ಕೋವಿಡ್ ಲಾಕ್‌ಡೌನ್ ನಡುವೆಯೇ 'ಪೇಂಟರ್'ಗೆ ಬಣ್ಣ ತುಂಬಿದ ನಿರ್ದೇಶಕ ವೆಂಕಟ್ ಭಾರದ್ವಾಜ್

ಲಾಕ್‌ಡೌನ್ ನಡುವೆಯೂ ನಿರ್ದೇಶಕ ವೆಂಕಟ್ ಭಾರದ್ವಾಜ್ ತಮ್ಮ ಮುಂದಿನ ಚಿತ್ರ ದಿ ಪೇಂಟರ್ ತಯಾರಿಕೆಯಲ್ಲಿ ವಾರಗಳಿಂದ ನಿರತವಾಗಿದ್ದಾರೆ.
ನಿರ್ದೇಶಕ ವೆಂಕಟ್ ಭಾರದ್ವಾಜ್
ನಿರ್ದೇಶಕ ವೆಂಕಟ್ ಭಾರದ್ವಾಜ್

ಲಾಕ್‌ಡೌನ್ ನಡುವೆಯೂ ನಿರ್ದೇಶಕ ವೆಂಕಟ್ ಭಾರದ್ವಾಜ್ ತಮ್ಮ ಮುಂದಿನ ಚಿತ್ರ ದಿ ಪೇಂಟರ್ ತಯಾರಿಕೆಯಲ್ಲಿ ವಾರಗಳಿಂದ ನಿರತವಾಗಿದ್ದಾರೆ.

ವೆಂಕಟ್ ಈ ಹಿಂದೆ ಎ ಡೇ ಇನ್ ದಿ ಸಿಟಿ, ಕೆಂಪಿರ್ವೆ, ಆಮ್ಲೆಟ್  ಎಂಬ ಚಿತ್ರ ನಿರ್ದೇಶನ ಮಾಡಿದ್ದರು. ಎ ಲ್ಯಾಬ್ 19 ಇನ್ನೋವೇಶನ್, ಅಮುರ್ಥ ಫಿಲ್ಮ್ ಸೆಂಟರ್ ಮತ್ತು ಶೇಖರ್ ಜಯರಾಮ್ ಅವರು ಜಂಟೆ ನಿರ್ಮಾಣದ ದಿ ಪೇಂಟರ್ ಚಿತ್ರೀಕರಣವನ್ನು 10 ದಿನಗಳಲ್ಲಿ ನಡೆಸಲಾಗಿದೆ. ಚಿತ್ರ ಈಗ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ, ಮತ್ತು ತಯಾರಕರು ಇಂದು ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡುತ್ತಿದ್ದಾರೆ. ವಿಶೇಷವೆಂದರೆ, ವೆಂಕಟ್ ತಮ್ಮ ಐಟಿ ಅನುಭವವನ್ನು ಇದಕ್ಕಾಗಿ ಬಳಸಿದ್ದಾರೆ.

 ದಿ ಪೇಂಟರ್‌ನಲ್ಲಿ, ಅವರು ಪ್ರಮುಖ ಪಾತ್ರ ವಹಿಸಿದ್ದು ಇನ್ನು ಬಹುತಾರಾಬಳಗವೂ ಇದೆ.  ಬೆಂಗಳೂರು, ಚೆನ್ನೈ, ತುಮಕುರು, ಕನಕಪುರ ಮತ್ತು ಹೆಬ್ಬಾಳಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ 17 ಸದಸ್ಯರ ಸಿಬ್ಬಂದಿ ವರ್ಗವನ್ನು ಹೊಂದಿದೆ.

"ಕೊಲೆ ಮತ್ತು ಕ್ರೈಂ ಬೆಸ್ಟ್ ಥ್ರಿಲ್ಲರ್ ಆಗಲಿದ್ದು ಚಿತ್ರದ ಬಗೆಗೆ ಹೆಚ್ಚಿನ ವಿವರವನ್ನು ಬಿಡುಗಡೆ ಮಾಡಿದ ನಂತರ ಜನರು ನೋಡಲಿದ್ದಾರೆ.ಪ್ರಿಲ್ ಮೊದಲ ವಾರದಲ್ಲಿ ಕೆಲಸ ಪ್ರಾರಂಭಿಸಿದ ಚಿತ್ರದ ಶೂಟಿಂಗ್ ಎರಡನೇ ವಾರದಿಂದ ಪ್ರಾರಂಬವಾಗಿತ್ತು."ನನ್ನ ಸವಾಲಿನ ಲಾಕ್ ಡೌನ್ ಅವಧಿಯಲ್ಲಿ ಐದು ವಿಭಿನ್ನ ಸ್ಥಳಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದೆವು. ಅದನ್ನು ಸುಲಭಗೊಳಿಸಲು, ನನ್ನ ಸ್ಕ್ರಿಪ್ಟ್‌ನ ವಿವರಗಳನ್ನು ಸಂವಾದಗಳು ಮತ್ತು ತಾಂತ್ರಿಕ ವಿಶೇಷದ ಸಲಕರಣೆ ಮೂಲಕ ಹಂಚಿಕೊಳ್ಳಲಾಗುತ್ತಿತ್ತು. ಅದನ್ನು ಪ್ರತಿ ದಿನದ ಕೊನೆಯಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿತ್ತು"

ಪಾತ್ರವರ್ಗ ಮತ್ತು ಸಿಬ್ಬಂದಿ ಈ ಲಾಕ್‌ಡೌನ್ ಅನ್ನು ಬಹಳ ಪರಿಣಾಮಕಾರಿಯಾಗಿ ಬಳಸಿಕೊಂಡರು, ಪಾತ್ರಗಳ ಪಾತ್ರ ಮತ್ತು ತಾಂತ್ರಿಕತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ನಾವು ಮನೆಯಲ್ಲಿ ಕೆಲವು ಲೈಟ್ ಗಳನ್ನು ಹೊಂದಿದ್ದೆವು. ನಮಗೆ ಹೆಚ್ಚುವರಿ ಲೈಟಿಂಗ್ ಅಗತ್ಯವಾಗಿದ್ದಾಗ  ನಾವು ಬಿದಿರಿನ ಕೋಲುಗಳು, ಹಗ್ಗಗಳು, ವಿದ್ಯುತ್ ತಂತಿಗಳು ಮತ್ತು ಬಲ್ಬ್‌ಗಳನ್ನು ಬಳಸಿದ್ದೇವೆ. ಎಲ್ಲವೂ  ಹೆಚ್ಚಾಗಿ ನೈಸರ್ಗಿಕವಾಗಿ ಕಾಣುವಂತೆ ನಾವು ಹೆಚ್ಚಾಗಿ ಮನೆಬಳಕೆ ವಸ್ತುಗಳನ್ನೇ ಬಳಸಿದ್ದೇವೆ.  ಮೇ ಅಂತ್ಯದ ವೇಳೆಗೆ ಪೇಂಟರ್ ಸಿದ್ಧವಾಗಲಿದೆ ಎಂದು ನಿರೀಕ್ಷಿಸುತ್ತಿರುವ ವೆಂಕಟ್ ನಮ್ಮ ಎಡಿಟರ್ ಚಂದನ್ ಕೆಲಸದಲ್ಲಿ ನಿರತವಾಗಿದ್ದಾರೆ. ಅವರ ಕೆಲಸ ಪೂರ್ಣವಾದ ನಂತರ ನಾನು ಬಿಡುಗಡೆ ಯೋಜನೆಗಳನ್ನು ಘೋಷಿಸಬಹುದು"

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com