'ಮರ್ಡರ್' ಚಿತ್ರ ವಿವಾದ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಕೋರ್ಟ್ ಕಟಕಟೆ ಏರಿದ ಅಮೃತವರ್ಷಿಣಿ

 2018 ರ ಸೆಪ್ಟೆಂಬರ್‌ನಲ್ಲಿ ಮಿರಿಯಲಗುಡದಲ್ಲಿ ಪತಿ ಪಿ.ಪ್ರಣಯ್ ಕುಮಾರ್ ಅವರನ್ನು ಹತ್ಯೆಗೈದ ಆರೋಪಿ ಅಮೃತ ವರ್ಷಿಣಿ ಇದೀಗ ದಕ್ಷಿಣ ಬಾರತದ ಪ್ರಸಿದ್ದ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಕೋರ್ಟ್ ಕಟಕಟೆಗೆ ಏರಿದ್ದಾರೆ.
'ಮರ್ಡರ್' ಚಿತ್ರ, ರಾಮ್ ಗೋಪಾಲ್ ವರ್ಮಾ
'ಮರ್ಡರ್' ಚಿತ್ರ, ರಾಮ್ ಗೋಪಾಲ್ ವರ್ಮಾ

ನಲ್ಗೊಂಡಾ: 2018 ರ ಸೆಪ್ಟೆಂಬರ್‌ನಲ್ಲಿ ಮಿರಿಯಲಗುಡದಲ್ಲಿ ಪತಿ ಪಿ.ಪ್ರಣಯ್ ಕುಮಾರ್ ಅವರನ್ನು ಹತ್ಯೆಗೈದ ಆರೋಪಿ ಅಮೃತ ವರ್ಷಿಣಿ ಇದೀಗ ದಕ್ಷಿಣ ಬಾರತದ ಪ್ರಸಿದ್ದ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಕೋರ್ಟ್ ಕಟಕಟೆಗೆ ಏರಿದ್ದಾರೆ. ವರ್ಮಾ ಅವರ "ಮರ್ಡರ್" ಚಿತ್ರದ ವಿರುದ್ಧ  ಅಮೃತ ವರ್ಷಿಣಿ  ಜಿಲ್ಲಾ ನ್ಯಾಯಾಲಯದಲ್ಲಿ ಖಾಸಗಿದೂರು ದಾಖಲಿಸಿದ್ದಾರೆ. 

ಅಮೃತ ಅವರ ತಂದೆ ಕೆ ಮಾರುತಿ ರಾವ್ ಮುಖ್ಯ ಆರೋಪಿಯಾಗಿದ್ದ ಭಯಾನಕ ಮರ್ಯದಾ ಹತ್ಯೆ  ಘಟನೆ ಆಧರಿಸಿ ಈ ಚಲನಚಿತ್ರ ತಯಾರಾಗಿದೆ. ಪ್ರಣಯ್ ಅವರ ಹತ್ಯೆ ಪ್ರಕರಣದಲ್ಲಿ ಸ್ವಲ್ಪ ಸಮಯ ಜೈಲುವಾಸ ಅನುಭವಿಸಿದ್ದ ಮಾರುತಿ ರಾವ್, 2020 ರ ಮಾರ್ಚ್‌ನಲ್ಲಿ ಹೈದರಾಬಾದ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು.

ನಲ್ಗೊಂಡಾ  ಜಿಲ್ಲಾ ನ್ಯಾಯಾಲಯವು ಎಸ್‌ಸಿ, ಎಸ್‌ಟಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿಯನ್ನು ರವಾನಿಸಿದ್ದು, ಆಗಸ್ಟ್ 6 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ವರ್ಮಾ ಮತ್ತು ಚಿತ್ರದ ನಿರ್ಮಾಪಕ ಎನ್ ಕರುಣಾ ಅವರಿಗೆ ನೋಟಿಸ್ ನೀಡಿದೆ.

ಅಮೃತ ಅವರ ಪರ ವಕೀಲ ಡಿ ನರಸಿಂಹ ಅವರು ಮಾಧ್ಯಮಗಳಿಗೆ ಈ ವಿಚಾರ ತಿಳಿಸಿದ್ದು ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಕೋರಲಾಗುವುದು ಎಂದಿದ್ದಾರೆ.

ರಾಮ್ ಗೋಪಾಲ್ ವರ್ಮಾ ಣಯ್ ಅವರ ಕುಟುಂಬದ ಅನುಮತಿಯಿಲ್ಲದೆ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಎಂದು ಅಮೃತಾ ತನ್ನ ಅರ್ಜಿಯಲ್ಲಿ ತಿಳಿಸಿದ್ದಾರೆ.  “ಮರ್ಡರ್ ನ ಟ್ರೈಲರ್ ಅಮೃತ ಅವರ ಹೆಸರನ್ನು ಒಳಗೊಂಡಿದೆ.  ಪ್ರಣಯ್ ಅವರ ಹತ್ಯೆಯನ್ನು ಚಿತ್ರಿಸುವ ಕೆಲವು ಗೊಂದಲದ ದೃಶ್ಯಗಳನ್ನು ಸಹ ಇದರಲ್ಲಿದೆ. ಈ ಚಲನಚಿತ್ರವು ಅಮೃತ ಅವರ ಜೀವನವನ್ನು ಮತ್ತು ಅವಳು ಕಂಡುಕೊಂಡ ಮಾನಸಿಕ ಸಮತೋಲನವನ್ನು ಹಾಳುಮಾಡಲಿದೆ ಎಂದು ಅವರ ಪರ ವಕೀಲರು ಹೇಳೀದ್ದಾರೆ.

ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರು ವರ್ಮಾ ಮತ್ತು ಕರುಣಾ ಅವರುಗಳಿಗೆ  ಇ-ಮೇಲ್ ಮತ್ತು ವಾಟ್ಸಾಪ್ ಮೂಲಕ ನೋಟಿಸ್ ಕಳುಹಿಸಲು ನ್ಯಾಯಾಲಯದ ಅನುಮತಿಯನ್ನು ಕೋರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com