ಮುಂಬೈ: ಹದಿಹರೆಯದ ವಯಸ್ಸಿನಲ್ಲಿ ತನ್ನ ಮೇಲೆ ವ್ಯಕ್ತಿಯೊಬ್ಬರಿಂದ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಸೂಪರ್ ಸ್ಟಾರ್ ಅಮಿರ್ ಖಾನ್ ಪುತ್ರಿ ಇರಾ ಖಾನ್ ಬಹಿರಂಗಪಡಿಸಿದ್ದಾರೆ.
ಇರಾ ಖಾನ್ ನಾಲ್ಕು ವರ್ಷಗಳ ಕಾಲ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಗಿ ಹೇಳಿದ ತಿಂಗಳ ನಂತರ ತನ್ನ ಜೀವನದಲ್ಲಿ ಆದ ಮತ್ತೊಂದು ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ತಾನು 14ನೇ ವಯಸ್ಸಿನವಳಿದ್ದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಆ ವಯಸ್ಸಿನಲ್ಲಿ ಆ ಬಗ್ಗೆ ನನಗೆ ಅರ್ಥವಾಗಿರಲಿಲ್ಲ ಎಂದು 10 ನಿಮಿಷಗಳ ವಿಡಿಯೋದಲ್ಲಿ ತಿಳಿಸಿದ್ದಾಳೆ.
ಇಂತಹ ಪರಿಸ್ಥಿತಿಯಿಂದ ಹೊರಬಂದ ನಂತರ ಮುಂದೆ ಅಂತಹ ಕೆಟ್ಟ ಅನುಭವಾಗಲಿಲ್ಲ. ಆದರೆ, ಅದು ಆಗಾಗ್ಗೆ ಭಾದಿಸುತಿತ್ತು. ತನ್ನ ತಂದೆ ಅಮೀರ್ ಖಾನ್ ಹಾಗೂ ದತ್ತ 2002ರಲ್ಲಿ ವಿಚ್ಛೇದನ ಪಡೆದ ನಂತರವೂ ಸೌಹಾರ್ದಯುತವಾಗಿದ್ದಾರೆ. ನಾವು ಇಡೀ ಕುಟುಂಬದ ಸದಸ್ಯರು ಇಂದಿಗೂ ಸ್ನೇಹಿತರಂತೆ ಇದ್ದೇವೆ ಎಂದು ಹೇಳಿದ್ದಾರೆ.
Advertisement