ಮುಂಬಯಿ: ಕಿರುತೆರೆ ನಟಿ ದಿವ್ಯಾ ಭಟ್ನಾಗರ್ ಕೊರೋನಾಗೆ ಬಲಿ
ಕಿರುತೆರೆ ನಟಿ ದಿವ್ಯಾ ಭಟ್ನಾಕರ್ ಅವರು ಕೋವಿಡ್–19 ಹಾಗೂ ನ್ಯುಮೋನಿಯಾದಿಂದಾಗಿ ಮೃತಪಟ್ಟಿದ್ದಾರೆ. ಕಳೆದವಾರ ಸೋಂಕು ದೃಢಪಟ್ಟ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.
Published: 07th December 2020 11:47 AM | Last Updated: 07th December 2020 12:12 PM | A+A A-

ದಿವ್ಯಾ ಭಟ್ನಾಗರ್
ಮುಂಬೈ: ಕಿರುತೆರೆ ನಟಿ ದಿವ್ಯಾ ಭಟ್ನಾಕರ್ ಅವರು ಕೋವಿಡ್–19 ಹಾಗೂ ನ್ಯುಮೋನಿಯಾದಿಂದಾಗಿ ಮೃತಪಟ್ಟಿದ್ದಾರೆ. ಕಳೆದವಾರ ಸೋಂಕು ದೃಢಪಟ್ಟ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.
ಕಳೆದ ಒಂದು ವಾರದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 34 ವರ್ಷದ ದಿವ್ಯ ನಿನ್ನೆ ರಾತ್ರಿ 3ಗಂಟೆಯಲ್ಲಿ ನಿಧನರಾಗಿದ್ದಾರೆ. ಆಕೆ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ನನಗೆ ಮತ್ತು ಆಕೆಯ ಕುಟುಂಬಕ್ಕೆ ಇದು ದೊಡ್ಡ ಆಘಾತ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.
ನವೆಂಬರ್ 26 ರಂದು ಅನಾರೋಗ್ಯಕ್ಕೀಡಾಗಿದ್ದ ದಿವ್ಯಾ ಆಸ್ಪತ್ರೆಗೆ ದಾಖಲಾಗಿದ್ದರು, ಆಕೆಯ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ನಾನು ಮತ್ತು ನನ್ನ ಪುತ್ರ ಮುಂಬಯಿಗೆ ಆಗಮಿಸಿದೆವು. ಆಕೆಯ ಆರೋಗ್ಯ ತೀವ್ರ ಹದಗೆಟ್ಟಿದ್ದು, ವೆಂಟಿಲೇಟರ್ ನಲ್ಲಿ ಇಟ್ಟಿದ್ದರು ಎಂದು ದಿವ್ಯಾ ತಾಯಿ ತಿಳಿಸಿದ್ದಾರೆ.