ವೈಲ್ಡ್ ಕರ್ನಾಟಕ ಡಾಕ್ಯೂಮೆಂಟರಿ ರಾಜ್ಯದ ಪ್ರತಿಯೊಬ್ಬರನ್ನು ತಲುಪಲಿದೆ: ರಿಷಬ್ ಶೆಟ್ಟಿ

ನಟ ನಿರ್ದೇಶಕ ರಿಷಬ್​ ಶೆಟ್ಟಿ ಕರ್ನಾಟಕ ಅರಣ್ಯ ಇಲಾಖೆಯ ಅಡಿಯಲ್ಲಿ  ವನ್ಯ ಜೀವಿಗಳ ಕಥೆಯನ್ನು ಹೇಳಲಿದ್ದಾರೆ. ಈ ಕಾರ್ಯಕ್ರಮ ಡಿಸ್ಕವರಿ ಚಾನೆಲ್​ನಲ್ಲಿ ಮೂಡಿ ಬರಲಿದೆ. ಜೂನ್​ 5  ರಂದು ಸಂಜೆ 6 ಗಂಟೆಗೆ ರಿಷಬ್ ಶೆಟ್ಟಿ ಅವರ ಹಿನ್ನಲೆ ಧ್ಚನಿಯಲ್ಲಿ ಕರ್ನಾಟಕ ವನ್ಯಜೀವಿಗಳ ಕುರಿತಾದ ಸಾಕ್ಷ್ಯಚಿತ್ರ ಪ್ರಸಾರವಾಗಲಿದೆ.
ವೈಲ್ಡ್ ಕರ್ನಾಟಕ
ವೈಲ್ಡ್ ಕರ್ನಾಟಕ
Updated on

ನಟ ನಿರ್ದೇಶಕ ರಿಷಬ್​ ಶೆಟ್ಟಿ ಕರ್ನಾಟಕ ಅರಣ್ಯ ಇಲಾಖೆಯ ಅಡಿಯಲ್ಲಿ  ವನ್ಯ ಜೀವಿಗಳ ಕಥೆಯನ್ನು ಹೇಳಲಿದ್ದಾರೆ. ಈ ಕಾರ್ಯಕ್ರಮ ಡಿಸ್ಕವರಿ ಚಾನೆಲ್​ನಲ್ಲಿ ಮೂಡಿ ಬರಲಿದೆ. ಜೂನ್​ 5  ರಂದು ಸಂಜೆ 6 ಗಂಟೆಗೆ ರಿಷಬ್ ಶೆಟ್ಟಿ ಅವರ ಹಿನ್ನಲೆ ಧ್ಚನಿಯಲ್ಲಿ ಕರ್ನಾಟಕ ವನ್ಯಜೀವಿಗಳ ಕುರಿತಾದ ಸಾಕ್ಷ್ಯಚಿತ್ರ ಪ್ರಸಾರವಾಗಲಿದೆ.

ಸ್ಯಾಂಡಲ್​​​ವುಡ್​ ನಟ, ನಿರ್ದೇಶಕ ರಿಷಭ್​ ಶೆಟ್ಟಿ ಹೊಸ ಕಥೆಯನ್ನು ಹೇಳಲು ಹೊರಟ್ಟಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾವನ್ನು ತೆರೆಗೆ ತಂದಿರುವ ರಿಷಬ್ ಈಗ ‘ವೈಲ್ಡ್​​​​ ಕರ್ನಾಟಕ‘ದ ಕಾಡು ಪ್ರಾಣಿಗಳ ಕಥೆಯನ್ನು ಹೇಳಲು ಮುಂದಾಗಿದ್ದಾರೆ.

‘ಸರ್ಕಾರ ಮತ್ತು ಅರಣ್ಯ ಇಲಾಖೆ ಹೆಚ್ಚಿನ ಪ್ರಯತ್ನವನ್ನು ಮಾಡುತ್ತಿದೆ. ನಗರಾಭಿವೃದ್ಧಿ ಮತ್ತು ಜನಸಂಖ್ಯೆಯ ಹೊರತಾಗಿಯು ಅರಣ್ಯ ಇಲಾಖೆ  ವೈಲ್ಡ್​ ಲೈಫ್​​ನತ್ತ ಹೈಚ್ಚಿನ ಪ್ರಯತ್ನವನ್ನು ಕೈಗೊಳ್ಳುತ್ತಿದೆ. ‘ವೈಲ್ಡ್​​ ಕರ್ನಾಟಕ‘ ಕಾರ್ಯಕ್ರಮವನ್ನು ನನ್ನ ಮಾತೃ ಭಾಷೆಯಲ್ಲಿ ಹಿನ್ನಲೆ ಧ್ವನಿ ನೀಡಿದಕ್ಕೆ ನನಗೆ ಹೆಮ್ಮೆ ಆಗುತ್ತಿದೆ‘, ವೈಲ್ಡ್ ಕರ್ನಾಟಕ ರಾಜ್ಯದ ಪ್ರತಿಯೊಬ್ಬರನ್ನು  ತಲುಪಬೇಕು. ಅದರಲ್ಲೂ ವಿಶೇಷವಾಗಿ ಮಕ್ಕಳು ಇದನ್ನು ಇಷ್ಟ ಪಡುತ್ತಾರೆ, ನಮ್ಮ ಕಾಲದಲ್ಲಿ ನಮಗೆ ಶಿಕ್ಷಕರು ಶಾಲೆಯಲ್ಲಿ ವನ್ಯ ಜೀವಿಗಳ ಬಗ್ಗೆ ಹೇಳುತ್ತಿದ್ದರು. ಆದರೆ ಇಂದಿನ ಮಕ್ಕಳಿಗೆ ಮಾಹಿತಿ ಸಿಗುವುದು ತುಂಬಾ ಕಷ್ಟ ಎಂದು ರಿಷಭ್ ಶೆಟ್ಟಿ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ, ಇಂಗ್ಲೀಷ್​, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ 'ವೈಲ್ಡ್​ ಕರ್ನಾಟಕ' ಕಾರ್ಯಕ್ರಮ ಮೂಡಿ ಬರಲಿದೆ. ವೈಲ್ಡ್​ ಕರ್ನಾಟಕ ಕಾರ್ಯಕ್ರಮವನ್ನು ಕನ್ನಡದಲ್ಲಿ ರಿಷಭ್​ ಶೆಟ್ಟಿ ಹಿನ್ನಲೆ ಧ್ವನಿ ನೀಡಿದರೆ, ಇಂಗ್ಲಿಷ್​​ನಲ್ಲಿ ಡೇವಿಡ್​​​​ ಅಟೆಂಡ್ಬರೋ ಅವರ ಹಿನ್ನಲೆ ಧ್ವನಿಯಲ್ಲಿ ಮೂಡಿಬಂದಿದೆ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ನಟ ಪ್ರಕಾಶ್​ ರೈ ಅವರ ನರೇಟ್​ ಮಾಡಿದ್ದಾರೆ. ಹಿಂದಿಯಲ್ಲಿ ರಾಜ್​ ಕುಮಾರ್​ ರಾವ್​  ಹಿನ್ನಲೆ ಧ್ಬನಿ ನೀಡಿದ್ದಾರೆ.

ಮೊದಲು ಬಾರಿಗೆ ಸಿನಿಮಾ ನಟರನ್ನು ಬಳಸಿಕೊಂಡು ವೈಲ್ಡ್​​ ಕರ್ನಾಟಕ ಕಾರ್ಯಕ್ರಮವನ್ನು ನರೇಟ್​ ಮಾಡಲಾಗುತ್ತಿದೆ ಎಂದು ಡಿಸ್ಕವರಿ ಚಾನಲ್​ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದೆ.

ಜೂನ್​​ 5 ರಂದು ‘ವಿಶ್ವ ಪರಿಸರ ದಿನ‘ದ ಅಂಗವಾಗಿ ‘ವೈಲ್ಡ್​ ಕರ್ನಾಟಕ‘ ಸಾಕ್ಷ್ಯ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಚಲನಚಿತ್ರ ನಿರ್ಮಾಪಕರಾದ ಅಮೋಘವರ್ಷ ಜೆಎಸ್​ ಮತ್ತು ಕಲ್ಯಾಣ್​ ಕುಮಾರ್​​ ಅವರು ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಈ ಚಿತ್ರವನ್ನು ನಿರ್ಮಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com