ಪ್ರತಿಯೊಂದು ಕೆಲಸಕ್ಕೂ ಅದರದೇ ಮೌಲ್ಯವಿದೆ, ಅದನ್ನು ಅರ್ಥಮಾಡಿಕೊಳ್ಳಬೇಕು: ರಿಯಲ್ ಸ್ಟಾರ್ ಉಪೇಂದ್ರ

ಈ ಬಾರಿ ಕೋವಿಡ್ ಬಿಕ್ಕಟ್ಟಿನ ಕಾರಣದಿಂದಾಗಿ ರಿಯಲ್ ಸ್ಟಾರ್ ಉಪೇಂದ್ರ ಸೆಪ್ಟೆಂಬರ್ 18 ರಂದು ತಮ್ಮ ಜನ್ಮದಿನವನ್ನು ತಮ್ಮ ಅಭಿಮಾನಿಗಳೊಂದಿಗೆ ಆಚರಿಸುತ್ತಿಲ್ಲ. ಈ ಬಗ್ಗೆ  ವಿಡಿಯೋ ಸಂದೇಶದ ಮೂಲಕ ಸ್ಪಷ್ಟಪಡಿಸಿರುವ ನಟ ವಿಶೇಷ ದಿನದಂದು ತಮ್ಮ ಅಭಿಮಾನಿಗಳೊಂದಿಗೆ ಇರಲು ಸಾಧ್ಯವಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಉಪೇಂದ್ರ
ಉಪೇಂದ್ರ
Updated on

ಈ ಬಾರಿ ಕೋವಿಡ್ ಬಿಕ್ಕಟ್ಟಿನ ಕಾರಣದಿಂದಾಗಿ ರಿಯಲ್ ಸ್ಟಾರ್ ಉಪೇಂದ್ರ ಸೆಪ್ಟೆಂಬರ್ 18 ರಂದು ತಮ್ಮ ಜನ್ಮದಿನವನ್ನು ತಮ್ಮ ಅಭಿಮಾನಿಗಳೊಂದಿಗೆ ಆಚರಿಸುತ್ತಿಲ್ಲ. ಈ ಬಗ್ಗೆ ವಿಡಿಯೋ ಸಂದೇಶದ ಮೂಲಕ ಸ್ಪಷ್ಟಪಡಿಸಿರುವ ನಟ ವಿಶೇಷ ದಿನದಂದು ತಮ್ಮ ಅಭಿಮಾನಿಗಳೊಂದಿಗೆ ಇರಲು ಸಾಧ್ಯವಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ಮನೆಯ ಬಳಿ ಆ ದಿನ ಅಭಿಮಾನಿಗಳು ಸೇರುವುದು ಬೇಡವೆಂದು ಅವರು ಹೇಳಿದ್ದಾರೆ. ಆದರೆ ತಾವು ಆ ದಿನ ಫೇಸ್‌ಬುಕ್ ಲೈವ್ ಮೂಲಕ ಅವರೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ರಿಯಲ್ ಸ್ಟಾರ್ ಉಪೇಂದ್ರ ಮುಂಬರುವ ನಿರ್ದೇಶನದ ಬಗ್ಗೆಯೂ ಮಾತನಾಡಿದ್ದು, ಶೀಘ್ರದಲ್ಲೇ ಅವರು ಯೋಜನೆಯ ವಿವರಗಳನ್ನು ಚಿತ್ರದ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.ಈಗ ಬಹುತೇಕ ಚಿತ್ರಕಥೆ ಮುಕ್ತಾಯವಾಗಿದೆ. ತಮ್ಮ ನಿರ್ದೇಶನದ ಯೋಜನೆಯನ್ನು ಘೋಷಿಸಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೇನೆ ಎಂದೂ ಅವರು ಹೇಳಿದ್ದಾರೆ. ಆದರೆ ಚಿತ್ರ ಯಾವ ವಿಷಯವನ್ನು ಒಳಗೊಂಡಿದೆ ಎಂದಾಗಲಿ ಬೇರಾವ ಮಾಹಿತಿಯನ್ನಾಗಲಿ ನೀಡದ ನಟ , 2021 ರಲ್ಲಿ ಚಿತ್ರದ ವಿವರಗಳನ್ನು ಪ್ರಕಟಿಸುವುದಾಗಿ ಹೇಳಿದರು.

ಆರ್ ಚಂದ್ರು ನಿರ್ದೇಶನದ "ಕಬ್ಜ" ಟೀಂ ನಟನ ಜನ್ಮದಿನದಂದು ವಿಶೇಷ ಪೋಸ್ಟರ್ ಅನ್ನುಬಿಡುಗಡೆಗೊಳಿಸಲಿದೆ. ಇದನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಿಡುಗಡೆ ಮಾಡಲಿದ್ದಾರೆ.

ತನ್ನ ಜನ್ಮದಿನದ ಯೋಜನೆಗಳ ಬಗ್ಗೆ ತನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಸ್ವಲ್ಪ ವಿರಾಮ ತೆಗೆದುಕೊಳ್ಳುವಿರಾ ಎಂದು ಉಪೇಂದ್ರ ಅವರನ್ನು ಕೇಳಿದರೆ "ಇದು ಪ್ರಜಾಕೀಯ" ಎಂದು ಶೀಘ್ರವಾಗಿ ಉತ್ತರಿಸುತ್ತಾರೆ. ರಾಜಕೀಯಕ್ಕೆ ಕಾಲಿಟ್ಟ ನಟ, ಜನರೊಂದಿಗೆ ಸಂಪರ್ಕ ಸಾಧಿಸುವ ಆಡಳಿತ ವಿಧಾನವನ್ನು ನೆಚ್ಚಿದ್ದಾರೆ. ಪ್ರಜಾಕೀಯ ಅವರ ಜೀವನಾಡಿ, ಮತ್ತು ಅವರು ತಮ್ಮ ಪಕ್ಷದ ಮೂಲಕ ಜಾಗೃತಿ ಮೂಡಿಸುವುದಕ್ಕೆ ಅವರಿಗೆ ಖುಷಿ ಇದೆ. "ಹೋಂ ಮಿನಿಸ್ಟರ್" ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು ಪ್ರಸ್ತುತ ನಟ ಮೂರು ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಉಪೇಂದ್ರ ಅವರ "ಬುದ್ದಿವಂತ 2" ಚಿತ್ರೀಕರಣದ ಕೊನೆಯ ಹಂತದಲ್ಲಿದ್ದರೆ ಓಂ ಪ್ರಕಾಶ್ ರಾವ್ ಅವರ "ವೇದವ್ಯಾಸ" ಚಿತ್ರಕ್ಕೆ ಡೇಟ್ಸ್ ಕೊಟ್ಟಿದ್ದಾರೆ. ಆರ್ ಚಂದ್ರು ಅವರ "ಕಬ್ಜ"  ಚಿತ್ರೀಕರಣವನ್ನು ಪುನರಾರಂಭಿಸಲು ಎದುರು ನೋಡುತ್ತಿದ್ದಾರೆ.ಈ ಎಲ್ಲಾ ಕೆಲಸದ ಹೊರತಾಗಿಯೂ  ಉಪೇಂದ್ರ ಅವರು ತಮ್ಮ ಕೈಯಲ್ಲಿ ಸಾಕಷ್ಟು ಸಮಯವನ್ನು ಹೊಂದಿದ್ದಾರೆ. ಕೋವಿಡ್ ಸಾಂಕ್ರಾಮಿಕವು ಎಲ್ಲರ ಜೀವನವನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಿದರೂ, ನಟ-ನಿರ್ದೇಶಕ-ಬರಹಗಾರರಾದ ಉಪೇಂದ್ರ ಚಿತ್ರಕಥೆ, ಕೃಷಿ, ಚಲನಚಿತ್ರಗಳ ಬಗ್ಗೆ ಚರ್ಚೆ ಮತ್ತು ತನ್ನ ಕುಟುಂಬದೊಂದಿಗೆ ಸಮಯ ಕಳೆಯುವುದರಲ್ಲಿ ಈ ಕಾಲವನ್ನು ಬಳಕೆ ಮಾಡಿದ್ದರು.

“ಪ್ರತಿಯೊಂದು ಕೃತಿಗೂ ಅದರದ್ದೇ ಆದ ಮೌಲ್ಯವಿದೆ ಮತ್ತು ಅದನ್ನು ಆನಂದಿಸಬೇಕಾಗಿದೆ. ನಾವು ಹೋಲಿಕೆ ಮಾಡಲು ಪ್ರಾರಂಭಿಸಿದಾಗ ಸಮಸ್ಯೆ ಉದ್ಭವಿಸುತ್ತದೆ" ಸಾಂಕ್ರಾಮಿಕ ಮತ್ತು ಪೋಸ್ಟ್ ಲಾಕ್ ಡೌನ್ ಮಧ್ಯೆ "ವೇದವ್ಯಾಸ"  ಚಿತ್ರೀಕರಣದ ಬಗ್ಗೆ ಮಾತನಾಡುತ್ತಾ, ಉಪೇಂದ್ರ"ಮಾಸ್ಕ್ ಧರಿಸುವುದು  ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಹೊರತುಪಡಿಸಿ, ಸಾಮಾನ್ಯ ಜನಜೀವನ ಸಹಜ ಸ್ಥಿತಿಗೆ ಬರುತ್ತಿರುವುದನ್ನು ನಾನು ನೋಡುತ್ತಿದ್ದೇನೆ.  ನಾನು ಎಲ್ಲೆಡೆ ಜನಸಂದಣಿಯನ್ನು ನೋಡುತ್ತಿದ್ದು  ಇನ್ನು ಮುಂದೆ ಸಾರ್ವಜನಿಕರಲ್ಲಿ ಕೋವಿಡ್ ಭಯ ಇರುವುದಿಲ್ಲ ಎಂದು  ತೋರುತ್ತಿದೆ. ” ಎಂದಿದ್ದಾರೆ. 

"ಕಬ್ಜ"ದಲ್ಲಿ ಎಲ್ಲವೂ ವಿಶೇಷವಾಗಿದೆ

ಆರ್ ಚಂದ್ರು ನಿರ್ದೇಶನದ "ಕಬ್ಜ" ಚಿತ್ರ ಇದಾಗಲೇ ಸಾಕಷ್ಟು ಸಂಚಲನ ಸೃಷ್ಟಿಸಿದೆ. ತಂಡವು ಈ ಚಿತ್ರಕ್ಕಾಗಿ  ಹಾಲಿವುಡ್ ಶೈಲಿಯ ಚಲನಚಿತ್ರ ನಿರ್ಮಾಣವನ್ನು ಅಳವಡಿಸಿಕೊಂಡಿದೆ, ಮತ್ತು ಈ ಯೋಜನೆಯ ಸುತ್ತಲೂ ಸಾಕಷ್ಟು ಕುತೂಹಲವಿದೆ.  ನಾನು "ಕಬ್ಜ" ಸೆಟ್ ಅನ್ನು ಪ್ರವೇಶಿಸಿದಾಗಲೆಲ್ಲಾ ರೋಮಾಂಚಿತನಾಗುತ್ತೇನೆ. ಎಂದು ಉಪೇಂದ್ರ ಹೇಳುತ್ತಾರೆ. ಗ್ಯಾಂಗ್ ಸ್ಟರ್ ಡ್ರಾಮಾ  ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ ಮತ್ತು ಬಂಗಾಳಿ ಹೀಗೆ ಏಳು ಭಾಷೆಗಳಲ್ಲಿ ತಯಾರಾಗುತ್ತಿದೆ. 

"ಚಿತ್ರವು ಉತ್ತ್ಮವಾಗಿ ಬರುತ್ತಿದೆ,ಒಳ್ಳೆ ಕಥೆಯೊಂದಿಗೆ ಚಿತ್ರವನ್ನು ಬಿಡುಗಡೆ ಮಾಡಲು ನಾವು ಕಾಯುತ್ತಿದ್ದೇವೆ.  ಎಂದು ಉಪ್ಪಿ ಹೇಳುತ್ತಾರೆ, "ಕಬ್ಜದಂತಹಾ ವಿಷಯವನ್ನು ಪದಗಳ ಮೂಲಕ ವಿವರಿಸಲಾಗುವುದಿಲ್ಲ, ಇದು ಎಲ್ಲಾ ರೀತಿಯ ಪ್ರೇಕ್ಷಕರು ನೋಡಬೇಕಾಗಿರುವ ಚಿತ್ರ" ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com