ಆನ್ ಲೈನ್ ರಿವ್ಯೂ, ರೇಟಿಂಗ್ ಹೆಸರಿನಲ್ಲಿ ನಡೆಯುತ್ತಿದೆ ದಂಧೆ!

ಇತ್ತೀಚೆಗೆ ಪತ್ರಿಕೆಗಳಲ್ಲಿ, ಬಾಯಿಂದ ಬಾಯಿಗೆ ಸಿನೆಮಾ ಬಗ್ಗೆ ಅಭಿಪ್ರಾಯ, ಮೆಚ್ಚುಗೆ ಕೇಳುವುದಕ್ಕಿಂತ ಆನ್ ಲೈನ್ ನಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ವಿಮರ್ಶೆ ಓದಿ, ರೇಟಿಂಗ್ ನೋಡಿ ಥಿಯೇಟರ್ ಗೆ ಹೋಗುವವರೇ ಅಧಿಕ ಮಂದಿ. 
ಆನ್ ಲೈನ್ ರಿವ್ಯೂ, ರೇಟಿಂಗ್ ಹೆಸರಿನಲ್ಲಿ ನಡೆಯುತ್ತಿದೆ ದಂಧೆ!

ಬೆಂಗಳೂರು: ಇತ್ತೀಚೆಗೆ ಪತ್ರಿಕೆಗಳಲ್ಲಿ, ಬಾಯಿಂದ ಬಾಯಿಗೆ ಸಿನೆಮಾ ಬಗ್ಗೆ ಅಭಿಪ್ರಾಯ, ಮೆಚ್ಚುಗೆ ಕೇಳುವುದಕ್ಕಿಂತ ಆನ್ ಲೈನ್ ನಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ವಿಮರ್ಶೆ ಓದಿ, ರೇಟಿಂಗ್ ನೋಡಿ ಥಿಯೇಟರ್ ಗೆ ಹೋಗುವವರೇ ಅಧಿಕ ಮಂದಿ. 

ಅದರಲ್ಲೂ ಇತ್ತೀಚೆಗೆ ಬುಕ್ ಮೈ ಶೋದಲ್ಲಿ ಬರುವ ಸಿನೆಮಾದ ವಿಮರ್ಶೆ, ರೇಟಿಂಗ್ಸ್ ನೋಡಿ ಸಿನೆಮಾ ಚೆನ್ನಾಗಿದೆಯೋ, ಚೆನ್ನಾಗಿಲ್ಲವೋ ಎಂದು ವೀಕ್ಷಕರು ನಿರ್ಧರಿಸುತ್ತಾರೆ. ಆದರೆ ಈ ಬುಕ್ ಮೈ ಶೋದಲ್ಲಿ ಕೂಡ ಕ್ರಿಕೆಟ್ ನಂತೆ ಮ್ಯಾಚ್ ಫಿಕ್ಸಿಂಗ್ ನಡೆಯುತ್ತದಂತೆ. ಹಾಗಂತ ಸ್ಯಾಂಡಲ್ ವುಡ್ ನಿರ್ದೇಶಕ, ನಿರ್ಮಾಪಕರೇ ಆರೋಪಿಸುತ್ತಾರೆ. ಸಾಕಷ್ಟು ದುಡ್ಡು ಕೊಟ್ಟರೆ ಬುಕ್ ಮೈ ಶೋದಲ್ಲಿ ಉತ್ತಮ ವಿಮರ್ಶೆ, ಅಧಿಕ ರೇಟಿಂಗ್ ನೀಡುತ್ತಾರಂತೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬುಕ್ ಮೈ ಶೋ ಹೆಸರು ಹೇಳಿಕೊಂಡು ನೀವು ದುಡ್ಡು ಕೊಟ್ಟರೆ ನಿಮ್ಮ ಸಿನೆಮಾದ ರೇಟಿಂಗ್ ಹೆಚ್ಚು ಮಾಡಿಸುತ್ತೇವೆ ಎಂದು ಭರವಸೆ ಕೊಟ್ಟು ದಿಢೀರನೆ ಹಣ ಮಾಡುವ ಉಪಾಯ ಮಾಡುತ್ತಾರಂತೆ.

ಈ ಬಗ್ಗೆ ಬುಕ್ ಮೈ ಶೋದವರನ್ನು ಕೇಳಿದರೆ, ಇದು ತಮ್ಮ ಗಮನಕ್ಕೂ ಬಂದಿದೆ. ಅಕ್ರಮ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವುದು ಪತ್ತೆಯಾಗಿದ್ದು ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ, ಅವರು ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಅದರ ವಕ್ತಾರರು ಹೇಳುತ್ತಾರೆ. 

ನೀವು 10 ಸಾವಿರ ರೂಪಾಯಿಯಿಂದ 60 ಸಾವಿರ ರೂಪಾಯಿವರೆಗೆ ನೀಡಿದರೆ ಬುಕ್ ಮೈ ಶೋದಲ್ಲಿ ನಿಮ್ಮ ಸಿನೆಮಾ ರೇಟಿಂಗ್ ನ್ನು ಹೆಚ್ಚು ಮಾಡಿಸುತ್ತೇವೆ ಎಂದು ಇತ್ತೀಚೆಗೆ ಕನ್ನಡ ಸಿನೆಮಾ ನಿರ್ಮಾಪಕರೊಬ್ಬರಿಗೆ ಆಫರ್ ಕೊಟ್ಟಿದ್ದರಂತೆ. ''ಮೊದಲಿಗೆ ಫೇಸ್ ಬುಕ್ ನಲ್ಲಿ ಸ್ನೇಹ ಮ್ಯಾಥ್ಯು ಎಂಬುವವರಿಂದ ಮೆಸೇಜ್ ಬಂತು. ನಾನು ಬುಕ್ ಮೈ ಶೋದಲ್ಲಿ ಕೆಲಸ ಮಾಡುತ್ತಿಲ್ಲ, ಆದರೆ ಅದರ ಭಾಗಿವಾಗಿದ್ದೇನೆ, ನೀವು ದುಡ್ಡು ಕೊಟ್ಟರೆ ಸಿನೆಮಾ ರೇಟಿಂಗ್ ಹೆಚ್ಚು ಮಾಡಬಹುದು ಎಂದರು. ನನ್ನ ಮೊಬೈಲ್ ಸಂಖ್ಯೆ ತೆಗೆದುಕೊಂಡು ವಾಟ್ಸಾಪ್ ನಲ್ಲಿ ಪ್ಯಾಕೇಜ್ ಕಳುಹಿಸಿಕೊಟ್ಟರು'' ಎನ್ನುತ್ತಾರೆ ನಿರ್ಮಾಪಕರು.

ಸಿನೆಮಾ ಫಸ್ಟ್ ಶೋ ಆದ ನಂತರ ಬುಕ್ ಮೈ ಶೋ ವೇದಿಕೆಯಡಿ ನಡೆಸುವ ಕಾರ್ಯವಿಧಾನಗಳ ಬಗ್ಗೆ ವ್ಯಕ್ತಿಯೊಬ್ಬ ನಿರ್ಮಾಪಕನಿಗೆ ಹೇಳಿಕೊಂಡರಂತೆ. ಅದರಲ್ಲಿ ಸಾವಿರ ವೋಟ್ ಗಳು, ರಿವ್ಯೂ, ರೇಟಿಂಗ್ ಧನಾತ್ಮಕವಾಗಿ ನಾಲ್ಕೈದು ದಿನಗಳ ಕಾಲ ಇಟ್ಟುಕೊಳ್ಳುತ್ತಾರೆ. ಇದಕ್ಕೆ 30 ಸಾವಿರ ರೂಪಾಯಿ ಬೇಡಿಕೆಯಿಡುತ್ತಾರೆ ಎನ್ನುತ್ತಾರೆ.

ಆದರೆ ಇದು ಬುಕ್ ಮೈ ಶೋ ಕಂಪೆನಿಯ ಉದ್ಯೋಗಿಗಳು ಅಥವಾ ಮಾಜಿ ಉದ್ಯೋಗಿಗಳೇ ಮಾಡುತ್ತಿರಬಹುದು. ಬುಕ್ ಮೈ ಶೋದ ಆನ್ ಲೈನ್ ಸೌಲಭ್ಯ ಪಡೆಯಲು ಸಾಧ್ಯವಿಲ್ಲದವರು ಇದನ್ನು ಮಾಡಲು ಸಾಧ್ಯವಿಲ್ಲ ಎಂಬುದು ನಿರ್ದೇಶಕರು, ನಿರ್ಮಾಪಕರ ಅನಿಸಿಕೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com