ಅಪೂರ್ವ ಕಾಸರವಳ್ಳಿ ನಿರ್ದೇಶನದ ಬಾಲಿವುಡ್ ಸಿನಿಮಾಗೆ ಅದಿತಿ ರಾವ್ ಹೈದರಿ ನಾಯಕಿ

ವಿಂಟರ್ ಬ್ರಿಡ್ಜ್ ಸಿನಿಮಾ 1962 ರ ಚೀನಾ ಯುದ್ದದ ವೇಳೆ ನಡೆದ ಪ್ರೇಮಕಥೆಯಾಗಿದ್ದು, ನಾಯಕಿ ಪಾತ್ರಕ್ಕೆ ಅದಿತಿ ರಾವ್ ಹೈದರಿ ಅವರ ಜೊತೆ ನಿರ್ದೇಶಕ ಅಪೂರ್ವ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ.
ಅದಿತಿ ರಾವ್ ಹೈದರಿ
ಅದಿತಿ ರಾವ್ ಹೈದರಿ

ವಿಂಟರ್ ಬ್ರಿಡ್ಜ್ ಸಿನಿಮಾವನ್ನು ಅಪೂರ್ವ ಕಾಸರವಳ್ಳಿ ನಿರ್ದೇಶಿಸುತ್ತಿದ್ದು ಕನ್ನಡ ನಟ ಆರ್ಯನ್ ಸಂತೋಷ್ ನಟಿಸುತ್ತಿದ್ದಾರೆ.

ವಿಂಟರ್ ಬ್ರಿಡ್ಜ್ ಸಿನಿಮಾ 1962 ರ ಚೀನಾ ಯುದ್ದದ ವೇಳೆ ನಡೆದ ಪ್ರೇಮಕಥೆಯಾಗಿದ್ದು, ನಾಯಕಿ ಪಾತ್ರಕ್ಕೆ ಅದಿತಿ ರಾವ್ ಹೈದರಿ ಅವರ ಜೊತೆ ನಿರ್ದೇಶಕ ಅಪೂರ್ವ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ.

ಈ ಮೊದಲು ಅಪೂರ್ವ ಕಾಸರವಳ್ಳಿ ನಿರುತ್ತರ ಎಂಬ ಕನ್ನಡ ಸಿನಿಮಾ ನಿರ್ದೇಶಿಸಿದ್ದರು. ಇದರಲ್ಲಿ ರಾಹುಲ್ ಬೋಸ್, ಭಾವನಾ, ಕಿರಣ್ ಶ್ರೀನಿವಾಸ್ ಮತ್ತು ಐಂದ್ರಿತಾ ರೈ ನಟಿಸಿದ್ದರು. ನಟ ಆರ್ಯನ್ ಸಂತೋಶ್ ಮತ್ತು ನಿರ್ದೇಶಕ ಅಪೂರ್ವ ಕಾಸರವಳ್ಳಿಗೆ ಇದು ಬಾಲಿವುಡ್ ನ ಚೊಚ್ಚಲ ಸಿನಿಮಾವಾಗಿದೆ. 

ಮಹಿಳಾ ಪ್ರಧಾನ ಚಿತ್ರವಾಗಿದ್ದು, ಈ ಪಾತ್ರಕ್ಕೆ ಅದಿತಿ ಸೂಕ್ತ ನಾಯಕಿ ಎನಿಸಿತು, ಈಗಾಗಲೇ ಅವರ ಜೊತೆ ಮೊದಲ ಸುತ್ತಿನ ಮಾತುಕತೆ ನಡೆಸಿದ್ದೇವೆ, ಶೀಘ್ರದಲ್ಲೇ ಅವರಿಗೆ ಕಥೆ ಹೇಳುತ್ತೇವೆ ಎಂದು ಅಪೂರ್ವ ತಿಳಿಸಿದ್ದಾರೆ.  ಆಗಸ್ಟ್ 28 ರಂದು ಸಂಜೆ 6 ಗಂಟೆಗೆ  ಯೂಟ್ಯೂಬ್ ನಲ್ಲಿ ವಿಂಟರ್ ಬ್ರಿಡ್ಜ್ ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್ ಆಗಲಿದೆ. 

ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಆರಂಭವಾಗುವ ಶೂಟಿಂಗ್ ಹಿಮಾಚಲ ಪ್ರದೇಶ, ಉತ್ತಾರಖಂಡ್, ಲಡಾಕ್ ಮತ್ತು ಅರುಣಾಚಲ ಪ್ರದೇಶದಲ್ಲಿ ನಡೆಯಲಿದೆ. ಇಂಡೋ-ಚೀನಾ ಗಡಿಯ ದೃಶ್ಯವನ್ನು ಮರು ಸೃಷ್ಟಿ ಮಾಡಲಾಗುವುದು ಎಂದು ಅಪೂರ್ವ ತಿಳಿಸಿದ್ದಾರೆ,

ವಿಷ್ಣು ಎಂಬಾ ಪೋಸ್ಟ್ ಮ್ಯಾನ್ ಕಥೆ ಇದಾಗಿದ್ದು, ಅವರು ಹತ್ತಿರದ ಸೇನಾ ನೆಲೆಯಿಂದ ಪತ್ರಗಳನ್ನು ತೆಗೆದುಕೊಂಡು 1962 ರಲ್ಲಿ ಚೀನಾ ಭಾರತದ ವಿರುದ್ಧ ಯುದ್ಧ ಘೋಷಿಸಿದ ನಂತರ ವಿಷ್ಣು ಎದುರಿಸಿದ ಪರಿಣಾಮಗಳನ್ನು ಈ ಚಿತ್ರ ತೋರಿಸುತ್ತದೆ ಎಂದು ಅಪೂರ್ವ ಕಾಸರವಳ್ಳಿ ತಿಳಿಸಿದ್ದಾರೆ.

ಆತ ರಾಧಾ ಎಂಬಾಕೆಯನ್ನು ವಿವಾಹವಾಗುತ್ತಾನೆ, ಹಿಮಾಲಯ ತಪ್ಪಲಿನ ಪುರ ಗ್ರಾಮದ ಪೋಸ್ಟ್ ಆಫೀಸ್ ಮೇಲ್ವಿಚಾರಣೆ ತೆಗೆದುಕೊಂಡ ಮೇಲೆ ಆತನ ಜೀವನದಲ್ಲಿ ಹಲವು
ಬದಲಾವಣೆಗಳಾಗುತ್ತವೆ.

ಅವರು ಹತ್ತಿರದ ಸೇನಾ ನೆಲೆಗೆ ಮತ್ತು ಅಲ್ಲಿಂದ ಪತ್ರಗಳನ್ನು ತೆಗೆದುಕೊಳ್ಳುತ್ತಾರೆ, ಮತ್ತು 1962 ರಲ್ಲಿ ಚೀನಾ ಭಾರತದ ವಿರುದ್ಧ ಯುದ್ಧ ಘೋಷಿಸಿದ ನಂತರ ವಿಷ್ಣು ಎದುರಿಸಿದ
ಪರಿಣಾಮಗಳನ್ನು ಈ ಚಿತ್ರ ತೋರಿಸುತ್ತದೆ, "

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com