ನಕ್ಕು ನಗಿಸಲು ಮತ್ತೆ ಬರುತ್ತಿದ್ದಾರೆ ಕೋಮಲ್! 

ಕೋಮಲ್ ಎಂದಾಕ್ಷಣ ನೆನಪಾಗುವುದು ನಗು. ತಮ್ಮ ವಿಭಿನ್ನ ಮ್ಯಾನರಿಸಂ ನಿಂದ ಪ್ರೇಕ್ಷಕರ ಮನಗೆದ್ದಿದ್ದ ಕೋಮಲ್ ಈಗ ಮತ್ತೆ ಪ್ರೇಕ್ಷಕರನ್ನು ಹಾಸ್ಯದಕಡಲಲ್ಲಿ ತೇಲಿಸುವ ಪಾತ್ರಕ್ಕೆ ಜೀವ ತುಂಬಲು ತಯಾರಾಗಿದ್ದಾರೆ. 

Published: 17th August 2020 11:59 AM  |   Last Updated: 17th August 2020 11:59 AM   |  A+A-


Komal returns with full-fledged comedy drama

ನಕ್ಕು ನಗಿಸಲು ಮತ್ತೆ ಬರುತ್ತಿದ್ದಾರೆ ಕೋಮಲ್!

Posted By : Srinivas Rao BV
Source : The New Indian Express

ಕೋಮಲ್ ಎಂದಾಕ್ಷಣ ನೆನಪಾಗುವುದು ನಗು. ತಮ್ಮ ವಿಭಿನ್ನ ಮ್ಯಾನರಿಸಂ ನಿಂದ ಪ್ರೇಕ್ಷಕರ ಮನಗೆದ್ದಿದ್ದ ಕೋಮಲ್ ಈಗ ಮತ್ತೆ ಪ್ರೇಕ್ಷಕರನ್ನು ಹಾಸ್ಯದಕಡಲಲ್ಲಿ ತೇಲಿಸುವ ಪಾತ್ರಕ್ಕೆ ಜೀವ ತುಂಬಲು ತಯಾರಾಗಿದ್ದಾರೆ. 

ಇತ್ತೀಚೆಗೆ ಕೆಂಪೇಗೌಡ-2 ಚಿತ್ರದಲ್ಲಿ ನಟಿಸಿದ್ದ ಕೋಮಲ್ ಈಗ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಹಾಗೂ ನಿರ್ದೇಶಕ ಕೆಎಲ್ ರಾಜಶೇಖರ್ ಅವರೊಂದಿಗೆ ಕೈ ಜೋಡಿಸಿದ್ದಾರೆ.

ಕೆಎಲ್ ರಾಜಶೇಖರ್ ಕೆಜಿಎಫ್ ನ ಚಾಪ್ಟರ್-1 ರ ಖಡಕ್ ಡೈಲಾಗ್ ನಿಂದ ಜನಪ್ರಿಯತೆ ಗಳಿಸಿದ್ದರು. ಇನ್ನಷ್ಟೇ ಬಿಡುಗಡೆಯಾಗಬೇಕಿರುವ ರಾಬರ್ಟ್ ಸಿನಿಮಾಗೂ ಸಹ ಡೈಲಾಗ್ ಬರೆದಿದ್ದಾರೆ ಕೆಎಲ್ ರಾಜಶೇಖರ್. ಕೋಮಲ್ ನಟಿಸುತ್ತಿರುವ ಸಿನಿಮಾಗೆ ನಿರ್ದೇಶನದ ಜೊತೆಗೆ ಸ್ಕ್ರಿಪ್ಟ್ ಹಾಗೂ ಸ್ಕ್ರೀನ್ ಪ್ಲೇ, ಡೈಲಾಗ್ ಜವಾಬ್ದಾರಿಯನ್ನೂ ಸಹ ಕೆಎಲ್  ರಾಜಶೇಖರ್ ಅವರೇ ಹೊತ್ತುಕೊಂಡಿದ್ದಾರೆ.   

ಟಿಆರ್ ಚಂದ್ರಶೇಖರ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಗಣೇಶ ಚತುರ್ಥಿಯ ದಿನದಂದು ಮುಹೂರ್ತ ನೆರವೇರಲಿದೆ, ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶೂಟಿಂಗ್ ನಡೆಯಲಿದೆ. ಸೆಪ್ಟೆಂಬರ್ ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. 

Stay up to date on all the latest ಸಿನಿಮಾ ಸುದ್ದಿ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp