರ್ವರಿನಾಮ ಸಂವತ್ಸರ ಯುಗಾದಿ. ಈ ಶುಭ ಸಮಯದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಅಭಿಮಾನಿಗಳಿಗೆ ಸಖತ್ ಖುಷಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಅದೇನೆಂದರೆ ಅವರು ಸಾಮಾಜಿಕ ತಾಣಗಳ ಲೋಕಕ್ಕೆ ಎಂಟ್ರಿ ಆಗಿದ್ದಾರೆ.

ಚಿರಂಜಈವಿ ತಾವು ಇನ್ ಸ್ಟಾಗ್ರಾಂ ಹಾಗೂ ಟ್ವಿಟ್ಟರ್ ಖಾತೆ ತೆರೆದಿದ್ದಾರೆ. ಯುಗಾದಿಯ ಈ ದಿನ ಚಿರಂಜೀವಿ ಹೊಸ ಟ್ವಿಟ್ಟರ್ ಹಾಗೂ ಇನ್ ಸ್ಟಾ ಖಾತೆ ತೆರೆದಿದ್ದು ಅವರ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

ಇನ್ ಸ್ಟಾಗ್ರಾಂ ನಲಿ -  @chiranjeevikonidela ಹೆಸರಿನ ಖಾತೆ ತೆರೆದಿರುವ ಚಿರಂಜೀವಿಯವರನ್ನು ಇದಾಗಲೇ ನಾಲ್ಕು ಲಕ್ಷಕ್ಕೆ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದಾರೆ. ಇನ್ನು ಟ್ವಿಟ್ಟರ್ ನಲ್ಲಿ ಚಿರಂಜೀವಿ ಮೊದಲ ಟ್ವೀಟ್ ಮಾಡಿದ್ದು ಅದು ಮಾರಕ ಕೊರೋನಾವೈರಸ್ ಸಂಬಂಧವಾಗಿದೆ. 

ಯುಗಾದಿ ಹಬ್ಬದ ಶುಭಾಶ್ಯ ಹೇಳಿರುವ ಸ್ಟಾರ್ ನಟ ಎಲ್ಲರೂ ಮನೆಗಳಲ್ಲಿದ್ದು ಮಾರಕ ಕೊರೋನಾ ಹರಡದಂತೆ ಎಚ್ಚರವಾಗಿರಿ ಎಂದು ಸಂದೇಶ ತಿಳಿಸಿದ್ದಾರೆ. 

A post shared by Chiranjeevi Konidela (@chiranjeevikonidela) on

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com