ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಬೂದಾಳ್ ಕೃಷ್ಣಮೂರ್ತಿ ಇನ್ನಿಲ್ಲ

ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಬೂದಾಳ್ ಕೃಷ್ಣಮೂರ್ತಿ (71) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 6.45ಕ್ಕೆ ಬೆಂಗಳೂರಿನ ಕೆಂಗೇರಿಯ ಶಿರ್ಕೆ ಅಪಾರ್ಟ್ ಮೆಂಟ್ ನಲ್ಲಿರುವ ತಮ್ಮ ಸ್ವಗೃಹದಲ್ಲಿ ಅಸುನೀಗಿದ್ದಾರೆ.
ಬೂದಾಳ್ ಕೃಷ್ಣಮೂರ್ತಿ
ಬೂದಾಳ್ ಕೃಷ್ಣಮೂರ್ತಿ

ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಬೂದಾಳ್ ಕೃಷ್ಣಮೂರ್ತಿ (71) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 6.45ಕ್ಕೆ ಬೆಂಗಳೂರಿನ ಕೆಂಗೇರಿಯ ಶಿರ್ಕೆ ಅಪಾರ್ಟ್ ಮೆಂಟ್ ನಲ್ಲಿರುವ ತಮ್ಮ ಸ್ವಗೃಹದಲ್ಲಿ ಅಸುನೀಗಿದ್ದಾರೆ.

ಹುಳಿಯಾರು ಸಮೀಪದ ಬೂದಾಳುವಿನಲ್ಲಿ 1949ರಲ್ಲಿ ಜನಿಸಿದ ಕೃಷ್ಣಮೂರ್ತಿ ಪದವಿ ವ್ಯಾಸಂಗದ ನಂತರ ಬೆಂಗಳೂರಿಗೆ ಆಗಮಿಸಿ ಸಿದ್ದಲಿಂಗಯ್ಯ ನಿರ್ದೇಶನದ ರ ‘ಬೂತಯ್ಯನ ಮಗ ಅಯ್ಯು’, ‘ಹೇಮಾವತಿ’ ಸೇರಿದಂತೆ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು

'ಎರಡು ದಂಡೆಯ ಮೇಲೆ’. ‘ಒಲವಿನ ಕಾಣಿಕೆ’, ‘ಸೀತಾಂಜನೇಯ’, ‘ಶುಭಲಗ್ನ’, ‘ಲಂಚಸಾಮ್ರಾಜ್ಯ’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದರು.  ‘ಇದೊಳ್ಳೆ ಮಹಾಭಾರತ’  ಎಂಬ ಅವರ ನಿರ್ದೇಶನದ ಕಡೆಯ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ.

ಕೃಷ್ಣಮೂರ್ತಿ ನಿರ್ದೇಶನ ಮಾತ್ರವಲ್ಲದೆ ಅಭಿನಯದಲ್ಲಿಯೂ ನುರಿತಿದ್ದರು. 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಇವರು "ಪ್ರೊಫೆಸರ್", ""ಶ್ರೀಗಂಧ", "ಅರಿಶಿನ ಕುಂಕುಮ", "ಬಲ್ ನನ್ಮಗ", "ಪ್ರಜಾಶಕ್ತಿ", "ಆರ್ಯಭಟ" ಇನ್ನೂ ಹಲವಾರು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಇನ್ನು ಕೃಷ್ಣಮೂರ್ತಿ ತಮ್ಮ ನಿರ್ದೇಶನದ ಕೆಲ ಚಿತ್ರಗಳಿಗೆ ಹಾಡನ್ನೂ ಬರೆದಿದ್ದರು. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಹಿರಿಯರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com