ರಾಜಕೀಯ ಪಕ್ಷವನ್ನು ನೋಡುವ ಹೊಸ ವಿಧಾನ: ಉಪ್ಪಿ 'ಪ್ರಜಾಕೀಯ'ವನ್ನು ಹಾಡಿ ಹೊಗಳಿದ ಆರ್‌ಜಿವಿ

ನಟ, ನಿರ್ದೇಶಕ,  ಉತ್ತಮ ಪ್ರಜಾಕೀಯ ಪಕ್ಷದ ನಾಯಕ ರಿಯಲ್ ಸ್ಟಾರ್ ಉಪೇಂದ್ರ ಅವರ  ಉತ್ತಮ ಪ್ರಜಾಕೀಯ ಪಕ್ಷದ ಬಗ್ಗೆ ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಹೋಪಾಲ್ ವರ್ಮಾ ಶಹಬಾಸ್ ಹೇಳಿದ್ದಾರೆ. 
ರಾಮ್ ಗೋಪಾಲ್ ವರ್ಮಾ ಉಪೇಂದ್ರ
ರಾಮ್ ಗೋಪಾಲ್ ವರ್ಮಾ ಉಪೇಂದ್ರ
Updated on

ನಟ, ನಿರ್ದೇಶಕ,  ಉತ್ತಮ ಪ್ರಜಾಕೀಯ ಪಕ್ಷದ ನಾಯಕ ರಿಯಲ್ ಸ್ಟಾರ್ ಉಪೇಂದ್ರ ಅವರ  ಉತ್ತಮ ಪ್ರಜಾಕೀಯ ಪಕ್ಷದ ಬಗ್ಗೆ ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಹೋಪಾಲ್ ವರ್ಮಾ ಶಹಬಾಸ್ ಹೇಳಿದ್ದಾರೆ. 

ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷದ ಸಂಬಂಧ ಟ್ವೀಟ್ ಮಾಡಿರುವ ವರ್ಮಾ "ರಾಜಕೀಯ ಪಕ್ಷವೊಂದನ್ನು ಕ್ರಾಂತಿಕಾರಿಯಾದ ಮಾರ್ಗದಲ್ಲಿ ನೋಡುವುದಕ್ಕೆ ಇದು ಹೊಸ ಹಾದಿಯಾಗಿದೆ, ನಿಮಗೆ ಅಭಿನಂದನೆಗಳು" ಎಂದಿದ್ದಾರೆ.

ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷದ ನೇರೆಲ್ಲಾ ರಾಜಕೀಯ ಪಕ್ಷಗಳಿಗಿಂತ ತೀರಾ ವಿಭಿನ್ನವಾದ ಆಲೋಚನೆ ಹಾಗೂ ಉದ್ದೇಶ ಹೊಂದಿದೆ. ಇದನ್ನೇ ವರ್ಮಾ ತಮ್ಮ ಟ್ವೀಟ್ ನಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ವರ್ಮಾ ಅವರ ಟ್ವೀಟ್ ಗೆ ಉಪೇಂದ್ರ ಸಹ ಟ್ವೀಟ್ ಮೂಲಕವೇ ಧನ್ಯವಾದ ಹೇಳಿದ್ದಾರೆ.

ಉಪೇಂದ್ರ ಇತ್ತೀಚೆಗೆ ತಮ್ಮ ಪಕ್ಷದ ಹೊಸ ವೆಬ್ಸೈಟ್ ಪ್ರಾರಂಭಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿಕೊಂಡಿರುವ ಉಪ್ಪಿ "ನಮ್ಮ ಉತ್ತಮ ಪ್ರಜಾಕೀಯ ಪಕ್ಷದ ಹೊಸ ವೆಬ್ಸೈಟ್ ನೋಡಿ ನಿಮ್ಮ ಉಪಯುಕ್ತ ಸಲಹೆ ತಿಳಿಸಿ" ಎಂದು ಕೇಳಿದ್ದಾರೆ.

ನಮ್ಮ ಉತ್ತಮ ಪ್ರಜಾಕೀಯ ಪಕ್ಷದ ಹೊಸ ವೆಬ್ಸೈಟ್ ನೋಡಿ ನಿಮ್ಮ ಉಪಯುಕ್ತ ಸಲಹೆ ತಿಳಿಸಿ ....

Please visit our new website of UPP and give your valuable feedback ....https://t.co/qWMqiU19An

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com