2020 ನನ್ನ ಪಾಲಿಗೆ ಉತ್ತಮ: ಕೊರೋನಾ ಸಂಕಷ್ಟ ಕಾಲದಲ್ಲೂ ರಚಿತಾ ಮುಂದಿವೆ ಸಾಲು ಸಾಲು ಸಿನಿಮಾ!

ಕೊರೋನಾ ಸಾಂಕ್ರಾಮಿಕ ಕಾಲದಲ್ಲೂ ನಟಿ ರಚಿತಾ ರಾಮ್ ಸಖತ್ ಬ್ಯುಸಿಯಾಗಿದ್ದಾರೆ, ಒಂದರ ಹಿಂದೆ ಒಂದರಂತೆ ಹಲವು ಸಿನಿಮಾಗಳಿಗೆ ನಟಿ ಸಹಿ ಮಾಡಿದ್ದಾರೆ. ಕಿರುತೆರೆಯ ಕಾಮಿಡಿ ರಿಯಾಲಿಟಿ ಶೋ ಮಜಾಭಾರತಕ್ಕೂ ಜಡ್ಜ್ ಆಗಿದ್ದಾರೆ.
ರಚಿತಾ ರಾಮ್
ರಚಿತಾ ರಾಮ್
Updated on

ಕೊರೋನಾ ಸಾಂಕ್ರಾಮಿಕ ಕಾಲದಲ್ಲೂ ನಟಿ ರಚಿತಾ ರಾಮ್ ಸಖತ್ ಬ್ಯುಸಿಯಾಗಿದ್ದಾರೆ,  ಒಂದರ ಹಿಂದೆ  ಒಂದರಂತೆ ಹಲವು ಸಿನಿಮಾಗಳಿಗೆ ನಟಿ ಸಹಿ ಮಾಡಿದ್ದಾರೆ. ಕಿರುತೆರೆಯ ಕಾಮಿಡಿ ರಿಯಾಲಿಟಿ ಶೋ ಮಜಾಭಾರತಕ್ಕೂ ಜಡ್ಜ್ ಆಗಿದ್ದಾರೆ.

ಹಲವು ಸಿನಿಮಾಗಳು ಶೂಟಿಂಗ್ ಗೆ ಮತ್ತು ರಿಲೀಸ್ ಗೆ ಸಿದ್ದವಾಗಿವೆ, ಮಲಯಾಳಂ ನಿರ್ದೇಶಕ ಅರುಣ್ ಕುಮಾರ್ ಮತ್ತು ಸಾಬು ಅಲೋಯಿಸಸ್ ಅವರ ಮುಂದಿನ ಸಿನಿಮಾಗೂ ರಚಿತಾ ಸಹಿ ಮಾಡಿದ್ದಾರೆ.

ಸಿಲ್ವರ್ ಟ್ರೈನ್ ಇಂಟರ್‌ನ್ಯಾಷನಲ್ ಸಹಯೋಗದೊಂದಿಗೆ ನಿರ್ದೇಶಕ ಲೋಹಿತ್ ಹೆಚ್ ಅವರ ನಿರ್ಮಾಣ ಸಂಸ್ಥೆಯಾದ ಫ್ರೈಡೇ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಸಿನಿಮಾ ಇದಾಗಿದೆ.

ಕಥೆ ನನಗೆ ತುಂಬಾ ಮೆಚ್ಚುಗೆಯಾಯಿತು. ತಂದೆಯೊಂದಿಗೆ ನಾಯಕಿಯ ಜೀವನ ಪಯಣ ಕಥೆಯ ಹಂದರ, ಇದು ನನ್ನ ಜೀವನಕ್ಕೆ ತುಂಬಾ ಹತ್ತಿರವಾದದ್ದು, ಎರಡನೇಯದ್ದು ಪಾತ್ರ ತುಂಬಾ ಸವಾಲಿನದ್ದಾಗಿದೆ, ಪ್ರತಿಭೆ ತೋರಿಸಲು ಹೆಚ್ಚಿನ ಅವಕಾಶವಿದೆ.

ಒಂದೇ ಪ್ರಾಜೆಕ್ಟ್ ನಲ್ಲಿ ಇಬ್ಬರು ನಿರ್ದೇಶಕರ ಜೊತೆ ಕೆಲಸ ಮಾಡುತ್ತಿರುವುದು ಇದೇ ಮೊದಲು,  ಇಬ್ಬರು ಮಲಯಾಳಂ ಸಿನಿಮಾ ರಂಗದವರಾಗಿದ್ದಾರಂ, ಇಬ್ಬರಿಗೂ ತಮ್ಮ ಕೆಲಸದ ಬಗ್ಗೆ ತುಂಬಾ ಅಭಿರುಚಿ ಹೊಂದಿದ್ದಾರೆ. ಮುಂದಿನ ತಿಂಗಳು ಶೂಟಿಂಗ್ ಆರಂಭವಾಗಲಿದ್ದು, ಆ ವೇಳೆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದ್ದೇನೆ ಎಂದು ರಚಿತಾ ರಾಮ್ ಹೇಳಿದ್ದಾರೆ.

2020 ರಲ್ಲಿ ಕೊರೋನಾ ಸಾಂಕ್ರಾಮಿಕದಿಂದ ಇಡೀ ಜಗತ್ತು ನಲುಗಿದೆ, ಹೀಗಾಗಿ 2020ನೇ ವರ್ಷವನ್ನು ಪ್ರಪಂಚವೇ ಶಪಿಸುತ್ತಿದ್ದರೇ ನಟಿ ರಚಿತಾ ರಾಮ್ ತಮ್ಮ ಪಾಲಿಗೆ ಉತ್ತಮವಾಗಿದೆ ಎಂದು ಹೇಳುತ್ತಾರೆ.

ಲಾಕ್ ಡೌನ್ ಸಮಯದಲ್ಲಿ ನಾನು ಕಥೆ ಕೇಳುವುದನ್ನು ನಿಲ್ಲಿಸಲಿಲ್ಲ, ಸ್ಕ್ರಿಪ್ಟ್ ಕೇಳಿ ಅದರಲ್ಲಿ ಉತ್ತಮವಾದದ್ದನ್ನು ಆರಿಸಿಕೊಂಡಿದ್ದೇನೆ, ಹಲವು ನಿರ್ಮಾಪಕರು ನನ್ನನ್ನು ಭೇಟಿ ಮಾಡಿದ್ದರು.  ಹಲವರು ನಾನು ಹಿಂದೆಂದೂ ಕೇಳಿರದಂತ ಕಥೆ ತಂದಿದ್ದರು. ಹೀಗಾಗಿ ಅವನ್ನು ರಿಜೆಕ್ಟ್ ಮಾಡಲಿಲ್ಲ.

ಪ್ರತಿ ಸಿನಿಮಾ  ಬಗ್ಗೆ ನಾನು ನಿರ್ದೇಶಕರ ಜೊತೆ ಚರ್ಚಿಸಿದ್ದೇನೆ, ನಿರ್ಧಿಷ್ಟ ಯೋಜನೆ ಮತ್ತು ಸಮಯದಂತೆ ಶೂಟಿಂಗ್ ನಡೆಯಲಿದೆ ಎಂದು ರಚಿತಾ ರಾಮ್ ತಿಳಿಸಿದ್ದಾರೆ.

ರಮೇಶ್ ಅರವಿಂದ್ ನಿರ್ದೇಶನದ 100 ಬಿಡುಗಡೆಯಾಗಬೇಕಿದೆ. ನಂತರ ಪ್ರೇಮ್ ಅವರ ಏಕ್ ಲವ್ ಯಾ ಸಿನಿಮಾದಲ್ಲಿಯೂ ರಚಿತಾ ಅಭಿನಯಿಸಿದ್ದಾರೆ. ತೆಲುಗಿನ ಮಚಿ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿರುವ ರಚಿತಾ ಎಸ್ ರವೀಂದ್ರನಾಥ್ ಅವರ ಮಾನ್ಸೂನ್ ರಾಗಾದಲ್ಲಿ ನಟಿಸುತ್ತಿದ್ದಾರೆ.

ವಿಜಯ್ ಎಸ್ ಗೌಡ ನಿರ್ದೇಶನದ ಲಿಲ್ಲಿ, ಸತ್ಯ ರಾಯಳ ನಿರ್ದೇಶನದ ಏಪ್ರಿಲ್, ಪ್ರಜ್ವಲ್ ದೇವರಾಜ್ ಅಭಿನಯದ ವೀರಂ, ಮ್ಯಾಟಿನಿಯಲ್ಲಿ ಸತೀಶ್ ನಿನಾಸಂ ಮತ್ತು ಮಯೂರ ರಾಘವೇಂದ್ರ ನಿರ್ದೇಶನದ ಪಂಕಜಾ ಕಸ್ತೂರಿ ಸಿನಿಮಾದಲ್ಲಿಯೂ ರಚಿತಾ ನಟಿಸುತ್ತಿದ್ದಾರೆ.

ಮುಂದಿನ ವರ್ಷ ನಾನು ಫುಲ್ ಬ್ಯುಸಿಯಾಗಲಿದ್ದೇನೆ, ವಿವಿಧ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ರಚಿತಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com