ಕುಂಕುಮ್ ಭಾಗ್ಯ ಖ್ಯಾತಿಯ ಜರೀನಾ ರೋಷನ್‌ ನಿಧನ

ಹಿಂದಿ ಕಿರುತೆರೆಯ ಹಲವು ಸೀರಿಯಲ್‌ಗಳಲ್ಲಿ ನಟಿಸುವ ಮೂಲಕ ಮನೆ ಮಾತಾಗಿದ್ದ ನಟಿ ಜರೀನಾ ರೋಷನ್‌ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಜರೀನಾ ಖಾನ್ ರೋಷನ್
ಜರೀನಾ ಖಾನ್ ರೋಷನ್
Updated on

ನವದೆಹಲಿ: ಹಿಂದಿ ಕಿರುತೆರೆಯ ಹಲವು ಸೀರಿಯಲ್‌ಗಳಲ್ಲಿ ನಟಿಸುವ ಮೂಲಕ ಮನೆ ಮಾತಾಗಿದ್ದ ನಟಿ ಜರೀನಾ ರೋಷನ್‌ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

'ಕುಂಕುಮ ಭಾಗ್ಯ', 'ಯೇ ರಿಷ್ತಾ ಕ್ಯಾ ಕೆಹಲಾತಾ ಹೈ' ಸೇರಿದಂತೆ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ಜರೀನ್‌ ನಟಿಸಿದ್ದರು.

'ಕುಂಕುಮ ಭಾಗ್ಯ' ಧಾರಾವಾಹಿಯಲ್ಲಿ ಜರೀನಾ ನಿಭಾಯಿಸುತ್ತಿದ್ದ ಇಂದೂ ಸೂರಿ ಅಥವಾ ಇಂದೂ ದೇಸಾಯಿ ಎಂಬ ಪಾತ್ರ ತುಂಬ ಜನಪ್ರಿಯವಾಗಿತ್ತು. ಈ ಧಾರಾವಾಹಿಯಲ್ಲಿ ಅವರ ಜೊತೆ ತೆರೆಹಂಚಿಕೊಂಡಿದ್ದ ಶಬೀರ್‌ ಅಹ್ಲುವಾಲಿಯಾ ಮತ್ತು ಶ್ರೀತಿ ಜಾ ಸೋಶಿಯಲ್‌ ಮೀಡಿಯಾ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
 

View this post on Instagram

Ye chand sa Roshan Chehera

A post shared by Shabir Ahluwalia (@shabirahluwalia) on

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com