'ಮದಗಜ' ಚಿತ್ರದ ಶೂಟಿಂಗ್ ಗೆ ಹೋಗಲು ತುದಿಗಾಲಲ್ಲಿ ನಿಂತಿದ್ದೇನೆ: ಶ್ರೀಮುರಳಿ 

ರೋರಿಂಗ್ ಸ್ಟಾರ್ ಮುರಳಿ ಸಿನಿಮಾ ಕ್ಷೇತ್ರಕ್ಕೆ ಬಂದು 17 ವರ್ಷವಾಗಿದೆ. 2003ರ ಆಗಸ್ಟ್ 15ರಂದು ತೆರೆಕಂಡ ಚಂದ್ರ ಕೋರಿ ಚಿತ್ರದ ಮೂಲಕ ಶ್ರೀಮುರಳಿ ಬೆಳ್ಳಿ ತೆರೆಗೆ ಬಂದರು. ಚಿತ್ರ ಹಿಟ್ ಆಗಿ ಶ್ರೀಮುರಳಿ ನಾಯಕನಾಗಿ ಗುರುತಿಸಿಕೊಂಡರು. ನಂತರ ಕಂಠಿ ಸೇರಿದಂತೆ ಇದುವರೆಗೆ 24 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 

Published: 17th August 2020 10:37 AM  |   Last Updated: 17th August 2020 08:57 PM   |  A+A-


Sri Murali

ಶ್ರೀಮುರಳಿ

Posted By : Sumana Upadhyaya
Source : The New Indian Express

ರೋರಿಂಗ್ ಸ್ಟಾರ್ ಮುರಳಿ ಸಿನಿಮಾ ಕ್ಷೇತ್ರಕ್ಕೆ ಬಂದು 17 ವರ್ಷವಾಗಿದೆ. 2003ರ ಆಗಸ್ಟ್ 15ರಂದು ತೆರೆಕಂಡ ಚಂದ್ರ ಕೋರಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಶ್ರೀಮುರಳಿ ಚಿತ್ರ ಗೆದ್ದು ನಾಯಕನಾಗಿ ಗುರುತಿಸಿಕೊಂಡರು.

ನಂತರ ಸತತ ಸೋಲುಗಳನ್ನೇ ಕಾಣುತ್ತಿದ್ದ ಶ್ರೀಮುರಳಿಗೆ ಟರ್ನಿಂಗ್ ಪಾಯಿಂಟ್ ಆಗಿದ್ದು ಪ್ರಶಾಂತ್ ನೀಲ್ ನಿರ್ದೇಶನದ ಉಗ್ರಂ ಸಿನೆಮಾ. ಮೊನ್ನೆ ಆಗಸ್ಟ್ 15ಕ್ಕೆ ಚಿತ್ರರಂಗಕ್ಕೆ ಬಂದು 17 ವರ್ಷಗಳಾಯಿತು ಎಂದು ಸಂಭ್ರಮಾಚರಣೆ ಮಾಡಿಕೊಳ್ಳಲು ಸಾಧ್ಯವೇ ಆಗಲಿಲ್ಲವಂತೆ. ಕೊರೋನಾ ಸೋಂಕು ನಮ್ಮ ಸಂತೋಷವನ್ನು ಹಾಳುಮಾಡಿದೆ ಎನ್ನುತ್ತಾರೆ. ಇದುವರೆಗೆ 24 ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರರಂಗದಲ್ಲಿ ನಡೆದುಬಂದ ಹಾದಿ, ಗೆಳೆಯರು ಮತ್ತು ಅಭಿಮಾನಿಗಳಿಂದ ಸಿಕ್ಕಿದ ಉತ್ತೇಜನ ಖುಷಿ ಕೊಟ್ಟಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸ ಮಾಡುವ ಉತ್ತೇಜನ ನೀಡಿದೆ ಎನ್ನುತ್ತಾರೆ. 

ಈ ವರ್ಷ ಅವರು ಮೂರು ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳಬೇಕಾಗಿತ್ತು, ಆದರೆ ಸಾಧ್ಯವಾಗಲಿಲ್ಲ. ಸೆಪ್ಟೆಂಬರ್ ಮೊದಲ ವಾರದಲ್ಲಿ ಮದಗಜ ಚಿತ್ರದ ಶೂಟಿಂಗ್ ಗೆ ಇದಿರು ನೋಡುತ್ತಿದ್ದಾರೆ. ಮಹೇಶ್ ಕುಮಾರ್ ನಿರ್ದೇಶನದ ಉಮಾಪತಿ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಮದಗಜದ ಶೂಟಿಂಗ್ ಶೇ 25ರಷ್ಟು ವಾರಣಾಸಿಯಲ್ಲಿ ಲಾಕ್ ಡೌನ್ ಗಿಂತ ಮೊದಲು ಮುಗಿದಿತ್ತು. ಮುಂದಿನ ಭಾಗದ ಶೂಟಿಂಗ್ ಮಿನರ್ವ ವೃತ್ತದ ಬಳಿ ನಡೆಯಲಿದೆ. ಮತ್ತೆ ಶೂಟಿಂಗ್ ಗೆ ತೆರಳಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಶ್ರೀಮುರಳಿ ಹೇಳುತ್ತಾರೆ. 

ಮದಗಜದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಅಭಿನಯಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣವಿದೆ.

Stay up to date on all the latest ಸಿನಿಮಾ ಸುದ್ದಿ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp