
ಬೆಂಗಳೂರು: ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ನ ಅಡಿಯಲ್ಲಿ ‘2020’ ಹೊಸ ಚಿತ್ರ ಸಿದ್ಧವಾಗುತ್ತಿದ್ದು, ಕೋಮಲ್ ಕುಮಾರ್ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ.
ಕೊರೊನಾ ವೈರಸ್ ಎಂಬ ರೋಗದಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ಕೋಟ್ಯಾಂತರ ಜನರು ಊಟ-ತಿಂಡಿ ಇಲ್ಲದೇ, ಉದ್ಯೋಗ ಕಳೆದುಕೊಂಡು ಬೀದಿಗೆ ಬಂದರು. ಅನೇಕ ಗಣ್ಯ ವ್ಯಕ್ತಿಗಳು, ಸೆಲೆಬ್ರಿಟಿಗಳು ಇದೇ ವರ್ಷ ಮೃತಪಟ್ಟಿರುವ ಉದಾಹರಣೆಗಳಿವೆ. ಇಷ್ಟೆಲ್ಲಾ ಘಟನೆಗಳು ಸಂಭವಿಸಿದ ವರ್ಷವನ್ನು ಯಾರೊಬ್ಬರು ಮರೆಯಲು ಸಾಧ್ಯವಿಲ್ಲ. ಇದೀಗ, '2020' ಎಂಬ ಹೆಸರಿನಲ್ಲಿ ಕನ್ನಡದಲ್ಲೊಂದು ಸಿನಿಮಾ ಶುರುವಾಗಿದೆ.
'ಮಜಾಟಾಕೀಸ್' ಕಾರ್ಯಕ್ರಮಕ್ಕೆ ಸಂಭಾಷಣೆ ಬರೆಯುತ್ತಿದ್ದ ಹಾಗೂ ರಾಬರ್ಟ್ ಚಿತ್ರಕ್ಕೆ ಸಂಭಾಷಣೆ ಮಾಡಿರುವ ರಾಜಶೇಖರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೊದಲೇ ಹೇಳಿದಂತೆ ಇದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಎನ್ನಲಾಗಿದೆ. ಇದೀಗ, 2020 ಎಂದು ಹೆಸರಿಟ್ಟಿರುವುದು ನಿರೀಕ್ಷೆ ಹೆಚ್ಚಿಸಿದೆ.
ಧನ್ಯ ಬಾಲಕೃಷ್ಣ, ಕುರಿ ಪ್ರತಾಪ್ ತಬಲಾ ನಾಣಿ, ಗಿರಿ, ಅಪೂರ್ವ, ಉಮೇಶ್ ಹಾಗೂ ಇತರರೂ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಾಬರ್ಟ್, ವಿಕ್ಟರಿ-2, ಅಮ್ಮ ಐ ಲವ್ ಯು, ತ್ರಿಬಲ್ ರೈಡಿಂಗ್, ಉಪಾಧ್ಯಕ್ಷ ಹಾಗೂ ಇನ್ನೂ ಹಲವು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ.
Advertisement