ಅಂಬಿಯ ಪ್ರೀತಿಯ ಕನ್ವರ್ ಲಾಲ್ ಜತೆ ಡಿ ಬಾಸ್ ಸೆಲ್ಫಿ

ರೆಬೆಲ್ ಸ್ಟಾರ್ ಅಂಬರೀಶ್ ಅವರ ಪ್ರೀತಿಯ ಶ್ವಾನ ಕನ್ವರ್ ಲಾಲ್ ಜತೆ ಅಭಿಮಾನಿಗಳ ಪಾಲಿನ ಡಿ ಬಾಸ್ ದರ್ಶನ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. 

ಇತ್ತೀಚೆಗೆ ಅಂಬರೀಶ್ ಮನೆಗೆ ತೆರಳಿದ್ದ ದರ್ಶನ್ ಅಲ್ಲಿದ್ದ ಕನ್ವರ್ ಲಾಲ್ ಜತೆ ತುಸು ಕಾಲ ಕಳೆದಿದ್ದಾರೆ, ಮಾತ್ರವಲ್ಲದೆ ಅವನೊಡನೆ ನಿಂತು ತಾವೂ ಸೆಲ್ಫಿ ತೆಗೆದುಕೊಂಡಿದ್ದಾರೆ.

ಇದೀಗ ಅದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ದರ್ಶನ್ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಪಡೆದಿದ್ದಾರೆ.

ಸೇಂಟ್ ಬರ್ನಾಡ್ ತಳಿಯ ಈ ನಾಯಿಯನ್ನು ಅಂಬರೀಶ್ ಸಾಕಿದ್ದು ಅದಕ್ಕೆ ಕನ್ವರ್ ಲಾಲ್ ಎಂದು ಪ್ರೀತಿಯಿಂದ ನಾಮಕರಣ ಮಾಡಿದರು. ಅಲ್ಲದೆ ಇದರೊಡನೆ ಇನ್ನೊಂದು ನಾಯಿಯನ್ನು ಸಾಕಿದ್ದ ರೆಬೆಲ್ ಸ್ಟಾರ್ ಅದಕ್ಕೆ ಬುಲ್ ಬುಲ್ ಎಂದು ಹೆಸರಿಟ್ಟಿದ್ದರು. ಈ ಮೂಲಕ ಅಂಬರೀಶ್ ತಮ್ಮ ಚಿತ್ರದ ಬಹುಮುಖ್ಯ ಡೈಲಾಗ್ ಗಳನ್ನು ಸದಾ ನೆನಪಿಸಿಕೊಳ್ಳುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com