ದೀಪಕ್ ಅರಸ್ ನಿರ್ದೇಶನದ 'ಶುಗರ್ ಫ್ಯಾಕ್ಟರಿ'ಗೆ ಅದ್ವಿತಿ ಶೆಟ್ಟಿ ಸೇರ್ಪಡೆ

ನಟಿ‌ ಅಮೂಲ್ಯ  ‌ಸೋದರ  ದೀಪಕ್ ಅರಸ್ ನಿರ್ದೇಶಿಸುತ್ತಿರುವ ಕಾಮಿಡಿ ಸಿನಿಮಾ ಶುಗರ್ ಫ್ಯಾಕ್ಟರಿಗೆ ನಟಿ ಅದ್ವಿತಿ ಶೆಟ್ಟಿ ಸೇರಿಕೊಂಡಿದ್ದಾರೆ. 

Published: 03rd December 2020 12:00 PM  |   Last Updated: 03rd December 2020 12:19 PM   |  A+A-


adhvithi shetty

ಅದ್ವಿತಿ ಶೆಟ್ಟಿ

Posted By : Shilpa D
Source : The New Indian Express

ನಟಿ‌ ಅಮೂಲ್ಯ  ‌ಸೋದರ  ದೀಪಕ್ ಅರಸ್ ನಿರ್ದೇಶಿಸುತ್ತಿರುವ ಕಾಮಿಡಿ ಸಿನಿಮಾ ಶುಗರ್ ಫ್ಯಾಕ್ಟರಿಗೆ ನಟಿ ಅದ್ವಿತಿ ಶೆಟ್ಟಿ ಸೇರಿಕೊಂಡಿದ್ದಾರೆ. 

ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಸಿನಿಮಾದಲ್ಲಿ ಗ್ಲಾಮರ್ ಬೊಂಬೆ ಅದ್ವಿತಿ ಶೆಟ್ಟಿ ಸೇರಿದಂತೆ ಮೂವರು ನಟಿಯರು ಅಭಿನಯಿಸಲಿದ್ದಾರೆ. ಈಗಾಗಲೇ ನಟಿ ಸೋನಾಲ್ ಮಾಂಟೇರಿಯೋ ಫೈನಲ್ ಆಗಿದ್ದು ಇನ್ನೊಬ್ಬ ನಾಯಕಿಯ ಆಯ್ಕೆ ಬಾಕಿ ಉಳಿದಿದೆ, ಸದ್ಯ ಅದ್ವಿತಿ ಶೆಟ್ಟಿ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಧರ್ಮ ಕೀರ್ತಿರಾಜ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ

ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲೂ ಕೂಡ ನಟಿಸುತ್ತಿದ್ದಾರೆ.ದೀಪರ್ ಅರಸ್ ಸಿನಿಮಾ ನನಗೆ ಬಿಗ್ ಬ್ರೇಕ್ ನೀಡಲಿದೆ,  ಜನವರಿಯಿಂದ ಶೂಟಿಂಗ್ ಆರಂಭವಾಗಲಿದ್ದು, ಫೆಬ್ರವರಿಯಲ್ಲಿ ತಾವು ಸೆಟ್ ಸೇರುವುದಾಗಿ ಅದ್ವಿತಿ ತಿಳಿಸಿದ್ದಾರೆ.

ಗಿರೀಶ್ ಸುಂಡರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ದೀಪಕ್ ಅರಸ್ ಚಿತ್ರಕತೆ ಬರೆದಿದ್ದಾರೆ, ಚೇತನ್ ಕುಮಾರ್ ಸಂಭಾಷಣೆಯಿದೆ, ಕಬೀರ್ ರಫಿ ಸಂಗೀತ ನೀಡಿದ್ದಾರೆ. ಬೆಂಗಳೂರು, ಮೈಸೂರು ಗೋವಾ ಮತ್ತು ಭಾರತದ ಹೊರಗೂ ಸಿನಿಮಾ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡುತ್ತಿದೆ.

Stay up to date on all the latest ಸಿನಿಮಾ ಸುದ್ದಿ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp