‘ಜಂಟಲ್  ಮ್ಯಾನ್‍’ ಯಶಸ್ವಿ ಪ್ರದರ್ಶನ: ಚಿತ್ರ ನೋಡಿದ ‘ರಿಯಲ್ ಜಂಟಲ್ ಮ್ಯಾನ್’ ಏನಂದ್ರು?

ಕಳೆದ ವಾರ ತೆರೆಕಂಡ ಹಲವು ಚಿತ್ರಗಳ ಪೈಕಿ  ‘ಜಂಟಲ್ ಮ್ಯಾನ್‍’ ಗೆ ಪ್ರೇಕ್ಷಕರು ಜೈ ಎಂದಿದ್ದು, ಯಶಸ್ಸಿನತ್ತ ದಾಪುಗಾಲು ಹಾಕುತ್ತಿದೆ. ನಿರ್ಮಾಪಕ ಗುರುದತ್ ಸೇರಿದಂತೆ ಚಿತ್ರತಂಡ ಖುಷಿಯಾಗಿದೆ.

Published: 13th February 2020 04:18 PM  |   Last Updated: 13th February 2020 04:18 PM   |  A+A-


prajwad1

ಚಿತ್ರದ ಸ್ಟಿಲ್

Posted By : Lingaraj Badiger
Source : UNI

ಬೆಂಗಳೂರು: ಕಳೆದ ವಾರ ತೆರೆಕಂಡ ಹಲವು ಚಿತ್ರಗಳ ಪೈಕಿ  ‘ಜಂಟಲ್ ಮ್ಯಾನ್‍’ ಗೆ ಪ್ರೇಕ್ಷಕರು ಜೈ ಎಂದಿದ್ದು, ಯಶಸ್ಸಿನತ್ತ ದಾಪುಗಾಲು ಹಾಕುತ್ತಿದೆ. ನಿರ್ಮಾಪಕ ಗುರುದತ್ ಸೇರಿದಂತೆ ಚಿತ್ರತಂಡ ಖುಷಿಯಾಗಿದೆ.
  
ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ನಿಂದ ಬಳಲುವ ನಾಯಕನ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ಅಭಿನಯವನ್ನು ಕಂಡು ಪ್ರೇಕ್ಷಕರು ಫಿದಾ ಆಗಿದ್ದಾರೆ . . . ಹಾಗಿದ್ರೆ ಈ ಚಿತ್ರಕಥೆಯ ಸ್ಫೂರ್ತಿ ನಿಜವಾದ ಜಂಟಲ್ ಮ್ಯಾನ್ ಕುಂಭಕರ್ಣ ಯಾರು ಅಂತ ನಿಮ್ಗೆ ಗೊತ್ತಾ, ಚಿತ್ರ ನೋಡಿದ ಅವ್ರು ಏನಂದ್ರು ಅನ್ನೋ ಕುತೂಹಲ ಇದೆ ಅಲ್ವಾ?
  
ಜಂಟಲ್ ಮ್ಯಾನ್ ಚಿತ್ರ ಯಶಸ್ಚಿಯಾಗಿ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಕರೆದಿದ್ದ ಸುದ್ದಿಗೋಷ್ಠಿಯ ವಿಶೇಷ ಅತಿಥಿಯಾಗಿ ರಿಯಲ್ ಜಂಟಲ್ ಮ್ಯಾನ್ ರಾಜೀವ್ ಪಾಲ್ಗೊಂಡಿದ್ದರು.

ಸತತ 7 ತಿಂಗಳು ನಿತ್ಯ 18 ಗಂಟೆ ನಿದ್ರೆ!
ಮುಂಬೈ ನಿವಾಸಿಯಾದ ರಾಜೀವ್ ಅವರಿಗೆ ತಮ್ಮ 16ನೇ ವರ್ಷದಲ್ಲಿ ಈ ‘ಕುಂಭಕರ್ಣ’ ಕಾಯಿಲೆ ಕಾಣಿಸಿಕೊಂಡಿತಂತೆ.  “ಇದು ಅತ್ಯಂತ ಅಪರೂಪದ ಕಾಯಿಲೆ. ಭಾರತದಲ್ಲಿ ಈ ಸಂಬಂಧ ಹೆಚ್ಚಿನ ಅಂಕಿಅಂಶ ಲಭ್ಯವಿಲ್ಲ. ನನಗೆ 16ನೇ ವಯಸ್ಸಿನಲ್ಲಿ ಈ ಕಾಯಿಲೆ ಕಾಣಿಸಿಕೊಂಡಿತು. ಅದು ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಇದೆ ಅಂತ ಗೊತ್ತಾಗೋಕೆ 5‍ ವರ್ಷ ಬೇಕಾಯ್ತು. ಕಳೆದ 7 ತಿಂಗಳು ಸತತ 18 ಗಂಟೆ ನಿದ್ರೆ ಮಾಡಿದ್ದು, ಉಳಿದ 6 ಗಂಟೆ ಊಟ, ತಿಂಡಿ ಇತ್ಯಾದಿಗಳಲ್ಲೇ ಕಳೆದುಹೋಯಿತು, ಕೆಲಸದ ಕಡೆ ಗಮನ ನೀಡಲು ಸಾಧ್ಯವಾಗಲೇ ಇಲ್ಲ” ಎಂದರು
  
“ಜಂಟಲ್ ಮ್ಯಾನ್ ಚಿತ್ರ ಚೆನ್ನಾಗಿದೆ ಪ್ರಜ್ವಲ್ ದೇವರಾಜ್ ಅಭಿನಯ ಉತ್ತಮವಾಗಿದೆ. ಕಮರ್ಷಿಯಲ್ ಆಗಿ ಚಿತ್ರ ಮೂಡಿಬಂದಿದ್ದರೂ ಅನೇಕ ದೃಶ್ಯಗಳು ನನ್ನ ಜೀವನಕ್ಕೆ ಸಂಬಂಧಿಸಿದ್ದು, ಅದನ್ನು ನೋಡಿ ನಾನು ಹಾಗೂ ನನ್ನ ತಾಯಿ ಭಾವುಕರಾದೆವು” ಎಂದು ಹೇಳಿಕೊಂಡರು.
  
“ಮನೆಗೆ ನಾನೊಬ್ಬನೇ ಮಗ ಈ ಕಾಯಿಲೆಯಿಂದಾಗಿ ತಲತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ಫ್ಯಾಮಿಲಿ ಬಿಸಿನೆಸ್ ಕಡೆ ಗಮನ ಕೊಡೋಕೆ ಆಗ್ತಿಲ್ಲ. ಆದರೆ ತಾಯಿ, ಪತ್ನಿ, ಹಾಗೂ ಇಬ್ಬರು ಮಕ್ಕಳು ಸಹಕಾರ ನೀಡುತ್ತಿರುವುದರಿಂದ ಸ್ವಲ್ಪ ನೆಮ್ಮದಿಯಿದೆ. ಈ ಕಾಯಿಲೆಯಿಂದ ರಕ್ತದೊತ್ತಡದಲ್ಲಿ ಬಹಳ ಏರುಪೇರಾಗುತ್ತದೆ ಜೀವನವೇ ಹಾಳಾಗುತ್ತದೆ ಇದಕ್ಕೆ ಸೂಕ್ತ ಔಷಧಿಗಳಿಲ್ಲ. ಮೆದುಳಿನ ಗಾಬಾ ಟ್ರಾನ್ಸ್ ಮಿಷನ್ ಹಾಳಾಗಿರುವ ಕಾರಣಕ್ಕೆ ಯೋಗ, ಧ್ಯಾನ ಇತ್ಯಾದಿಗಳಿಂದಲೂ ಪರಿಹಾರ ಸಿಗುತ್ತಿಲ್ಲ” ಎಂದು ಹೇಳಿಕೊಂಡರು.

Stay up to date on all the latest ಸಿನಿಮಾ ಸುದ್ದಿ news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp