ಮಾನವ ಕಳ್ಳ ಸಾಗಾಟ ಜಾಲದ ಕಥಾಹಂದರವುಳ್ಳ ಸಿನಿಮಾ 'ಗಿಫ್ಟ್ ಬಾಕ್ಸ್'!

ಮಾನವ ಕಳ್ಳಸಾಗಣೆ ಕುರಿತ ಸಿನಿಮಾಗಳು ಕನ್ನಡದಲ್ಲಿ ಬಂದುಹೋಗಿವೆ. ಆದರೆ, ಅವುಗಳಿಗಿಂತ ‘ಗಿಫ್ಟ್ ಬಾಕ್ಸ್’ ಚಿತ್ರ ವಿಶೇಷ ಎಂಬುದು ನಿರ್ದೇಶಕ ರಘು ಎಸ್.ಪಿ. ಅನಿಸಿಕೆ.
ಗಿಫ್ಟ್ ಬಾಕ್ಸ್ ಸಿನಿಮಾ ಸ್ಟಿಲ್
ಗಿಫ್ಟ್ ಬಾಕ್ಸ್ ಸಿನಿಮಾ ಸ್ಟಿಲ್

ಮಾನವ ಕಳ್ಳಸಾಗಣೆ ಕುರಿತ ಸಿನಿಮಾಗಳು ಕನ್ನಡದಲ್ಲಿ ಬಂದುಹೋಗಿವೆ. ಆದರೆ, ಅವುಗಳಿಗಿಂತ ‘ಗಿಫ್ಟ್ ಬಾಕ್ಸ್’ ಚಿತ್ರ ವಿಶೇಷ ಎಂಬುದು ನಿರ್ದೇಶಕ ರಘು ಎಸ್.ಪಿ. ಅನಿಸಿಕೆ.

ಸಮಾಜದ ವ್ಯಾಘ್ರ ಮುಖಗಳನ್ನು ಪರಿಚಯಿಸುವ ಸಣ್ಣ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿರುವ ಅವರು, ಕೆಲವೊಂದಿಷ್ಟು ಅಧ್ಯಯನ ನಡೆಸಿ ಹೊಸ ಕಥೆಯನ್ನು ಹಿಡಿದು ಇದೇ ವಾರ ಆಗಮಿಸುತ್ತಿದ್ದಾರೆ. 

ಅಂದರೆ, ಫೆ. 14ರಂದು ‘ಗಿಫ್ಟ್ ಬಾಕ್ಸ್’ ಚಿತ್ರ ತೆರೆಗೆ ಬರುತ್ತಿದೆ. ನಾಯಕನಾಗಿ ರಿತ್ವಿಕ್ ಮಠದ್, ನಾಯಕಿಯಾಗಿ ಅಮಿತಾ ಕುಲಾಲ್ ಮತ್ತು ದೀಪ್ತಿ ನಟಸಿದ್ದಾರೆ.

‘ಮಾನವ ಕಳ್ಳ ಸಾಗಾಟ ಜಾಲದಲ್ಲಿ ಬರೀ ಹೆಣ್ಣುಮಕ್ಕಳೇ ಅಲ್ಲ, ಪುರುಷರು ಸಹ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆ ಜಾಲದಲ್ಲಿ ಸಿಲುಕಿದ ಅಮಾಯಕನೊಬ್ಬ ಅದರಿಂದ ಹೊರಬರಲು ಪಡುವ ಕಷ್ಟಗಳೇನು ಎಂಬುದೇ ಈ ‘ಗಿಫ್ಟ್ ಬಾಕ್ಸ್’ ಎಂದು ಸಿನಿಮಾದಲ್ಲಿ ಹೇಳಹೊರಟಿರುವ ಕಥೆಯನ್ನು ವಿವರಿಸುತ್ತಾರೆ ನಿರ್ದೇಶಕರು. 

ಸಾಮಾನ್ಯವಾಗಿ ಎಲ್ಲರೂ ಮಾನವ ಕಳ್ಳ ಸಾಗಣೆ ಬಗ್ಗೆ ಸಿನಿಮಾ ಮಾಡುತ್ತಾರೆ, ಆದರೆ ಇಲ್ಲಿ ಒಬ್ಬ ಯುವಕ ಈ ದಂಧೆಯೊಳಗೆ ಸಿಲುಕಿಕೊಂಡಾಗ ಆತ ಅನುಭವಿಸುವ ಯಾತನೆಯನ್ನು ತೋರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com