ವಿಂಡೋ ಸೀಟ್ ನಲ್ಲಿ ಸಂಜನಾ ಆನಂದ್ ಮತ್ತು ಅಮೃತಾ ಅಯ್ಯಂಗಾರ್

ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಸಿನಿಮಾಗೆ  'ರಂಗಿತರಂಗ' ನಿರೂಪ್ ಭಂಡಾರಿ ನಾಯಕನಟರಾಗಿದ್ದು, ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ಚಿತ್ರಕ್ಕೆ ನಾಯಕಿಯಾಗಿದ್ದಾರೆ.
ಸಂಜನಾ ಆನಂದ್
ಸಂಜನಾ ಆನಂದ್

ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಸಿನಿಮಾಗೆ  'ರಂಗಿತರಂಗ' ನಿರೂಪ್ ಭಂಡಾರಿ ನಾಯಕನಟರಾಗಿದ್ದು, ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ಇದೇ ಮೊದಲ ಬಾರಿಗೆ  ಮೂವರು ತೆರೆ ಹಂಚಿಕೊಳ್ಳುತ್ತಿದ್ದಾರೆ, ಕೆಮಿಸ್ಟ್ರಿ ಕರಿಯಪ್ಪ ಸಿನಿಮಾ ಮೂಲಕ ಸಂಜನಾ ಆನಂದ್ ಚಿತ್ರರಂಗ ಪ್ರವೇಶಿಸಿದರು. ಈಗ ಸದ್ಯ ಬ್ಯುಸಿ ನಾಯಕಿಯಾಗಿದ್ದಾರೆ. 

ದುನಿಯಾ ವಿಜಯ್ ನಿರ್ದೇಶನದ ಸಲಗ ಸಿನಿಮಾದಲ್ಲಿ ಸಂಜನಾ ನಾಯಕಿಯಾಗಿದ್ದಾರೆ, ಜೊತೆಗೆ ಶೋಕಿವಾಲ್ ಸಿನಮಾದಲ್ಲಿ ಅಜಯ್ ರಾವ್ ಜತೆ ನಟಿಸುತ್ತಿದ್ದಾರೆ,  ಇನ್ನೂ ಅಮೃತಾ ಅಯ್ಯಂಗಾರ್ ಸೂರಿಯ ಪಾಪ್ ಕಾರ್ನ್ ಮಂಕಿ ಟೈಗರ್ ನಲ್ಲಿ ಹಾಗೂ ಕೃಷ್ಣ ಮತ್ತು ಶಿವಾರ್ಜುನ  ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದೊಂದು ಮರ್ಡರ್ ಮಿಸ್ಟ್ರಿ ಕಥೆಯಾಗಿದ್ದು, ಬಹುತೇಕ ಚಿತ್ರದ ಕಥೆ ಸಾಗರದಲ್ಲಿ ನಡೆಯುತ್ತಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com