ಸತೀಶ್ ನೀನಾಸಂ, ವಿಜಯಪ್ರಸಾದ್ ಕಾಂಬಿನೇಷನ್ ನಲ್ಲಿ ಹೊಸ ಕಥೆಯೊಂದಿಗೆ 'ಪೆಟ್ರೋಮ್ಯಾಕ್ಸ್'!

ನಟ ಸತೀಶ್ ನೀನಾಸಂ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷ್ ನಲ್ಲಿ ಹೊಸ ಕಥೆಯೊಂದಿಗೆ ಪೆಟ್ರೋಮ್ಯಾಕ್ಸ್ ಚಿತ್ರ ಆರಂಭವಾಗುತ್ತಿದೆ.
ಸತೀಶ್ ನೀನಾಸಂ, ವಿಜಯ್ ಪ್ರಸಾದ್
ಸತೀಶ್ ನೀನಾಸಂ, ವಿಜಯ್ ಪ್ರಸಾದ್
Updated on

ಬೆಂಗಳೂರು: ನಟ ಸತೀಶ್ ನೀನಾಸಂ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷ್ ನಲ್ಲಿ ಹೊಸ ಕಥೆಯೊಂದಿಗೆ ಪೆಟ್ರೋಮ್ಯಾಕ್ಸ್ ಚಿತ್ರ ಆರಂಭವಾಗುತ್ತಿದೆ.

ಈ ಹಿಂದೆ ಪೆಟ್ರೋಮ್ಯಾಕ್ಸ್ ಹೆಸರಿನಲ್ಲಿ ಕತೆ ಮಾಡಿಕೊಂಡಿದ್ದವು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ವಿಜಯ ಪ್ರಸಾದ್ ಹೊಸ ಕಥೆಯೊಂದಿಗೆ ಈಗ ಮುಂದೆ ಬಂದಿದ್ದು, ಅದರಲ್ಲಿ ತಾವು ಯುವಕನ ಪಾತ್ರದಲ್ಲಿ  ಕಾಣಿಸಿಕೊಳ್ಳುತ್ತಿರುವುದಾಗಿ ಸತೀಶ್ ನೀನಾಸಂ ತಿಳಿಸಿದರು.

ವಿಜಯ್ ಪ್ರಸಾದ್ ಸಹಭಾಗಿತ್ವದಲ್ಲಿ ಪರಿಮಳ ಲಾಡ್ಜ್ ಎಂಬ ಮತ್ತೊಂದು ಸಿನಿಮಾವನ್ನು ಕೂಡಾ ಘೋಷಣೆ ಮಾಡಲಾಗಿದೆ. ಆದರೆ, ಅದು ಇದೀಗ ಮುಂದಕ್ಕೆ ಹೋಗಿದೆ.

ವಿಜಯ ಪ್ರಸಾದ್ ಅವರ ಕತೆ, ವಿಶಿಷ್ಠತೆಯಿಂದ ಕೂಡಿದ್ದು, ನಾನು ಅವರ ದೊಡ್ಡ ಅಭಿಮಾನಿ ಎನ್ನುವ ಸತೀಶ್ ನೀನಾಸಂ, ಅವರ ಜೊತೆಗೆ ಕೆಲಸ ಮಾಡಲು ಬಯಸುತ್ತೇನೆ. ಆದರೆ, ಕೆಲವೊಂದು ವಿವಾದಗಳು ಹುಟ್ಟಿಕೊಳ್ಳುತ್ತವೆ ಎಂದಿದ್ದಾರೆ.

ಪರಿಮಳ ಲಾಡ್ಜ್ ಚಿತ್ರ ಮಾಡಲು ಸಾಂಕ್ರಾಮಿಕ ರೋಗ ಅಡ್ಡಿಯಾಯಿತು.ಈಗ ಚಿತ್ರೀಕರಣ ನಡೆಸಲು ಅನುಮತಿ ಪಡೆದುಕೊಂಡಿದ್ದೇವೆ. ಆದಾಗ್ಯೂ, ಅಂತಿಮವಾಗಿ ಅವರೊಟ್ಟಿಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಅವರು ತಿಳಿಸಿದರು.

ನಿರ್ದೇಶಕ ವಿಜಯ್ ಪ್ರಸಾದ್ ಅವರ ಪೆಟ್ರೋಮ್ಯಾಕ್ಸ್  ಪಿಕ್ಚರ್ ಸಹಯೋಗದಲ್ಲಿ ಸತೀಶ್ ನೀನಾಸಂ ಅವರ ಪಿಕ್ಚರ್ ಹೌಸ್  ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ ಮತ್ತೋಬ್ಬರು ನಿರ್ಮಾಪಕರು ಇರುವ ಸಾಧ್ಯತೆಯಿದೆ.

ದಸರಾದಿಂದ ಚಿತ್ರೀಕರಣ ಆರಂಭಿಸಲು ಯೋಜನೆ ರೂಪಿಸಿರುವ ಸತೀಶ್ ನೀನಾನಂ, ಶರ್ಮಿಳಾ ಮಾಂಡ್ರೆ ನಿರ್ಮಿಸುತ್ತಿರುವ ಕೊಲೆಯ ರಹಸ್ಯದ ಚಿತ್ರ, ಮನೋಹರ್ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಮೂರು ಚಿತ್ರಗಳ ನಡುವೆ ಚಿತ್ರೀಕರಣ ಕುಶಲತೆಯಿಂದ ಕೂಡಿರುತ್ತದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com