ಪುನೀತ್ 'ಜೇಮ್ಸ್' ಚಿತ್ರಕ್ಕೆ ದಕ್ಷಿಣ ಭಾರತದಲ್ಲಿ ಖ್ಯಾತರಾದ ರಾಮ್-ಲಕ್ಷ್ಮಣ್ ಸಾಹಸ ನಿರ್ದೇಶನ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಜೇಮ್ಸ್' ಕಮರ್ಷಿಯಲ್ ಮನೋರಂಜನಾತ್ಮಕ ಚಿತ್ರದಲ್ಲಿ ಅತ್ಯುತ್ತಮ ಸಾಹಸ, ಹೊಡೆದಾಟದ ಸನ್ನಿವೇಶಗಳಿರುವುದನ್ನು ನಿರ್ದೇಶಕ ಚೇತನ್ ಕುಮಾರ್ ಖಚಿತಪಡಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
Updated on

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಜೇಮ್ಸ್' ಕಮರ್ಷಿಯಲ್ ಮನೋರಂಜನಾತ್ಮಕ  ಚಿತ್ರದಲ್ಲಿ ಅತ್ಯುತ್ತಮ ಸಾಹಸ, ಹೊಡೆದಾಟದ ಸನ್ನಿವೇಶಗಳಿರುವುದನ್ನು ನಿರ್ದೇಶಕ ಚೇತನ್ ಕುಮಾರ್ ಖಚಿತಪಡಿಸಿದ್ದಾರೆ.

ಈ ಮಧ್ಯೆ ಜೇಮ್ಸ್ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕರಾದ ರಾಮ್  ಲಕ್ಷ್ಮಣ್ ಎಂಟ್ರಿ ನೀಡಿದ್ದಾರೆ.ಮೊದಲ ಬಾರಿಗೆ ಚೇತನ್ ಕುಮಾರ್ ನಿರ್ದೇಶನ ಹಾಗೂ ಪವರ್ ಸ್ಟಾರ್ ಅಭಿನಯದಲ್ಲಿ ಮೂಡಿಬರುತ್ತಿರುವ ಜೇಮ್ಸ್ ಚಿತ್ರದ ಚಿತ್ರೀಕರಣ ಅಕ್ಟೋಬರ್ 13 ರಿಂದ ಪುನರ್ ಆರಂಭಗೊಳ್ಳಲಿದ್ದು, ಅಲ್ಲಿ ಸಾಹಸ ನಿರ್ದೇಶಕರು ತಂಡವನ್ನು ಸೇರಲಿದ್ದಾರೆ.

ಟಾಲಿವುಡ್ ನಲ್ಲಿ ಸಾಹಸ ನಿರ್ದೇಶನಕ್ಕೆ ಹೆಸರಾಗಿರುವ ರಾಮ್- ಲಕ್ಷ್ಮಣ್ ಕನ್ನಡದಲ್ಲಿಯೂ ಬೇಡಿಕೆಯಿದೆ. ಜೇಮ್ಸ್  ಚಿತ್ರೀಕರಣದ ಸ್ಥಳಗಳನ್ನು ನಿರ್ದೇಶಕರು ಇತ್ತೀಚಿಗೆ ಅಂತಿಮಗೊಳಿಸಿದ್ದಾರೆ. ಈ ಚಿತ್ರಕ್ಕೆ ಕಿಶೋರ್ ಪತಿಕೊಂಡ ಬಂಡವಾಳ ಹೂಡುತ್ತಿದ್ದು, ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ. 

ಜೇಮ್ಸ್ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಮುನ್ನ ಪುನೀತ್ ರಾಜ್ ಕುಮಾರ್ , ಸಂತೋಷ್ ಅನಂದ್ ರಾಮ್ ಅವರ ಯುವರತ್ನ ಚಿತ್ರದ ಹಾಡುಗಳ ಚಿತ್ರೀಕರಣವನ್ನು ಮುಗಿಸಲಿದ್ದಾರೆ. ಪ್ರಸ್ತುತ ಅವರು ಗೋವಾದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಎರಡು ಮೂರು ದಿನಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com