ರಾಜಸ್ತಾನದಲ್ಲಿ ಒಂಟೆ ಮೇಲೆ ವಿಕ್ರಮನ ಸಾಹಸ

‘ಕ್ರೇಜಿಸ್ಟಾರ್’ ರವಿಚಂದ್ರನ್ ಕಿರಿಯ ಪುತ್ರ ವಿಕ್ರಮ್ ಅಭಿನಯದ ‘ತ್ರಿವಿಕ್ರಮ’ ಸಿನಿಮಾ ಶೂಟಿಂಗ್ ಹಂತದಲ್ಲೇ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. 

Published: 02nd January 2020 11:40 AM  |   Last Updated: 02nd January 2020 11:40 AM   |  A+A-


'Trivikrama' Cinema Set

ತ್ರಿವಿಕ್ರಮ ಸಿನಿಮಾ ಶೂಟಿಂಗ್

Posted By : Shilpa D
Source : The New Indian Express

ಬೆಂಗಳೂರು: ‘ಕ್ರೇಜಿಸ್ಟಾರ್’ ರವಿಚಂದ್ರನ್ ಕಿರಿಯ ಪುತ್ರ ವಿಕ್ರಮ್ ಅಭಿನಯದ ‘ತ್ರಿವಿಕ್ರಮ’ ಸಿನಿಮಾ ಶೂಟಿಂಗ್ ಹಂತದಲ್ಲೇ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. 

ರಾಜಸ್ಥಾನದ ಬಿರು ಬಿಸಿಲಿನಲ್ಲಿ ಹಾಡುಗಳನ್ನು ಚಿತ್ರೀಕರಿಸಿಕೊಂಡಿದ್ದ ತಂಡ, ಸಾಹಸ ದೃಶ್ಯಗಳನ್ನೂ ಸೆರೆಹಿಡಿದುಕೊಂಡಿದೆ. ಅದೂ ಒಂಟೆಗಳ ಮೇಲೆ ಎಂಬುದು ವಿಶೇಷ!

ಚೊಚ್ಚಲ ಸಿನಿಮಾ ಎಂದ ತಕ್ಷಣ ಅಲ್ಲಿ ವಿಶೇಷತೆಗಳ ಸರಮಾಲೆಯೇ ಇರುತ್ತದೆ. ‘ತ್ರಿವಿಕ್ರಮ’ನಲ್ಲೂ ಅಂಥ ವಿಶೇಷಗಳನ್ನು ಅಳವಡಿಸುವ ಭರದಲ್ಲಿದ್ದಾರೆ ನಿರ್ದೇಶಕ ಸಹನಾ ಮೂರ್ತಿ.  ಮೊದಲ ಬಾರಿ ಒಂಟೆಗಳ ಮೇಲೆ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.  ಸುಮಾರು 15 ಒಂಟೆಗಳನ್ನು ಬಳಸಿಕೊಳ್ಳಲಾಗಿದೆ. ಒಂಟೆಗಳನ್ನು ಸಾಮಾನ್ಯವಾಗಿ ಹಾಡುಗಳಲ್ಲಿ  ಬಳಸಿಕೊಳ್ಳಲಾಗುತ್ತಿತ್ತು.

ಸತತ 15 ದಿನಗಳ ಕಾಲ ರಾಜಸ್ಥಾನದ ಮರಳುಗಾಡಲ್ಲಿ ನಡೆದ ಶೂಟಿಂಗ್​ನಲ್ಲಿ ನಾಯಕಿ ಆಕಾಂಕ್ಷಾ, ಹಾಸ್ಯ ನಟ ಸಾಧುಕೋಕಿಲ, ಬಾಲಿವುಡ್ ನಟ ರೋಹಿತ್ ರಾಯ್ ಸೇರಿ ಹಲವರು ಪಾಲ್ಗೊಂಡಿದ್ದರು. ಚಿತ್ರಕ್ಕೆ ರಾಮ್ಕೋ ಬಂಡವಾಳ ಹೂಡುತ್ತಿದ್ದಾರೆ.

ಸದ್ಯ ಮೈಸೂರಿನಲ್ಲಿ  12 ದಿನಗಳ ಶೂಟಿಂಗ್ ನಡೆಯುತ್ತಿದೆ. ಕ್ಲೈಮ್ಯಾಕ್ಸ್ ದೃಶ್ಯಗಳ ಶೂಟಿಂಗ್ ಚಿತ್ರೀಕರಣ ನಡೆಯುತ್ತಿದೆ. ರೋಹಿತ್ ರಾಯ್ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಇದೊಂದು ಹೈ ವೋಲ್ಟೇಜ್ ಲವ್ ಸ್ಟೋರಿಯಾಗಿದೆ. ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp