ಆರೋಗ್ಯ ಸೇತು ಮೂಲಕ ಜನರಲ್ಲಿ ಕೊರೋನಾ ಜಾಗೃತಿಗೆ ಮುಂದಾದ ಪವರ್ ಸ್ಟಾರ್ ಪುನೀತ್

ಇಂದು ಸಾಮಾಜಿಕ ತಾಣಗಳು, ಮೊಬೈಲ್ ಅಪ್ಲಿಕೇಷನ್ ಗಳು ಜನಸಾಮಾನ್ಯರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿದೆ. ಇದೀಗ ದೇಶಾದ್ಯಂತ ಕೊರೋನಾ ಮಹಾಮಾರಿ ತಾಂಡವವಾಡುತ್ತಿದ್ದು ಇದಕ್ಕಾಗಿ ಜನಜಾಗೃತಿ ಮೂಡಿಸುವ ಸಲುವಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಸಹ ಇದೇ ಕಾರಣಕ್ಕಾಗಿ ಬಂದಿದೆ. ಈ ಆರೋಗ್ಯ ಸೇತು ಆ್ಯಪ್ ಹಾಗೂ ಕೊರೋನಾ ಬಗೆಗೆ ಜನರಲ್ಲಿ ಹೆಚ್ಚು ಜಾಗೃತಿ

Published: 09th April 2020 11:21 AM  |   Last Updated: 09th April 2020 11:21 AM   |  A+A-


ಆರೋಗ್ಯ ಸೇತು ಮೂಲಕ ಜನರಲ್ಲಿ ಕೊರೋನಾ ಜಾಗೃತಿಗೆ ಮುಂದಾದ ಪವರ್ ಸ್ಟಾರ್ ಪುನೀತ್

Posted By : Raghavendra Adiga
Source : Online Desk

ಇಂದು ಸಾಮಾಜಿಕ ತಾಣಗಳು, ಮೊಬೈಲ್ ಅಪ್ಲಿಕೇಷನ್ ಗಳು ಜನಸಾಮಾನ್ಯರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿದೆ. ಇದೀಗ ದೇಶಾದ್ಯಂತ ಕೊರೋನಾ ಮಹಾಮಾರಿ ತಾಂಡವವಾಡುತ್ತಿದ್ದು ಇದಕ್ಕಾಗಿ ಜನಜಾಗೃತಿ ಮೂಡಿಸುವ ಸಲುವಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಸಹ ಇದೇ ಕಾರಣಕ್ಕಾಗಿ ಬಂದಿದೆ. ಈ ಆರೋಗ್ಯ ಸೇತು ಆ್ಯಪ್ ಹಾಗೂ ಕೊರೋನಾ ಬಗೆಗೆ ಜನರಲ್ಲಿ ಹೆಚ್ಚು ಜಾಗೃತಿ ಉಂಟು ಮಾಡುವ ಸಲುವಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೆಲಸ ಮಾಡುತ್ತಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದ ಉಪಮುಖ್ಯಮಂತ್ರಿ ಡಾ.ಸಿ.ಎನ್​ ಅಶ್ವತ್ಥನಾರಾಯಣ ಜನರಲ್ಲಿ ಕೊರೋನಾವೈರಸ್ ಸೋಂಕಿನ ಸಂಬಂಧ ಕಾಳಜಿ ಮೂಡಿಸುವಂತೆಯೂ ಆರೋಗ್ಯ ಸೇತು ಆ್ಯಪ್ ಬಗೆಗೆ ಅರಿವು ಮೂಡಿಸುವಂತೆಯೂ ಮನವಿ ಮಾಡಿದ್ದಾರೆ.

ಈ ಸಂಬಂಧ ತಮ್ಮ ಟ್ವೀಟ್ ಖಾತೆಯಲ್ಲಿ ಬರೆದುಕೊಂಡಿರುವ ಡಿಸಿಎಂ ಅಶ್ವತ್ಥನಾರಾಯಣ "ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿ, ಆರೋಗ್ಯ ಸೇತು ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅವರ ಸಹಕಾರ ಕೋರಿದೆ. ಕೊರೋನಾವೈರಸ್ ಬಗ್ಗೆ ಎಲ್ಲರಿಗೂ ಸರಿಯಾದ ಮಾಹಿತಿ ತಲುಪುವುದು ಅವಶ್ಯಕವಾಗಿದ್ದು, ಜನಜಾಗೃತಿಗಾಗಿ ನಾವೆಲ್ಲಾ ಶ್ರಮವಹಿಸಬೇಕಿದೆ. " ಎಂದು ಬರೆದುಕೊಂಡಿದ್ದಾರೆ.

ಕೊರೋನಾ ಸೋಂಕಿತ ವ್ಯಕ್ತಿಯನ್ನು ಟ್ರ್ಯಾಕ್ ಮಾಡಿ ಆತ ಅಥವಾ ಆಕೆಯ ಮೇಲೆ ನಿಗಾ ಇಡುವ ಕೆಲಸವನ್ನು ಈ ಆರೋಗ್ಯ ಸೇತು ಆ್ಯಪ್ ಮಾಡುತ್ತದೆ.ಇದರಲ್ಲಿ ಜಿಪಿಎಸ್ ಇದ್ದು ಆ ಮೂಲಕ ಸೋಂಕಿತರ ಚಲನ ವಲನದ ಕುರಿತು ಮಾಹಿತಿ ಒದಗುತ್ತದೆ. 

 

 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp