ಚಿತ್ರೋತ್ಸವ: ಪೂರ್ಣ ಆನ್‌ಲೈನ್‌ ನೋಂದಣಿಗೆ ವಿರೋಧ

ಬೆಂಗಳೂರು ಅಂತಾರಾಷ್ಟ್ರೀಯ 12ನೇ ಚಿತ್ರೋತ್ಸವ ಪ್ರವೇಶಕ್ಕೆ ಪಾಸ್ ಪಡೆಯಲು ಆನ್ ಲೈನ್
ಮೊರೆ ಹೊಗಬೇಕಾಗಿದೆ. ಕೌಂಟರ್ ನೋಂದಣಿ ಇಲ್ಲವೇ ಇಲ್ಲ. ಹೀಗೆ ಮಾಡಿರುವುದು ವ್ಯವಸ್ಥೆಯಲ್ಲ ಕುವ್ಯವಸ್ಥೆ ಎಂದು ಚಿತ್ರಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Published: 17th February 2020 05:53 PM  |   Last Updated: 17th February 2020 06:05 PM   |  A+A-


BIFFES faces flak for making entry pass process completely online

ಚಿತ್ರೋತ್ಸವ; ಪೂರ್ಣ ಆನ್‌ಲೈನ್‌ ನೋಂದಣಿಗೆ ವಿರೋಧ

Posted By : srinivasrao
Source : UNI

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ 12ನೇ ಚಿತ್ರೋತ್ಸವ ಪ್ರವೇಶಕ್ಕೆ ಪಾಸ್ ಪಡೆಯಲು ಆನ್ ಲೈನ್
ಮೊರೆ ಹೊಗಬೇಕಾಗಿದೆ. ಕೌಂಟರ್ ನೋಂದಣಿ ಇಲ್ಲವೇ ಇಲ್ಲ. ಹೀಗೆ ಮಾಡಿರುವುದು ವ್ಯವಸ್ಥೆಯಲ್ಲ ಕುವ್ಯವಸ್ಥೆ ಎಂದು ಚಿತ್ರಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಈ ಮೊದಲಿನ ಚಿತ್ರೋತ್ಸವಗಳಿಗೆ ವಿವಿಧ ಕೌಂಟರುಗಳಲ್ಲಿ ಭಾವಚಿತ್ರ, ನಿಗದಿತ ಹಣ ನೀಡಿ ಪಾಸುಗಳನ್ನು ಪಡೆಯುವ ಅವಕಾಶವಿತ್ತು. ಚಿತ್ರೋತ್ಸವ ನಡೆಯುವ ಸ್ಥಳದಲ್ಲಿಯೂ ನೇರವಾಗಿ ಪಾಸು ಪಡೆಯುವ ಅವಕಾಶವಿತ್ತು. ಆದರೆ ಈ ಬಾರಿ ನೇರ ಪಾಸ್ ವಿತರಿಸುವುದಕ್ಕೆ ತಿಲಾಂಜಲಿ ನೀಡಿ ಇದರ ಹೊಣೆಗಾರಿಕೆಯನ್ನು ಬುಕ್ ಮೈ ಶೋಗೆ ವಹಿಸಲಾಗಿದೆ.

ಚಿತ್ರೋತ್ಸವ ಹೊಣೆಗಾರಿಕೆ ಹೊತ್ತ ಕರ್ನಾಟಕ ಚಲನಚಿತ್ರ ಅಕಾಡೆಮಿ ವೆಬ್ ಸೈಟ್ ಇದೆಯಾದರೂ ಅಲ್ಲಿ ನೋಂದಣಿ ವಿವರಗಳಿಗೆ ಪರಿಶೀಲಿಸಿದರೆ ಅದು ಬುಕ್ ಮೂ ಶೋನತ್ತ ದಾರಿ ತೋರಿಸುತ್ತದೆ. ಇದು ಸಹ ಆಕ್ರೋಶಕ್ಕೆ ಕಾರಣವಾಗಿದೆ. ಬಹುದೊಡ್ಡ ಚಿತ್ರೋತ್ಸವ ನಡೆಸುವ ಅಕಾಡೆಮಿಯೇ ಈ ವ್ಯವಸ್ಥೆಯನ್ನು ನಿರ್ವಹಿಸಬಹುದಿತ್ತು. ಇದರ ಬದಲು ಖಾಸಗಿ ಕಂಪನಿಗೆ ವಹಿಸಿರುವುದು ಸರಿಯಲ್ಲ ಎಂಬ ದೂರು ವ್ಯಕ್ತವಾಗುತ್ತಿದೆ.

ಇತರೆಡೆಯ ಅಂತಾರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ಆನ್ ಲೈನ್ ಮತ್ತು ನೇರವಾಗಿ ಪಾಸು ಪಡೆಯುವ ಅವಕಾಶವಿದೆ. ಇದು ಆನ್ಲೈನ್ ವ್ಯವಹಾರಗಳನ್ನು ಮಾಡಿ ಅನುಭವವಿಲ್ಲದವರಿಗೆ ಅನುಕೂಲ. ಎಲ್ಲರೂ ಆಂಡ್ರಾಯ್ಡ್ ಮೊಬೈಲ್ ಹೊಂದಿರುವುದಿಲ್ಲ. ಹೊಂದಿದ್ದರೂ ಬುಕ್ ಮೈ ಶೋನಂಥ ಆ್ಯಪ್ ಡೌನ್ ಲೋಡ್ ಮಾಡಿರುವುದಿಲ್ಲ. ಇನ್ನು ಹಲವರಿಗೆ ಆನ್ ಲೈನ್ ಮೂಲಕ ಹಣಕಾಸು ವ್ಯವಹಾರ ಮಾಡಲು ಅಂಜಿಕೆಯಿದೆ. ಇಂಥವರಿದಲೂ ಪೂರ್ಣ ಆನ್ ಲೈನ್ ನೋಂದಣಿಗೆ ವಿರೋಧ ವ್ಯಕ್ತವಾಗಿದೆ.

ಖಾಸಗಿತನಕ್ಕೆ ಧಕ್ಕೆ: ಆನ್ ಲೈನ್ ನೋಂದಣಿ ಮಾಡುವಾಗ ಬುಕ್ ಮೈ ಶೋ ಆಧಾರ್, ಡ್ರೈವಿಂಗ್ ಲೈಸನ್, ಪಾಸ್ ಪೋರ್ಟ್ ವಿವರಗಳನ್ನು ಕೇಳುತ್ತದೆ. ಕೇವಲ ಸಿನೆಮಾ ನೋಡುವುದಕ್ಕೆ ಅತಿಮುಖ್ಯವಾದ ಈ ದಾಖಲೆಗಳನ್ನು ನೀಡುವ ಅವಶ್ಯಕತೆ ಏನಿದೆ. ಇದರಿಂದ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ಉಪನ್ಯಾಸಕ ಫಣಿರಾಜ್ ಟೀಕಿಸುತ್ತಾರೆ. 

ಸರ್ಕಾರಿ ಪ್ರಾಯೋಜಿತ ಚಿತ್ರೋತ್ಸವ ಪಾಸುಗಳ ನಿರ್ವಹಣೆಯನ್ನು ಸರ್ಕಾರಿ ಏಜೆನ್ಸಿಗಳಾದ ವಾರ್ತಾ ಇಲಾಖೆ, ಫಿಲ್ಮ್ ಅಕಾಡೆಮಿಯೇ ಮಾಡಲು ತೊಂದರೆಯೇನು? ಎಂದು ಅವರು ಪ್ರಶ್ನಿಸುತ್ತಾರೆ. ಸದ್ಯದಲ್ಲಿಯೇ ಪಾಸುಗಳ ಬೆಲೆ ಏರಿಕೆಯಾಗಬಹುದು ಎಂದು ಬುಕ್ ಮೈ ಶೋದಲ್ಲಿ ಹೇಳಲಾಗಿದೆ. ಹಾಗಿದ್ದರೆ ಈ ಪಾಸುಗಳನ್ನು ಹರಾಜಿಗೆ ಇಡಲಾಗಿದೆಯೇ ? ಎಂದು ಎಂದು ಕಳೆದ ಐದಾರು ವರ್ಷಗಳಿಂದ ಚಿತ್ರೋತ್ಸವದಲ್ಲಿ ಭಾಗವಹಿಸುತ್ತಿರುವ ಉಮೇಶ್ ಆಕ್ರೋಶ
ವ್ಯಕ್ತಪಡಿಸುತ್ತಾರೆ.

ಪಾಸು ಪಡೆಯಲು ಗುರುತಿನ ಚೀಟಿಯಾಗಿ ಡ್ರೈವಿಂಗ್ ಲೈಸನ್ಸ್ ಅಪ್ಲೋಡ್ ಮಾಡಿದೆ. ಆದರೆ ಅದು ಸ್ವೀಕೃತವಾಗುತ್ತಿಲ್ಲ, ಕಾರಣ ಏನೆಂದು ತಿಳಿಯುತ್ತಿಲ್ಲ. ಗ್ರಾಮಾಂತರ ಪ್ರದೇಶಗಳಿಂದಲೂ ಚಿತ್ರೋತ್ಸವ ನೋಡುವ ಆಸಕ್ತರಿರುತ್ತಾರೆ. ಅಲ್ಲೆಲ್ಲ ಆಂಡ್ರಾಯ್ಡ್ ಪೋನ್, ಆ್ಯಪ್ ಬಳಕೆ ಕಡಿಮೆ. ಇಂಥವರು ನೇರ ಪಾಸು ಪಡೆಯುವ ವ್ಯವಸ್ಥೆ ಇದ್ದರೆ ಸೂಕ್ತವಾಗಿತ್ತು ಎಂದು ಮಂಡ್ಯದ ರಾಜು ಹೇಳುತ್ತಾರೆ.

ಈ ಮಧ್ಯೆ ಕನ್ನಡ ಚಲನಚಿತ್ರ ರಂಗದ ಅನೇಕರು ಪೂರ್ಣವಾಗಿ ಆನ್ ಲೈನ್ ಮೂಲಕ ಪಾಸುಗಳನ್ನು ವಿತರಿಸುವ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿಯೂ ಕೌಂಟರ್ ತೆರೆದು ಪಾಸು ವಿತರಿಸುವ ವ್ಯವಸ್ಥೆ ಮಾಡಿದ್ದರೆ ಹಿರಿಯ ಕಲಾವಿದರು, ನಿರ್ದೇಶಕರು, ನಿರ್ಮಾಪಕರಿಗೆ ಅನುಕೂಲವಾಗುತ್ತಿತ್ತು. ಪೂರ್ಣ ಆನ್ ವ್ಯವಸ್ಥೆ ಸರಿಯಲ್ಲ ಎಂದು ಟೀಕಿಸುತ್ತಾರೆ. 

ಹಿರಿಯ ನಾಗರಿಕರಿಂದ ವಿರೋಧ: ಬುಕ್ ಮೈ ಶೋದಲ್ಲಿ ವಿದ್ಯಾರ್ಥಿ, ಫಿಲ್ಮ್ ಸೊಸೈಟಿ ಸದಸ್ಯರು, ಪ್ರತಿನಿಧಿ, ಸೀನಿಯರ್ ಸಿಟಿಜನ್ ಎಂಬ ವಿಭಾಗಗಳಿಗೆ. ಆದರೆ ಮೂರು ದಿನದ ಹಿಂದೆಯೇ ಸೀನಿಯರ್ ಸಿಟಿಜನ್ ಪಾಸುಗಳು ಮುಕ್ತಾಯವಾಗಿವೆ. ಹಾಗಿದ್ದರೆ ಪ್ರತಿ ವಿಭಾಗಕ್ಕೂ ಹಂಚಿಕೆಯಾಗಿರುವ ಪಾಸುಗಳೆಷ್ಟು, ಸೀನಿಯರ್ ಸಿಟಿಜನ್ ಪಾಸುಗಳು ಸೋಲ್ಡ್ ಔಟ್ ಆಗಿವೆ ಎಂದು ಎನ್ನಲು ಮಾನದಂಡವೇನು ಎಂದು ಹಿರಿಯ ನಾಗರಿಕ ಶಿವರಾಜ್ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಪತ್ರಕರ್ತರಿಂದಲೂ ವಿರೋಧ: ಪತ್ರಕರ್ತರು ಪಾಸುಗಳನ್ನು ಪಡೆಯಲು ವಾರ್ತಾ ಇಲಾಖೆ ವಿತರಿಸಿದ ಮಾನ್ಯತಾ ಪತ್ರ ಪೋಟೋ ಅಪ್ಲೋಡ್ ಮಾಡಬೇಕು. ಆದರೆ ಮಾಧ್ಯಮ ಸಂಸ್ಥೆಯಲ್ಲಿ ಎಲ್ಲರಿಗೂ ಮಾನ್ಯತಾ ಪತ್ರ ದೊರಕಿರುವುದಿಲ್ಲ. ಇದು ಸಹ ವಿರೋಧಕ್ಕೆ ಕಾರಣವಾಗಿದೆ.

ನಾನು ಅಧಿಕಾರ ವಹಿಸಿಕೊಳ್ಳುವ ಮೊದಲೇ ಆನ್ ಲೈನ್ ಮೂಲಕ ಪಾಸುಗಳನ್ನು ವಿತರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಎಂದು ಬೇಸರ ಮಾಡಿಕೊಳ್ಳುತ್ತಾರೆ. ಈ ಮೊದಲು ಯು.ಎನ್.ಐ.ಗೆ ನೀಡಿದ ಸಂದರ್ಶನ ಸಂದರ್ಭದಲ್ಲಿ ಅವರು ಈ ವರ್ಷವೂ ನೇರವಾಗಿ ಪಾಸು ವಿತರಿಸುವ ವ್ಯವಸ್ಥೆಯನ್ನೂ 
ಉಳಿಸಿಕೊಳ್ಳುವ ಮಾತನಾಡಿದ್ದರು. ಅದು ಜಾರಿಗೆ ಬಾರದಿರಲು ಸಮಸ್ಯೆಯೇನು ಎಂದವರೇ ಹೇಳಬೇಕಿದೆ.

ಚಿತ್ರೋತ್ಸವ ಆರಂಭವಾಲು ಇನ್ನು ಒಂಭತ್ತು ದಿನಗಳಷ್ಟೇ ಬಾಕಿ ಉಳಿದಿವೆ. ಈಗಲಾದರೂ ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಗಳು ನೇರವಾಗಿ ಪಾಸುಗಳನ್ನು ವಿತರಿಸುವ ವ್ಯವಸ್ಥೆ ಮಾಡಲು ಮುಂದಾಗುತ್ತಾರೆಯೇ, ಚಿತ್ರಪ್ರೇಮಿಗಳ ಅಭಿಪ್ರಾಯಕ್ಕೆ ಸ್ಪಂದಿಸುತ್ತಾರೆಯೇ ಕಾದು ನೋಡಬೇಕಿದೆ.

ವರದಿ-ಕುಮಾರ ರೈತ

Stay up to date on all the latest ಸಿನಿಮಾ ಸುದ್ದಿ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp