ಕಾಸ್ಟಿಂಗ್ ಕೌಚ್ (ಪಾತ್ರಕ್ಕಾಗಿ ಪಲ್ಲಂಗ) ಬಗ್ಗೆ ರಣ ವಿಕ್ರಮನ ಬೆಡಗಿ ಅದಾ ಶರ್ಮಾ ಹೇಳಿದ್ದೇನು?

ಕಾಸ್ಟಿಂಗ್ ಕೌಚ್‌ ಕಳೆದೆರಡು ವರ್ಷಗಳ ಹಿಂದೆ ಭಾರತೀಯ ಸಿನಿರಂಗದಲ್ಲಿ ಸಾಕಷ್ಟು ಸುದ್ದಿ ಮಾಡಿದ ವಿಷಯವಾಗಿತ್ತು. ಚಂದನವನ ಸೇರಿದಂತೆ ಬಾಲಿವುಡ್, ಟಾಲಿವುಡ್‌, ಕಾಲಿವುಡ್‌ ಹಾಗೂ ಮಾಲಿವುಡ್‌ ಅಲ್ಲದೇ ಹಾಲಿವುಡ್‌ ನಟಿಯರು ಕೂಡ ಕಾಸ್ಟಿಂಗ್ ಕೌಚ್ ಕುರಿತಂತೆ ತಮ್ಮ ಅನುಭವಗಳನ್ನು ಹೇಳಿದ್ದಾರೆ.
ಅದಾ ಶರ್ಮಾ

ಕಳೆದೊಂದಷ್ಟು ದಿನದಿಂದ ಮೌನವಾಗಿದ್ದ ಕಾಸ್ಟಿಂಗ್ ಕೌಚ್ ವಿಷಯ ಈಗ ಮತ್ತೆ ಸದ್ದು ಮಾಡಿದೆ. ನಟಿ ಅದಾ ಶರ್ಮಾ 'ಕಾಸ್ಟಿಂಗ್ ಕೌಚ್ ಎನ್ನುವುದು ಭಾರತ ಮಾತ್ರವಲ್ಲ, ವಿಶ್ವದೆಲ್ಲೆಡೆ ಜೀವಂತವಾಗಿದೆ' ಎನ್ನುವ ಮೂಲಕ ಈ ಸುದ್ದಿಗೆ ಮತ್ತೆ ಜೀವ ತಂದಿದ್ದಾರೆ. 'ಕಾಸ್ಟಿಂಗ್ ಕೌಚ್ ಎನ್ನುವುದು ಕೇವಲ ದಕ್ಷಿಣ ಹಾಗೂ ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿರುವುದಲ್ಲ. ನನಗನ್ನಿಸಿದ ಹಾಗೆ ಇದು ಪ್ರಪಂಚದೆಲ್ಲೆಡೆ ಹರಡಿದೆ.

ಬಾಲಿವುಡ್‌ನ '1920' ಎಂಬ ಯಶಸ್ವಿ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದವರು ನಟಿ ಅದಾ ಶರ್ಮಾ. ಬಾಲಿವುಡ್‌ ಸೇರಿದಂತೆ ದಕ್ಷಿಣ ಸಿನಿರಂಗದಲ್ಲಿ ಮಿಂಚಿದ್ದರು. ಕಾಸ್ಟಿಂಗ್ ಕೌಚ್ ಎನ್ನುವುದು ಪ್ರಪಂಚದೆಲ್ಲೆಡೆ ಜೀವಂತವಾಗಿದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com