ಹೊಸ ಉದ್ಯಮಕ್ಕೆ ಕಾಲಿಟ್ಟ ವಿಜಯಲಕ್ಷ್ಮಿ ದರ್ಶನ್‌: ರೈತರಿಗೆ ನೆರವಾಗಲಿದ್ದಾರಾ ಚಾಲೆಂಜಿಂಗ್ ಸ್ಟಾರ್ ಪತ್ನಿ?

ದರ್ಶನ್​ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಕೆಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಇವರು, ಈಗ ಹೊಸ ಉದ್ಯಮ ಆರಂಭಿಸಿದ್ದಾರಂತೆ. ತಮ್ಮ ಈ ಹೊಸ ಪ್ರಯತ್ನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Published: 11th August 2020 10:04 AM  |   Last Updated: 11th August 2020 10:04 AM   |  A+A-


Vijaya lakxhmi darshan

ವಿಜಯಲಕ್ಷ್ಮಿ ದರ್ಶನ್

Posted By : Shilpa D
Source : Online Desk

ಬೆಂಗಳೂರು: ದರ್ಶನ್​ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಕೆಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಇವರು, ಈಗ ಹೊಸ ಉದ್ಯಮ ಆರಂಭಿಸಿದ್ದಾರಂತೆ. ತಮ್ಮ ಈ ಹೊಸ ಪ್ರಯತ್ನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈಗಾಗಲೇ ಅವರ ಹೊಸ ಉದ್ಯಮ ಆರಂಭಿಸೋಕೆ ಅಗತ್ಯವಿರುವ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರಂತೆ. ಕಮಿಂಗ್​ ಸೂನ್​ ಎನ್ನುತ್ತಲೇ ತಾವು ಆರಂಭಿಸಲಿರುವ ಉದ್ಯಮದ ಕುರಿತು ಒಂದು ಸುಳಿವು ಕೊಟ್ಟಿದ್ದಾರೆ.

ವಿಜಯಲಕ್ಷ್ಮಿ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಆಗಸ್ಟ್‌ 15ರಿಂದ ತರಕಾರಿ ಮತ್ತು ಹಣ್ಣು ಮಾರಾಟ ಪ್ರಾರಂಭ ಮಾಡಲಿದ್ದಾರೆ ಎನ್ನಲಾಗಿದೆ. ವಿಜಯಲಕ್ಷ್ಮಿ ಹಣ್ಣು-ತರಕಾರಿ ಮಾರುವ ಉದ್ಯಮಕ್ಕೆ ಕೈ ಹಾಕಿದ್ದಾರೆ. ಸದ್ಯದಲ್ಲೇ ಇದಕ್ಕೆ ಕಿಕ್​ ಸ್ಟಾರ್ಟ್​ ಸಿಗಲಿದೆ.

ಫೇಸ್‌ಬುಕ್‌ ಮತ್ತು ಟ್ವಿಟ್ಟರ್ ನಲ್ಲಿ ಕಮಿಂಗ್ ಸೂನ್ ' ಎಂದು ಪೋಸ್ಟ್‌ ಹಾಕಿದ್ದಾರೆ, ಫಾರ್ಮ್‌ ಫ್ರೆಶ್‌ ಹಣ್ಣು ಹಾಗೂ ತರಕಾರಿ ಮಾರಾಟಕ್ಕೆ, ಆಗಸ್ಟ್‌ 15ರಂದು ಚಾಲನೆ ನೀಡಲಿದ್ದಾರೆ.  ಇದು ಆನ್‌ಲೈನ್‌ ಮಾರಾಟವೇ ಮಾತ್ರವೇ ಅಥವಾ ಸ್ಟೋರ್‌ ಇರುತ್ತದೆಯೇ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಡಿ-ಬಾಸ್‌ ಫ್ಯಾನ್ಸ್‌ ಇವರ ಈ ಉದ್ಯಮಕ್ಕೆ ಕೈ ಜೋಡಿಸಲು
ಸಜ್ಜಾಗಿದ್ದಾರೆ. 
 

Stay up to date on all the latest ಸಿನಿಮಾ ಸುದ್ದಿ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp