ಕೊರೋನಾ ಸೋಂಕು: ಮರಾಠಿ ಹಿರಿಯ ನಟಿ ಆಶಾಲತಾ ನಿಧನ

ಕೊರೊನಾ ಸೋಂಕಿಗೆ ತುತ್ತಾಗಿದ್ದ ಮರಾಠಿ ಭಾಷೆಯ ಹಿರಿಯ ನಟಿ ಆಶಾಲತಾ ವಬ್‌ಗಾಂವಕರ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.
ನಟಿ ಆಶಾಲತಾ
ನಟಿ ಆಶಾಲತಾ

ಕೊರೊನಾ ಸೋಂಕಿಗೆ ತುತ್ತಾಗಿದ್ದ ಮರಾಠಿ ಭಾಷೆಯ ಹಿರಿಯ ನಟಿ ಆಶಾಲತಾ ವಬ್‌ಗಾಂವಕರ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಆಶಾಲತಾ ವಬ್‌ಗಾಂವಕರ್ ಅವರು ಸತಾರಾದಲ್ಲಿ ಟಿವಿ ಧಾರಾವಾಹಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಚಿತ್ರೀಕರಣದ ಸೆಟ್‌ನಲ್ಲಿ 20 ಮಂದಿಗೆ ಕೊರೋನಾ ದೃಢಪಟ್ಟಿತ್ತು. ಹೀಗಾಗಿ ಆಶಾಲತಾ ಅವರು ಸತಾರಾದಲ್ಲಿಯೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಮರಾಠಿ, ಕೊಂಕಣಿ, ರಂಗಭೂಮಿ ನಟಿಯಾದ ಆಶಾಲತಾ ಕೆಲ ಬಾಲಿವುಡ್ ಚಿತ್ರಗಳಲ್ಲಿ ಸಹ ಅಭಿನಯಿಸಿದ್ದರು. 

ಮೃತರ ಅಂತ್ಯಕ್ರಿಯೆ ಸತಾರಾದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com