ಹಾಯ್ ಎಂದಾಗ ನಿನ್ನ ಮೊಗದಲ್ಲಿ ಮೂಡಿದ ನಗು ಮರೆಯಲು ಸಾಧ್ಯವಿಲ್ಲ: ಗೋಲ್ಡನ್ ಸ್ಟಾರ್ ಗಣೇಶ್

ಸೊಗಸಾದ ನಗುವಿನಂದಲೇ ಮೋಡಿ ಮಾಡುವ ಮುದ್ದು ಮೊಗದ ಗೋಲ್ಡನ್ ಸ್ಟಾರ್ ಗಣೇಶ್ ವಿವಾಹ ವಾರ್ಷಿಕೋತ್ಸವದ ಸಂಭ್ರದಲ್ಲಿದ್ದಾರೆ 
ಗಣೇಶ್-ಶಿಲ್ಪಾ ವಿವಾಹ ವಾರ್ಷಿಕೋತ್ಸವ
ಗಣೇಶ್-ಶಿಲ್ಪಾ ವಿವಾಹ ವಾರ್ಷಿಕೋತ್ಸವ

ಸೊಗಸಾದ ನಗುವಿನಂದಲೇ ಮೋಡಿ ಮಾಡುವ ಮುದ್ದು ಮೊಗದ ಗೋಲ್ಡನ್ ಸ್ಟಾರ್ ಗಣೇಶ್ ವಿವಾಹ ವಾರ್ಷಿಕೋತ್ಸವದ ಸಂಭ್ರದಲ್ಲಿದ್ದಾರೆ

ಶಿಲ್ಪಾ ಅವರನ್ನು ಕೈಹಿಡಿದು 12 ವರ್ಷಗಳಾಗಿದ್ದು, ಈ ಕುರಿತು ಟ್ವಿಟರ್ ನಲ್ಲಿ ಇಬ್ಬರ ಭಾವಚಿತ್ರಗಳನ್ನೂ ಹಾಕಿ ಸಂತಸ ಹಂಚಿಕೊಂಡಿದ್ದಾರೆ.

"ನಾನು ಹಾಯ್ ಎಂದಾಗ ನೀನೂ ನನಗೆ ಹಾಯ್ ಹೇಳಿದ್ದೆ. ಆ ದಿನ ನಿನ್ನ ಮೊಗದಲ್ಲಿ ಮೂಡಿದ್ದ ನಗು ಮರೆಯಲು ಸಾಧ್ಯವಿಲ್ಲ, ಇಂದಿಗೆ ನಮ್ಮ ವಿವಾಹವಾಗಿ 12 ವರ್ಷಗಳಾದವು ನೀನೇ ನನ್ನ ಪ್ರೀತಿ, ನನ್ನ ಆತ್ಮೀಯ ಸ್ನೇಹಿತೆ, ನನ್ನ ಮಹಾರಾಣಿ. ನನ್ನ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು" ಗಣೇಶ್ ಟ್ವೀಟ್ ಮಾಡಿಕೊಂಡಿದ್ದಾರೆ.

2008, ಫೆಬ್ರವರಿ 11ರಂದು ತಮ್ಮ ಜೆಪಿ ನಗರದ ನಿವಾಸದಲ್ಲಿ ಗೋಲ್ಡನ್ ಸ್ತಾರ್ ಗನೇಶ್ ಹಾಗೂ ಶಿಲ್ಪಾ ವಿವಾಹವಾಗಿದ್ದರು. ವಿಶೇಷವೆಂದರೆ ಫೆ. 18ಕ್ಕೆ ಇವರ ವಿವಾಹ ನಿಗದಿಯಾಗಿದ್ದರೂ ಅಭಿಮಾನಿಗಳ ಒತ್ತಡದ ಕಾರಣ ವಾರದ ಮುನ್ನವೇ ಮದುವೆಯಾಗಿದ್ದರು.

ಈ ಸ್ಟಾರ್ ದಂಪತಿಗೆ  ದಂಪತಿಗೆ ಮಗಳು ಚರಿತ್ರ್ಯ ಹಾಗೂ ಮಗ ವಿಹಾನ್ ಇದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com